Advertisement
ಕುಡಿಯುವ ನೀರು ಸಂಗ್ರಹಿಸಲು ಬಿಂದಿಗೆ ಇಟ್ಟಿದ್ದ ಜುಬೇದಬೇಗಂ ಹಾಗೂ ಜಬೀನ್ ತಾಜ್ ಎಂಬವರು ವಿಚಲಿತರಾಗಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದಲೂ ಹುಳುಗಳು ಕಾಣಿಸಿ ಕೊಂಡಿರುವುದು ಬಡಾವಣೆಯ ಇತರರಿಂದ ಗೊತ್ತಾಗಿದೆ. ಪಟ್ಟಣದ ವಾಸಿಗಳಿಗೆ ಶುದ್ಧ ಕುಡಿವ ನೀರು ಲಭ್ಯವಾಗುತ್ತಿಲ್ಲ. ಪದೇ ಪದೆ ಕುಡಿಯುವ ನೀರಿನಲ್ಲಿ ಕಲ್ಮಶ ಕಾಣಿಸಿಕೊಳ್ಳುತ್ತವೆ. ಹುಳು, ಕೆಲವೊಮ್ಮೆ ಹಾವಿನ ಮರಿಗಳೂ ನೀರಿನಲ್ಲಿ ಬಂದಿರುವ ಉದಾಹರಣೆ ಇವೆ. ಕಾವೇರಿ ಕುಡಿಯುವ ನೀರು ಬಳೇಪೇಟೆಗೆ ಸರಬರಾಜೇ ಆಗುತ್ತಿಲ್ಲ. ಅಲ್ಲಿನ ನೀರು ಸರಿಯಾಗಿ ಶುದ್ಧೀಕರಿಸುವುದಿಲ್ಲ. ಅಲ್ಲಲ್ಲಿ ಪೈಪ್ ಒಡೆದರೂ ಇದರ ದುರಸ್ತಿ ಸೂಕ್ತ ಕಾಲದಲ್ಲಿ ಆಗುವುದಿಲ್ಲ. ಈಚೆಗೆ ಬಳೇಪೇಟೆಯ ಸರ್ಕಲ್‌ನಲ್ಲಿ 2 ಬಾರಿ ಪೈಪ್ ಒಡೆದು ದುರಸ್ತಿ ಮಾಡಲಾಗಿದೆ. ನೀರಿನೊಂದಿಗೆ ಇತರೆ ಕಲ್ಮಶ, ಕಲ್ಲು, ಮಣ್ಣು ಮಿಶ್ರಿತ ನೀರೂ ಸರಬರಾಜಾಗುತ್ತಿದೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂಬುದು ಇಲ್ಲಿನ ವಾಸಿಗಳಾ ಮನು, ಸುರೇಶ್ ಸೇರಿದಂತೆ ಹಲವರ ದೂರಾಗಿದೆ.
Related Articles
Advertisement