Advertisement
ಸಾಂಪ್ರದಾಯಿಕವಾಗಿ ಶತ್ರುಘ್ನ , ಚಂದ್ರಕೇತು ಮುಂತಾದವರ ತೆರೆ ಕುಣಿತದಿಂದ ಪ್ರಸಂಗ ಪ್ರಾರಂಭ.ಲವಲವಿಕೆಯ ಲವನಾಗಿ ವಿನಯಾ ಅನಂತಕೃಷ್ಣ ಚುರುಕಿನ ನಾಟ್ಯ,ಮಂಡಿ,ಗಿರಕಿಗಳಿಂದ ವೃತ್ತಿಪರ ಕಲಾವಿದರಿಗೆ ಸರಿಸಾಟಿಯಾಗಿ ಅಭಿನಯಿಸಿದರು.ಕುಶನಾಗಿ ಕೌಶಲ್ಯವನ್ನು ಮೆರೆದವರು ಸುವರ್ಣ ಬದ್ರಿಪ್ರಸಾದ್ .ಬಡಗಿನ ಸಂಪ್ರದಾಯ ಬದ್ಧವಾದ ನಾಟ್ಯಗಳಿಂದ ಬೆರಗು ಮೂಡಿಸಿದರು. ಶತ್ರುಘ್ನನಾಗಿ ಗಾಂಭೀರ್ಯದ ನಡೆ-ನುಡಿ,ಗತ್ತುಗಾರಿಕೆಯಿಂದ ಮೆರೆದವರು ಜ್ಯೋತಿ ಸುನೀಲ…. ಲಕ್ಷ್ಮಣನಾಗಿ ಲಕ್ಷಣವಾಗಿ ಕಾಣಿಸಿಕೊಂಡವರು ಮಂಜುಳಾ ಭಟ್.ರಾಮನಾಗಿ ರಮಾ ಗೋಪಾಲಕೃಷ್ಣ ಕ್ರೋಧ,ಶಾಂತ,ಕರುಣ ರಸವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.ಸೀತೆಯಾಗಿ ಸುಮತಿ ನಿರಂಜನ್ ಉತ್ತಮವಾಗಿ ಅಭಿನಯಿಸಿದರು.ಆಂಗಿಕ ಅಭಿನಯ,ಆಹಾರ್ಯದಿಂದ ಹಾಸ್ಯ ರಸವನ್ನು ಉಣಬಡಿಸಿದವರು ಮಮತಾ ರಘುಪತಿ. ಮುನಿ ವಾಲ್ಮೀಕಿಯಾಗಿ ರಘುಪತಿ ಭಟ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಯಕ್ಷಗಾನವೇ ನರನಾಡಿಗಳಲ್ಲಿ ಹರಿಯುತ್ತಿದೆ.ಒಂದು ಅವಕಾಶಕ್ಕಾಗಿಯೇ ಕಾಯುತ್ತಿದ್ದೆವು ಎಂದು ತೋರ್ಪಡಿಸಿಕೊಟ್ಟದ್ದು ಚಂದ್ರಕೇತುವಾಗಿ ಅಭಿನಯಿಸಿದ ಪ್ರಣವ್ ಬೆಳ್ಮಣ್ಣು ಮತ್ತು ಕುಮಾರಿ ನೇಹಾರ ಅಭಿನಯ. ಲವನ ಸಹಪಾಠಿಗಳಾಗಿ ಕೌಸ್ತುಭ ಬೆಳ್ಮಣ್ಣು ಮತ್ತು ಆದಿ ಶಂಕರ ತಾವು ಉದಯೋನ್ಮುಖ ಕಲಾವಿದರೆಂಬುದನ್ನು ಶ್ರುತ ಪಡಿಸಿದರು.ಅಶ್ವವಾಗಿ ಸಹಕರಿಸಿದವರು ಮಾ| ಅಕ್ಷತ್ ಮತ್ತು ಡಾ| ಮಹದೇವ್ ಭಟ್. ಮದ್ದಲೆಗಾರರಾದ ಸಕ್ಕಟ್ಟು ರಾಘವೇಂದ್ರ ಭಟ್ ಶಿಬಿರಾರ್ಥಿಗಳಿಗೆ ಒಂದು ವಾರದ ಕಾಲ ಪ್ರಸಂಗದ ನಡೆಯನ್ನು ಹೇಳಿಕೊಟ್ಟರು.ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕರೆದೊಯ್ದವರು ಭಾಗವತರಾದ ಉದಯ ಕುಮಾರ್ ಹೊಸಾಳ.ಉದಯ ಕುಮಾರ್ ಐರೋಡಿ ಚೆಂಡೆಯಲ್ಲಿ ಸಹಕರಿಸಿದರು.
Advertisement
ಭಾಗ್ಯನಗರದಲ್ಲಿ ಯಕ್ಷಗಾನದ ಕಂಪು
06:23 PM Nov 21, 2019 | mahesh |
Advertisement
Udayavani is now on Telegram. Click here to join our channel and stay updated with the latest news.