Advertisement

ಆಧುನಿಕ ವಿಚಾರಕ್ಕೆ ಯಕ್ಷಗಾನದ ಸ್ಪರ್ಷ :ಸುರಕ್ಷತೆಯ ಪಾಠ ಮಾಡಿದ ಸುರಕ್ಷಾ ವಿಜಯ

05:40 PM Apr 25, 2019 | mahesh |

ಪಣಂಬೂರಿನ ಕೆಐಓಸಿಎಲ್‌ ಸಂಸ್ಥೆಯ ಬ್ಲಾಸ್ಟ್‌ ಫ‌ರ್ನೆಸ್‌ ಯುನಿಟ್‌ ಸಭಾಂಗಣದಲ್ಲಿ ವಿಶ್ವ ಉಕ್ಕು ಸುರಕ್ಷತಾ ದಿನಾಚರಣೆಯ ಅಂಗವಾಗಿ ಕಾರ್ಖಾನೆಗಳಲ್ಲಿ ಸುರಕ್ಷತೆಯ ಸಂದೇಶ ಸಾರುವ “ಸುರಕ್ಷಾ ವಿಜಯ’ ಎಂಬ ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಲಾಯಿತು. ಜಂಟಿ ಮಹಾಪ್ರಬಂಧಕ ಟಿ.ಗಜಾನನ ಪೈ ಇವರ ಪ್ರೇರಣೆಯಿಂದ, ಸಂಸ್ಥೆಯ ಉದ್ಯೋಗಿ ಜಯಪ್ರಕಾಶ್‌ ಹೆಬ್ಟಾರ್‌ ರಚಿಸಿ ನಿರ್ದೇಶಿಸಿದ ಸುಮಾರು ಒಂದು ಗಂಟೆ ಅವಧಿಯ ಪ್ರಸಂಗ ಹೀಗೆ ಸಾಗುತ್ತದೆ:

Advertisement

ಸುರಕ್ಷಿತ ಮಹಾರಾಜ ಬಿಳಿ ಕುದುರೆಯನ್ನೇರಿ ತನ್ನ ಆಳ್ವಿಕೆಯಲ್ಲಿರುವ “ಅಶ್ವಪುರ’ಕ್ಕೆ ಬರುತ್ತಾನೆ. ಅಲ್ಲಿ ಪ್ರಜೆಗಳು ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೆ. ಆತನ ಆಳ್ವಿಕೆಯ ಪ್ರದೇಶ ಎಲ್ಲ ವಿಧಗಳಿಂದಲೂ ಸುಭಿಕ್ಷವಾಗಿರುತ್ತದೆ. ಎತ್ತ ನೋಡಿದರೂ ಪ್ರಕೃತಿಯ ಸೊಬಗು,ನದಿ, ತೊರೆಗಳು, ಪರಿಸರವನ್ನು ರಕ್ಷಿಸಲು ನೆಟ್ಟು ಬೆಳೆಸಿದ ಲಕ್ಷಾಂತರ ಸಸಿಗಳು ಹಚ್ಚ ಹಸಿರಾಗಿ ಬೆಳೆದು ನಿಂತಿದ್ದು ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತಿವೆ. ನೀರಿನ ಬವಣೆ ನೀಗಿಸಲು ಕಟ್ಟಿಸಿದ್ದ ಅಣೆಕಟ್ಟೆ ತುಂಬಿ ತುಳುಕುತ್ತಿರುತ್ತದೆ. ಪಕ್ಷಿಗಳ ಕಲರವ, ನಾಟ್ಯವಾಡುವ ನವಿಲುಗಳು, ಎಲ್ಲೆಲ್ಲೂ ಕಾಣ ಸಿಗುವ ಜಿಂಕೆ,ಮೊಲಗಳು ಸ್ವತ್ಛಂದವಾಗಿ ವಿಹರಿಸುತ್ತಿರುತ್ತವೆ.

ಸುರಕ್ಷಿತ‌ ಮಹಾರಾಜನ ರಾಜಧಾನಿಯಲ್ಲಿ ಒಂದು ಕಬ್ಬಿಣ ಅದಿರಿನ ಕಾರ್ಖಾನೆಯಿರುತ್ತದೆ. ಅಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದು,ª ಕಾರ್ಮಿಕರು ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಸಲಕರಣೆಗಳನ್ನು ಚಾಚೂ ತಪ್ಪದೆ ಉಪಯೋಗಿಸುತ್ತಿರುತ್ತಾರೆ.ಸುರಕ್ಷಿತ ಮಹಾರಾಜನು ಸುರಕ್ಷಾ ದೇವಿಯನ್ನು ನಿತ್ಯವೂ ಆರಾಧಿಸುತ್ತಿರುತ್ತಾನೆ.

ರಾಜ್ಯ ಸುಭಿಕ್ಷವಾಗಿರುವುದನ್ನು ಸಹಿಸಲಾರದೆ ಪ್ರಕೃತಿ ಹಾಗೂ ಮಾನವರ ಗುಣಧರ್ಮಗಳನ್ನು ನಾಶಮಾಡುವ ರಾಕ್ಷಸ “ನಾಶಾಸುರ’ ರಾಜ್ಯವನ್ನು ಪ್ರವೇಶಿಸಿ ಹಾಳುಮಾಡಬಹುದೆಂದು ರಾಜನ ಒಳ ಮನಸ್ಸು ಹೇಳುತ್ತದೆ. ಕಲಿಯುಗದಲ್ಲಿ ನಾಶಾಸುರನದೇ ದರ್ಬಾರು. ಈ ಯುಗದಲ್ಲಿ ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಾನೆ, ಬಡವ ಬಡವನಾಗಿಯೇ ಇರುತ್ತಾನೆ. ಶ್ರೀಮಂತ ಬಡವನಿಗೆ ಸಹಾಯ ಮಾಡುವುದಿಲ್ಲ. ಪೋಷಕರು ಅತಿ ಮುದ್ದಿನಿಂದ ಮಕ್ಕಳು ದಾರಿತಪ್ಪುತ್ತಾರೆ.ಮಾನವರು ಗುಣ ಧರ್ಮಗಳನ್ನು ಮರೆಯುತ್ತಾರೆ. ಹೀಗೆ ನಾಶಾಸುರ ಇತರರಲ್ಲಿ ಸೇರಿಕೊಂಡು ಅಟ್ಟಹಾಸ ಮೆರೆಯುತ್ತಾನೆ.

ಪ್ರಸಂಗದಲ್ಲಿ ಬರುವ ಮತ್ತೂಂದು ಪಾತ್ರ ವಿಚಿತ್ರಗುಪ್ತ. ಈತ ನಾಶಾಸುರನ ಗುಪ್ತಚರ ವಿಭಾಗದ ಮುಖ್ಯಸ್ಥ. ದೇಶದ ಮೂಲೆಮೂಲೆಗಳನ್ನು ಸುತ್ತಿ ವರದಿಯನ್ನು ಒಪ್ಪಿಸುವುದು ಈತನ ಕೆಲಸ. ದೇಶವನ್ನೆಲ್ಲಾ ಸುತ್ತಿ ಬಂದ ಈತ ವಿವಿಧ ಪ್ರದೇಶಗಳಲ್ಲಿ ತನಗಾದ ಅನುಭವಗಳನ್ನು ನಾಶಾಸುರನಲ್ಲಿ ಹಂಚಿಕೊಳ್ಳುತ್ತಾ, ಕೊನೆಗೆ ಘಟ್ಟ ಪ್ರದೇಶದಲ್ಲಿ ಕುದುರೆಮುಖದಂತೆ ಗೋಚರಿಸುವ “ಅಶ್ವಪುರ’ದ ಪ್ರಕೃತಿಯನ್ನು ಮತ್ತು ಅಲ್ಲಿರುವ ಹೇರಳವಾದ ಕಬ್ಬಿಣ ನಿಕ್ಷೇಪಗಳನ್ನು, ಸ್ವೇತ್ಛಚಾರದಿಂದಿರುವ ಪ್ರಾಣಿ,ಪಕ್ಷಿಗಳನ್ನು ವರ್ಣಿಸುತ್ತಾ, ಸುರಕ್ಷಿತ ರಾಜನ ಇದನ್ನು ಆಳುತ್ತಿದ್ದಾನೆ, ಅಲ್ಲಿಯ ಬಹಳಷ್ಟು ಕಾರ್ಮಿಕರು ಒಳ್ಳೆಯವರಾಗಿದ್ದಾರೆ. ಕೆಲವರು ಮಾತ್ರ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮೊಬೈಲ್‌ ಉಪಯೋಗಿಸುವುದು ಧೂಮಪಾನ,ಮದ್ಯಪಾನ, ತಂಬಾಕು ಸೇವನೆ, ಸಾಲ ಪಡೆದು ಹಿಂದಿರುಗಿಸದಿರುವುದು ಹೀಗೆ ಹತ್ತು ಹಲವು ವ್ಯಸನಗಳಿಗೆ ದಾಸರಾಗಿದ್ದು, ಕಾರ್ಮಿಕನ ಸುರಕ್ಷತೆಗಾಗಿ ನೀಡಲಾದ ಬೂಟು, ಹೆಲ್ಮೆಟ್‌ ಮೊದಲಾದ ಸುರಕ್ಷತಾ ಉಪಕರಣಗಳನ್ನು ಧರಿಸದೆ, ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಅಸಡ್ಡೆ ತೋರುತ್ತಿರುತ್ತಾರೆ. ಇವರೆಲ್ಲರೂ ಸರಿಯಾದ ದಾರಿಯಲ್ಲಿ ಸಾಗಿದಲ್ಲಿ ಈ ಕಾರ್ಖಾನೆ ಉದ್ಧಾರವಾಗುತ್ತದೆ ಎಂದು ವರದಿ ಸಲ್ಲಿಸುತ್ತಾನೆ. ಕಾರ್ಮಿಕರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನು ಮೂಡಿಸಿ ಹಾಳು ಮಾಡಲು ನಾಶಾಸುರ ಕಾರ್ಯಪ್ರವೃತ್ತನಾಗುತ್ತಾನೆ

Advertisement

ನಾಶಾಸುರ ತನ್ನ ರಾಜ್ಯವನ್ನು ಪ್ರವೇಶಿಸಿರುವುದನ್ನು ಅರಿತ ಸುರಕ್ಷಿತ ಮಹಾರಾಜ ಸುರಕ್ಷಾ ದೇವಿಯನ್ನು ಪಾರ್ಥಿಸಿದಾಗ ದೇವಿ ಪ್ರತ್ಯಕ್ಷಳಾಗುತ್ತಾಳೆ. ಸುರಕ್ಷಿತ ಮಹಾರಾಜ ಕಾಪಾಡೆಂದು ದೇವಿಯಲ್ಲಿ ಪ್ರಾರ್ಥಿಸುತ್ತಾನೆ.ತನ್ನನ್ನು ನಂಬಿದವರನ್ನು ಎಂದೆಂದಿಗೂ ಕಾಪಾಡುತ್ತಲೇ ಇರುತ್ತೇನೆಂದು ಅಭಯ ನೀಡಿದ ಸುರಕ್ಷಾ ದೇವಿ ನಾಶಾಸುರನನ್ನು ಸಂಹರಿಸುವುದರೊಂದಿಗೆ ಪ್ರಸಂಗ ಸಮಾಪ್ತಿಯಾಗುತ್ತದೆ.ಜಯಪ್ರಕಾಶ ಹೆಬ್ಟಾರ್‌ (ನಾಶಾಸುರ),ದಿನೇಶ್‌ ಆಚಾರ್‌ ಕೊಕ್ಕಡ(ಸುರಕ್ಷಾ ದೇವಿ), ದಿನಕರ ಗೋಖಲೆ(ಸುರಕ್ಷಿತ ಮಹಾರಾಜ), ಪೆರುವೊಡಿ ಸುಬ್ರಹ್ಮಣ್ಯ ಭಟ್‌( ವಿಚಿತ್ರ ಗುಪ್ತ) ಹಿತಮಿತವಾಗಿ ಪಾತ್ರ ನಿರ್ವಹಣೆ ಮಾಡಿದರುಹಿಮ್ಮೇಳದಲ್ಲಿ ಭವ್ಯಶ್ರೀ ಹರೀಶ್‌ ( ಭಾಗವತರು),ಸ್ಕಂದ ಕೊನ್ನಾರ್‌ (ಚೆಂಡೆ),ಮಾ| ವರುಣ್‌ ಹೆಬ್ಟಾರ್‌(ಮದ್ದಳೆ), ಅಭಿಜಿತ್‌ ಸೋಮಯಾಜಿ(ಚಕ್ರತಾಳ) ಸಹಕರಿಸಿದರು.

ಜಿ.ನಾಗೇಂದ್ರ ಕಾವೂರು

Advertisement

Udayavani is now on Telegram. Click here to join our channel and stay updated with the latest news.

Next