Advertisement

ಯಕ್ಷೋತ್ಸವ: ಆಳ್ವಾಸ್‌ನ “ಮೋಕ್ಷ ಮೋಹರ’ ಪ್ರಥಮ

04:08 PM Feb 22, 2017 | Harsha Rao |

ಕೊಡಿಯಾಲ್‌ಬೈಲ್‌: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಆಶ್ರಯದಲ್ಲಿ  ಜರಗಿದ “ಯಕ್ಷೊತ್ಸವ- 2017′ ತೆಂಕು ತಿಟ್ಟಿನ ಅಂತರ್‌ ಕಾಲೇಜು  ಯಕ್ಷಗಾನ ಸ್ಪರ್ಧೆಯಲ್ಲಿ  ಮೂಡಬಿದಿರೆ ಆಳ್ವಾಸ್‌ ಕಾಲೇಜಿನ  “ಮೋಕ್ಷ ಮೋಹರ’ ಪ್ರಸಂಗ (ಪ್ರ), ಸುರತ್ಕಲ್‌ ಗೋವಿಂದದಾಸ್‌ ಕಾಲೇಜಿನ “ಸುಧನ್ವ ಮೋಕ್ಷ’ ಪ್ರಸಂಗ (ದ್ವಿ ), ಉಜಿರೆಯ ಎಸ್‌ಡಿಎಂ ಕಾಲೇಜು “ತರಣಿಸೇನ ಕಾಳಗ’ ಪ್ರಸಂಗ (ತೃ) ಸ್ಥಾನ ಪಡೆಯಿತು.

Advertisement

ಉತ್ತಮ ಪ್ರದರ್ಶನಕ್ಕೆ “ಸುಧನ್ವಾರ್ಜುನ’ದ ಪ್ರಭಾವತಿ ಪಾತ್ರಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಅನುಜ್ಞಾ ಭಟ್‌ ಹಾಗೂ ಮೋಕ್ಷ ಮೋಹರದ ಅರ್ಜುನ ಪಾತ್ರಕ್ಕೆ ಆಳ್ವಾಸ್‌ನ ಅಭಿಜಿತ್‌ ಎಚ್‌. ರಾವ್‌ (ಪ್ರ), ಸುಧನ್ವ ಮೋಕ್ಷದ ಸುಧನ್ವ ಪಾತ್ರಕ್ಕೆ ಗೋವಿಂದ ದಾಸ್‌ ಕಾಲೇಜಿನ ಶಿವಾನಿ (ದ್ವಿ) ಹಾಗೂ ತರಣಿ ಸೇನ ಕಾಳಗದ ಶ್ರೀ ರಾಮನ ಪಾತ್ರಕ್ಕೆ ಉಜಿರೆ ಎಸ್‌ಡಿಎಂ ಕಾಲೇಜಿನ ಅನುರಾಗ್‌ (ತೃ) ಸ್ಥಾನ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಸುರೇಶ್‌ ಬಲ್ಲಾಳ್‌ ಮಾತನಾಡಿ, ಯುವ ಪೀಳಿಗೆಯನ್ನು ಯಕ್ಷಗಾನದತ್ತ ಸೆಳೆಯುವು ದರೊಂದಿಗೆ, ಯಕ್ಷಗಾನದ ಬೆಳೆಗವಣಿಗೆಗೆ ಪೂರಕವಾದ ವಾತಾವರಣ ರೂಪಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ನಡೆಯಬೇಕು ಎಂದು ಹೇಳಿದರು
ಎರಡು ದಿನಗಳ ಯಕ್ಷೊàತ್ಸವದ ತೀರ್ಪುಗಾರ ರಾಗಿದ್ದ ಶಂಭು ಶರ್ಮ ವಿಟ್ಲ, ಕೃಷ್ಣಪ್ಪ ಗಟ್ಟಿ ಕೋಟೆಕಾರ್‌, ಮಾಧವ ನೆಟ್ಟಣಿಗೆ, ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ತಾರಾನಾಥ, ಉಪಪ್ರಾಂಶುಪಾಲೆ ಸೂಸಮ್ಮ ಥಾಮಸ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷ ಉತ್ತಯ್ಯ ಎ. ಡಿ., ವಿದ್ಯಾರ್ಥಿ ಸಂಚಾಲಕರಾದ ಅಶ್ವಿ‌ನ್‌ಕುಮಾರ್‌, ಸದಾನಂದ ಆಸ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.

ಪ್ರೊ|  ನರೇಶ್‌ ಮಲ್ಲಿಗೆಮಾಡು ಸ್ವಾಗತಿಸಿದರು. ಪ್ರೊ| ಸಾಯಿನಾಥ್‌ ಮಲ್ಲಿಗೆಮಾಡು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next