Advertisement

6ರಂದು ಯಳಂದೂರು ತಾಲೂಕು ಗ್ರಾಮೀಣ ದಸರಾ

04:25 PM Oct 04, 2019 | Team Udayavani |

ಸಂತೆಮರಹಳ್ಳಿ: ಅ.6 ರಂದು ಯಳಂದೂರು ಪಟ್ಟಣದಲ್ಲಿ ತಾಲೂಕು ಮಟ್ಟದ ಗ್ರಾಮೀಣ ದಸರಾ ನಡೆಸಲು ತಹಶೀಲ್ದಾರ್‌ ವರ್ಷಾ ನೇತೃತ್ವದಲ್ಲಿ ತೀರ್ಮಾನಿಸಲಾಯಿತು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿನಡೆದ ಸಭೆಯಲ್ಲಿ ಈ ಹಿಂದೆ ಸಭೆ ನಡೆಸಿ ಸೆ.30 ರಂದು ಗ್ರಾಮೀಣ ದಸರಾ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಚಾಮರಾಜನಗರದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮ ಇದ್ದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದಿನಾಂಕ ಬದಲಿಸಲು ತೀರ್ಮಾನಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಗ್ರಾಮೀಣ ದಸರಾ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರತಿ ತಾಲೂಕಿಗೂ 3 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕಾರ್ಯಕ್ರಮವನ್ನು ಗ್ರಾಮೀಣ ಸೊಗಡಿಗೆ ತಕ್ಕಂತೆ ಆಚರಿಸುವ ಅಗತ್ಯತೆ ಇದೆ. ಪ್ರತಿಯೊಬ್ಬರ ಭಾಗವಹಿಸುವಿಕೆ ಇದರಲ್ಲಿ ಮುಖ್ಯವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಯಲ್ಲೂ ಗ್ರಾಮೀಣ ದಸರಾ ಬಗ್ಗೆ ಪ್ರಚಾರ ಮಾಡಬೇಕು.  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಬೇಕು ಎಂದರು.

ಅಂದು ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ವಿವಿಧ ಕಲಾತಂಡಗಳೊಂದಿಗೆ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸುವುದು. ದಿವಾನ್‌ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಮುಂಭಾಗ ವೇದಿಕೆ ಕಾರ್ಯಕ್ರಮ ಆಯೋಜಿಸುವುದು. ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಇದಕ್ಕೂ ಮುಂಚೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸುವುದು. ಸರ್ಕಾರಿ ಇಲಾಖೆಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳನ್ನು ಸಾರುವ ಟ್ಯಾಬ್ಲೋಗಳನ್ನು ಮೆರವಣಿಗೆಗೆ ಮಾಡುವುದು, ಅಂಗನವಾಡಿ ಆಶಾ, ಕಾರ್ಯಕರ್ತೆಯರು, ಮಹಿಳಾ ಸಂಘಗಳ ಪ್ರತಿನಿಧಿ  ಗಳು, ಸ್ಕೌಟ್‌-ಗೈಡ್ಸ್‌, ಭಾರತ್‌ ಸೇವಾದಳಗಳ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರಿ ಕಚೇರಿ, ಬಳೇ ಮಂಟಪ ಸೇರಿದಂತೆ ವಿವಿಧಡೆ ವಿದ್ಯುತ್‌ ದೀಪಾಲಂಕಾರ ಮಾಡುವುದು ಪ್ರತಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೋಳುವುದು ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು.

Advertisement

ಜಿಪಂ ಸದಸ್ಯ ಜೆ.ಯೋಗೇಶ್‌, ತಾಪಂ ಅಧ್ಯಕ್ಷ ನಿರಂಜನ್‌, ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ವೆಂಕಟೇಶ್‌, ನಾಗರಾಜು, ನಂಜುಂಡಯ್ಯ, ಪಪಂ ಸದಸ್ಯರಾದ ಮಹೇಶ್‌, ವೈ.ಜಿ.ರಂಗನಾಥ, ಮಹಾದೇವನಾಯಕ, ಬಿಇಒ ವಿ.ತಿರುಮಲಾಚಾರಿ, ಉಪನೋಂದಣಾಧಿಕಾರಿ ರುದ್ರಯ್ಯ, ಸೆಸ್ಕ್ ಎಇಇ ಸುರೇಶ್‌ ಕುಮಾರ್‌, ಮಾಜಿ ಧರ್ಮದರ್ಶಿ ಎನ್‌. ದೊರೆಸ್ವಾಮಿ, ಎಚ್‌.ಬಿ. ಮಹಾದೇವಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next