Advertisement

ಹೈದ್ರಾಬಾದ್‌ನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ “ಯಕ್ಷಾಷ್ಟಕಂ’ಸಂಪನ್ನ

10:04 PM Oct 06, 2019 | Sriram |

ಸಿರಿಬಾಗಿಲು: ಗಡಿನಾಡಿನ ಹೆಮ್ಮೆಯ ಸಾಂಸ್ಕೃತಿಕ ಕಲಾ ಸಂಸ್ಥೆ “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರ ಗೋಡು’ ಸಂಸ್ಥೆಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ಸಂಕಲ್ಪ ವನ್ನು ಜನರಿಗೆ ತಲುಪಿಸುವ ಉದ್ದೇಶ ದಿಂದ ತೆಲಂಗಾಣ ಹೈದ್ರಾಬಾದ್‌ ನಗರದಲ್ಲಿ ಕನ್ನಡ ನಾಟ್ಯರಂಗ ಹೈದ್ರಾಬಾದ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಸಂಸ್ಥೆಯ ಸಹಯೋಗ ದೊಂದಿಗೆ ವಿವಿಧ ಸಂಘಟನೆಗಳು ಹಾಗೂ ಕಲಾಪೋಷಕರ ಸಹಕಾರದೊಂದಿಗೆ 8 ದಿನಗಳ ಕಾಲ ಹೈದ್ರಾಬಾದ್‌ ನಗರದ ವಿವಿಧ ಸ್ಥಳಗಳಲ್ಲಿ ನಡೆಸಲಾಯಿತು. ಪ್ರತೀ ದಿನ ಸಂಜೆ ಗಂಟೆ 6ರಿಂದ “ಯಕ್ಷಾಷ್ಟಕಂ’ ಶೀರ್ಷಿಕೆಯಡಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ಹೈದ್ರಾಬಾದ್‌ ನಗರದ ಯಕ್ಷ ಪ್ರೇಮಿಗಳಿಂದ ಅಭೂತಪೂರ್ವ ಪ್ರೋತ್ಸಾಹ ದೊರೆತಿದ್ದು ಯಶಸ್ವಿಯಾಗಿ ಸಂಪನ್ನಗೊಂಡಿತು.

Advertisement

ಪ್ರಥಮ ಪ್ರದರ್ಶನ ಶ್ರೀ ರಾಘವೇಂದ್ರ ಸ್ವಾಮಿ ಮಠ ಅಲಕಾಪುರಿ ಮತ್ತು ಯಕ್ಷ ಪ್ರೇಮಿಗಳ ಪ್ರಾಯೋಜಕತ್ವದಲ್ಲಿ ಅಲಕಾಪುರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ “ಶಶಿಪ್ರಭಾ ಪರಿಣಯ’, ದ್ವಿತೀಯ ಪ್ರದರ್ಶನ ನರಸಿಂಹ ಶೆಟ್ಟಿ ಶಾದ್‌ ನಗರ ಹಾಗೂ ಕರುಣಾಕರ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ಕಾಚಿಗೂಡ ಲಿಂಗಂಪಲ್ಲಿಯಲ್ಲಿ “ಗದಾಯುದ್ಧ ರಕ್ತರಾತ್ರಿ’, ತೃತೀಯ ಪ್ರದರ್ಶನ ಶ್ರೀ ರಾಘವೇಂದ್ರ ಸ್ವಾಮಿ ಮಠ ಕಾಚಿಗೂಡ ಲಿಂಗಂಪಲ್ಲಿಯವರ ಪ್ರಾಯೋಜಕತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠ ಕಾಚಿಗೂಡ ಲಿಂಗಂಪಲ್ಲಿಯಲ್ಲಿ “ಶ್ರೀ ಕೃಷ್ಣ ಲೀಲಾಮೃತಂ’ ಚತುರ್ಥ ಪ್ರದರ್ಶನ ತೌಳವ ಸಮಾಜ ಸಿಕಂದರಾಬಾದ್‌ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಿಕಂದರಾಬಾದ್‌ ಶ್ರೀ ಕೃಷ್ಣ ಮಠದಲ್ಲಿ “ಭಸ್ಮಾಸುರ ಮೋಹಿನಿ’, ಪಂಚಮ ಪ್ರದರ್ಶನ ಬರಕತ್‌ ಪುರ ಶ್ರೀ ರಾಘವೇಂದ್ರ ಸ್ವಾಮಿ ಮಠ ಪ್ರಾಯೋಜಕತ್ವದಲ್ಲಿ ಬರಕತ್‌ ಪುರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ “ನಾಗೋದ್ಧರಣ’, ಷಷ್ಠ ಪ್ರದರ್ಶನ ಬಂಟರ ಸಂಘ ಹೈದ್ರಾಬಾದ್‌ ಹಾಗೂ ಯಕ್ಷಕಲಾ ಪ್ರೇಮಿಗಳ ಪ್ರಾಯೋಜಕತ್ವದಲ್ಲಿ ಶ್ರೀ ಪೂರ್ಣ ಬೋಧ ವಿದ್ಯಾ ಪೀಠ ಸಿಕಂದರಾಬಾದ್‌ನಲ್ಲಿ “ಭಕ್ತ ಪ್ರಹ್ಲಾದ’, ಸಪ್ತಮ ಪ್ರದರ್ಶನ ಕನ್ನಡ ನಾಟ್ಯರಂಗ ಹೈದ್ರಾಬಾದ್‌ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಂದರಯ್ಯ ಕಲಾನಿಲಯಂ ಬಾಗ್‌ ಲಿಂಗಂ ಪಲ್ಲಿಯಲ್ಲಿ “ಬೇಡರ ಕಣ್ಣಪ್ಪ’, ಅಷ್ಟಮ ಪ್ರದರ್ಶನ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಸುಪ್ರಭಾತ್‌ ಹೊಟೇಲ್‌ ಸಮೂಹ ಹೈದ್ರಾಬಾದ್‌ ಪ್ರಾಯೋಜಕತ್ವದಲ್ಲಿ ಶ್ರೀ ಶಂಕರ ಮಠ ನಲ್ಲಿಕುಂಟ ಹೈದ್ರಾಬಾದ್‌ನಲ್ಲಿ “ಏಕಾದಶಿ ದೇವಿ ಮಹಾತೆ¾ ನಡೆಯಿತು.

ಸಿರಿಬಾಗಿಲು ಪ್ರತಿಷ್ಠಾನದ ಗೌರವ ಮಾರ್ಗದರ್ಶಕ ಮಾರಣಕಟ್ಟೆ ಕೃಷ್ಣಮೂರ್ತಿ ಯವರು ಕಲಾ ತಂಡ ವನ್ನು ಆಹ್ವಾನಿಸಿ ಪ್ರೋತ್ಸಾಹಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಈ ಕಾರ್ಯಕ್ರಮ ಹೈದರಾಬಾದ್‌ ನಗರದ ಕಲಾ ಪೋಷಕರು ಕಲಾಭಿಮಾನಿಗಳ ಸಹಕಾರದೊಂದಿಗೆ ಯಶಸ್ವಿಯಾಯಿತು. ಸಹಸ್ರಾರು ಪ್ರೇಕ್ಷಕರು ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ತಂಡದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ದಿನೇಶ್‌ ಭಟ್‌ ಯಲ್ಲಾಪುರ, ಚಂಡೆ ದೇಲಂತ ಮಜಲು ಸುಬ್ರಹ್ಮಣ್ಯ ಭಟ್‌, ಮದ್ದಳೆ ಲವಕುಮಾರ್‌ ಐಲ, ಚಕ್ರತಾಳ ನಿಶ್ವತ್‌ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಗುಂಡಿಮಜಲು ಗೋಪಾಲ ಭಟ್‌, ಶಂಭಯ್ಯ ಭಟ್‌ ಕಂಜರ್ಪಣೆ, ಶ್ರೀ ವಿಷ್ಣು ಶರ್ಮ ವಾಟೆಪಡು, ಮಹೇಶ್‌ ಮಣಿಯಾಣಿ ದೊಡ್ಡತೋಟ, ಸುಬ್ರಹ್ಮಣ್ಯ ಭಟ್‌ ಪೆರುವೋಡಿ, ಶಶಿಕಿರಣ ಕಾವು, ರಾಜೇಶ್‌ ನಿಟ್ಟೆ, ಪ್ರಕಾಶ್‌ ನಾಯಕ್‌ ನೀರ್ಚಾಲು, ರಕ್ಷಿತ್‌ ರೈ ದೇಲಂಪಾಡಿ, ಅಕ್ಷಯ, ದಿನೇಶ, ಶ್ರೀಮುಖ ಭಾಗವಹಿಸಿದ್ದು, ಶ್ರೀ ಗಣೇಶ ಕಲಾ ವೃಂದ ಪೈವಳಿಕೆ ಸಂಸ್ಥೆ ವೇಷಭೂಷಣ ಪೂರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next