ಯಲ್ಲಾಪುರ: ಉನ್ನತ ಶಿಕ್ಷಣ ಪಡೆದು ವಿದೇಶಕ್ಕೆ ಹೋಗಿ ನೆಲೆಸಬೇಡಿ. ನಮ್ಮ ವೃತ್ತಿ, ಸೇವೆ ಏನೇ ಇದ್ದರೂ ಅದು ನಮ್ಮ ನೆಲಕ್ಕೇ ಸಿಗಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ| ವಿಜಯ ಸಂಕೇಶ್ವರ ಹೇಳಿದರು.
ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ 2023-24 ನೇ ಸಾಲಿನ “ಕಲಿಕಾ ಪ್ರಾರಂಭೋತ್ಸವ’ ಉದ್ಘಾಟಿಸಿ, ಡಾ| ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್‌ನ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ರ್‍ಯಾಂಕ್ ಗಳಿಕೆಯೊಂದೇ ಸಾಧನೆಯಲ್ಲ. ದೈವ ಭಕ್ತಿ, ಶೃದ್ಧೆ, ಎಲ್ಲ ಕೆಲಸಗಳನ್ನು ಮಾಡುವ ಉತ್ಸಾಹ, ಆಸಕ್ತಿ, ಶ್ರಮ ನಮ್ಮ ಸಾಧನೆಗೆ ಕಾರಣವಾಗುತ್ತದೆ. ಇದು ನನ್ನ ಅನುಭವದ ಮಾತು.
ಕೇವಲ ಪುಸ್ತಕದ ಹುಳುವಾದರೆಯಶಸ್ವಿಯಾಗಲು ಸಾಧ್ಯವಿಲ್ಲ. ದೊಡ್ಡದು, ಸಣ್ಣದು ಎಂಬ ಬೇಸರ ಮಾಡದೇ ಎಲ್ಲ ಕೆಲಸಗಳನ್ನು ಕಲಿಯುವ ಮನಸ್ಥಿತಿ ನಮ್ಮದಾಗಬೇಕು ಎಂದರು.
ಪಾಲಕರು ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಹೇರದೇ, ಪಠ್ಯದ ಜೊತೆ ಆಟ, ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಲು
ಅವಕಾಶ ನೀಡಬೇಕು. ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಗಮನ ಕೊಡಬೇಕು. ಜೀವನದ ಪ್ರತಿ ಕ್ಷಣವೂ ಅಮೂಲ್ಯ. ಸಮಯವನ್ನು ಪೋಲು ಮಾಡಬಾರದು. ಜೀವನದ ಕೊನೆಯ ಕ್ಷಣದವರೆಗೂ ಕಾಯಕದಲ್ಲಿ ತೊಡಗಿರಬೇಕು ಎಂಬುದು ನನ್ನ ಸಂಕಲ್ಪ ಎಂದರು.
Related Articles
ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ| ಕೆ.ಬಿ. ಗುಡಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ವಿಫಲವಾಗದಂತೆ ನೋಡಿಕೊಳ್ಳುವ ಹೊಣೆ ಶಿಕ್ಷಕರದಾಗಿದೆ ಎಂದರು.ಸಂಸ್ಥೆಯ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಬೈಂದೂರು ಶಾಸಕ ಹಾಗೂ ಸಂಸ್ಥೆಯ ನಿರ್ದೇಶಕ ಗುರುರಾಜ ಗಂಟಿಹೊಳೆ ಮಾತನಾಡಿ, ತಾಲೂಕಿನಲ್ಲಿ ವಿಶ್ವದರ್ಶನ ಹೊಸತನಕ್ಕೆ ಹೆಸರಾಗಿದೆ. ಉತ್ತಮ ಸಮಾಜ ನಿರ್ಮಾಣದ ಉದ್ದೇಶದಿಂದ ಸಂಸ್ಥೆ ನಡೆಯುತ್ತಿದೆ ಎಂದರು. ಸಂಸ್ಥೆಯ ಅಧ್ಯಕ್ಷ, ವಿಸ್ತಾರ ಮಿಡಿಯಾದ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ
ಉಪಾಧ್ಯಕ್ಷ ಶ್ರೀನಿವಾಸ ಹೆಬ್ಟಾರ್ ಉಪಸ್ಥಿತರಿದ್ದರು. ಡಾ| ದತ್ತಾತ್ರಯ ಗಾಂವ್ಕರ, ಆಸ್ಮಾ ಶೇಖ್, ಮಹಾದೇವಿ ಭಟ್ ನಿರ್ವಹಿಸಿದರು.