Advertisement

ನೀಲಕೋಡು ಶಂಕರ ಹೆಗಡೆಗೆ ಯಕ್ಷಮಿತ್ರರ ಗೌರವ

05:57 PM Aug 22, 2019 | mahesh |

ಬಡಗುತಿಟ್ಟಿನ ಯಕ್ಷ ರಂಗದಲ್ಲಿ ಬಹುತೇಕ ಪ್ರಸಿದ್ಧ ಸ್ತ್ರೀವೇಷ ಕಲಾವಿದರು ನೇಪಥ್ಯಕ್ಕೆ ಸಂದ ಕಾಲದಲ್ಲಿ ಯಕ್ಷ ರಂಗಕ್ಕೆ ಬಂದವರು ಸ್ತ್ರೀ ವೇಷಧಾರಿ ನೀಲಕೋಡು ಶಂಕರ ಹೆಗಡೆ. ಅವರನ್ನು ಕೃಷ್ಣಾಜನ್ಮಾಷ್ಟಮಿಯ ಸಂದರ್ಭದಲ್ಲಿ ಯಕ್ಷಮಿತ್ರರು ಟೌನ್‌ಹಾಲ್‌ ಅಜ್ಜರಕಾಡು ಉಡುಪಿ ಇವರ ಸಾರಥ್ಯದಲ್ಲಿ ಗೌರವಿಸಲಾಗುವುದು.

Advertisement

ನೀಲಕೋಡುರವರು ತೀವ್ರ ಆಸಕ್ತಿಯ ಯಕ್ಷಗಾನವನ್ನು ಕಲಿಯಲು ಶ್ರೀಮಯ ಕಲಾಕೇಂದ್ರ ಗುಣವಂತೆ ಕೆರೆಮನೆಯನ್ನು ಯಕ್ಷ ಶಿಕ್ಷಣಕ್ಕೆ ಆಯ್ದುಕೊಂಡರು. ಮುಂದೆ ಇವರನ್ನು ತಿದ್ದಿತೀಡಿದವರು ಯಕ್ಷಗುರುಗಳಾದ ಹೆರಂಜಾಲು ಗೋಪಾಲ ಗಾಣಿಗರು, ವಿದ್ವಾನ್‌ ಗಣಪತಿ ಭಟ್‌, ಹಾಗೂ ಎ. ಪಿ. ಪಾಠಕ್‌ ಇವರುಗಳು. ಕೆರೆಮನೆ ಮೇಳದ ತಿರುಗಾಟದ ಸಮಯದಲ್ಲಿ ಶಂಭುಹೆಗಡೆಯವರು ಇವರಿಗೆ ಮಾರ್ಗದರ್ಶಕರಾಗಿ ಪ್ರಾಪ್ತಿಯಾದುದು ಯಕ್ಷಗಾನ ಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ಅನುಕೂಲವಾಯಿತು.

ಕೆರೆಮನೆ, ಗುಂಡಬಾಳ, ಮಂದಾರ್ತಿ, ಕಮಲಶಿಲೆ, ಪೆರ್ಡೂರು, ಜಲವಳ್ಳಿ ಮೇಳಗಳಲ್ಲಿ ಒಟ್ಟು 24 ವರ್ಷ ಕಲಾವ್ಯವಸಾಯ ಮಾಡಿರುತ್ತಾರೆ. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಯಾಜಿ, ಧಾರೇಶ್ವರ, ಕೊಂಡದಕುಳಿ, ತೀರ್ಥಹಳ್ಳಿ ಮುಂತಾದ ಹಿರಿಯ ಕಲಾವಿದರ ಒಡನಾಟದಿಂದ ಕಲೆಯ ಅಳವನ್ನು ತಿಳಿಯಲು ಸಹಕಾರಿಯಾಯಿತು.

ಸ್ತ್ರೀ ವೇಷಕ್ಕೆ ಒಪ್ಪುವ ಆಳಂಗ, ಸ್ವರಭಾರ, ಭಾಷೆ, ಆಂಗಿಕಾಭಿನಯ ಸಹಿತ ಸ್ತ್ರೀ ಸಹಜ ಗುಣಲಕ್ಷಣಗಳು ಇವರ ಪಾತ್ರ ಚಿತ್ರಣದಲ್ಲಿ ಸೇರಿಕೊಂಡಿದೆೆ. ರಂಗನಡೆಯ ಸೂಕ್ಷ್ಮತೆಯ ಅಳವನ್ನರಿತ ನೀಲಕೋಡುರವರ ಭಸ್ಮಾಸುರ ಮೋಹಿನಿಯ ಮೋಹಿನಿ, ಸುಧಾನ್ವರ್ಜುನದ ಪ್ರಭಾವತಿ, ಚಂದ್ರಹಾಸ ಚರಿತ್ರೆಯ ವಿಷಯೇ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿವೆ.

ನಾಗವಲ್ಲಿ ಪ್ರಸಂಗದ ನಾಗವಲ್ಲಿ ಪಾತ್ರವು ಇವರಿಗೆ ತಾರಾಪಟ್ಟವನ್ನು ತಂದುಕೊಟ್ಟಿದೆ. ಆ ಪ್ರಸಂಗದಲ್ಲಿ ಇವರ ಭಾವಾಭಿನಯ ಮನೋಜ್ಞವಾಗಿತ್ತು. ಪುರುಷ ವೇಷವನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ.

Advertisement

ಶಂಕರ್‌ ಬಡಗಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next