Advertisement

ಯಕ್ಷಕೌಮುದಿ ಮಹಿಳಾ ಸಂಘ: ವಾರ್ಷಿಕೋತ್ಸವ ಸಮಾರಂಭ

02:02 PM Oct 05, 2017 | Team Udayavani |

ಕೆರೆಕಾಡು: ಮಹಿಳೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರಿದರೂ ಶೋಷಣೆ ಇನ್ನೂ ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಯ ಅಗತ್ಯವಿದೆ ಎಂದು ನಿಟ್ಟೆ ಎನ್‌.ಎ.ಎಂ. ಎಂ. ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಹೇಳಿದರು.

Advertisement

ಅವರು ಅ. 2 ರಂದು ಕೆರೆಕಾಡುವಿನಲ್ಲಿ ಯಕ್ಷ ಕೌಮುದಿ ಮಹಿಳಾ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ
ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಮ್ಮ ಸಂಘಟನೆಯ ಮಹಿಳೆಯರು ಹೆಣ್ಣು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿನಾಯಕ ಯಕ್ಷಕಲಾ ತಂಡದ ಕಾರ್ಯದರ್ಶಿ ರೇಶ್ಮಾ ಜಿ. ಬಂಗೇರ ಮಾತನಾಡಿ, ಯಕ್ಷಗಾನ ಕ್ಷೇತ್ರ ಗಂಡಸರಿಗೆ
ಮಾತ್ರ ಸೀಮಿತವಲ್ಲ. ಹೆಣ್ಣು ಮಕ್ಕಳು ಕೂಡ ಅದರಲ್ಲಿ ಸಾಧನೆ ಮಾಡಬಹುದು. ಇಲ್ಲಿನ ಮಕ್ಕಳ ಮೇಳದಲ್ಲಿ ಸುಮಾರು 20 ಹುಡುಗಿಯರು ಯಕ್ಷಗಾನ ಅರ್ಥಗಾರಿಕೆ, ವೇಷ ಹಾಕುವುದನ್ನು ತರಬೇತು ಪಡೆದು ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ಮಹಿಳಾ ಸಂಘಟನೆಯು ಉತ್ತಮ ಕೆಲಸಮಾಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ನಾಟಿ ವೈದ್ಯೆ ಸುಮತಿ ಪೂಜಾರಿ ಶಾಂತಿ ನಗರ ಅವರನ್ನು ಗೌರವಿಸಲಾಯಿತು.

ಕಿಲ್ಪಾಡಿ ಗ್ರಾಮ ಪಂಚಾಯತ್‌ ಸದಸ್ಯೆ ದಮಯಂತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಶಿಮಂತೂರು ರೇಖಾ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ಸ್ವಾಗತಿಸಿದರು. ಅನ್ವಿತಾ ಸಮ್ಮಾನ ಪತ್ರ ವಾಚಿಸಿದರು. ಪೂಜಾ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದವರಿಂದ ಪಾಂಚಜನ್ಯ ಯಕ್ಷಗಾನ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next