Advertisement

ಜನತೆಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡಿ

03:12 PM Apr 10, 2020 | Naveen |

ಯಲಬುರ್ಗಾ: ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರದಾರರಿಗೆ ದವಸ ಧಾನ್ಯಗಳನ್ನು ತೊಂದರೆಯಾಗದಂತೆ ಉಚಿತವಾಗಿ ವಿತರಿಸಬೇಕು ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

Advertisement

ತಾಲೂಕಿನ ಬುಡಕುಂಟಿ, ಬುಕನಟ್ಟಿ, ಗುತ್ತೂರ, ವಣಗೇರಿ, ಚಿಕ್ಕವಂಕಲಕುಂಟಾ, ಉಪ್ಪಲದಿನ್ನಿ, ನಿಲೋಗಲ್‌, ಲಕಮನಗುಳೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಕೋವಿಡ್  ವೈರಸ್‌ ಹಿನ್ನೆಲೆ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೂ ಪರವಾನಗಿ ಪಡೆದ ಕಿರಾಣಿ ಅಂಗಡಿಯವರು ಅಗತ್ಯ ವಸ್ತುಗಳನ್ನು ಜನರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಜಾಗೃತಿ ವಹಿಸಬೇಕು. ಅಂತಹ ಪ್ರರಕರಣ ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪ್ರತಿ ಗ್ರಾಪಂ ವತಿಯಿಂದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಗ್ರಾಮಗಳ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್‌ ಹಾಗೂ ಔಷಧ ಸಿಂಪರಣೆಗೆ ಮುಂದಾಗಬೇಕು. ಎಲ್ಲ ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಪಿಡಿಒಗೆ ಸೂಚಿಸಿದರು.

ಗ್ರಾಮದ ಪ್ರತಿಯೊಬ್ಬರು ಆರೋಗ್ಯ ಇಲಾಖೆಯವರಿಗೆ, ಆಶಾ ಕಾರ್ಯ ಕರ್ತೆಯರಿಗೆ, ಪೊಲೀಸರಿಗೆ ಸಹಕಾರ ನೀಡಬೇಕು. ಗ್ರಾಮಕ್ಕೆ ಹೊರ ರಾಜ್ಯ, ಜಿಲ್ಲೆಯಿಂದ ಯಾರೇ ಬಂದರೂ ತಕ್ಷಣ ಆರೋಗ್ಯ ಇಲಾಖೆಯವರು ಪರೀಕ್ಷೆ ನಡೆಸಿ ಅವರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು. ಜನರು ಮನೆಯಿಂದ ಹೊರಗೆ ಬರದಂತೆ ಮನೆಯಲ್ಲಿ ಇದ್ದುಕೊಂಡು ಈ ವೈರಸ್‌ ತಡೆಗಟ್ಟಲು ಎಲ್ಲರೂ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next