Advertisement

ಯಕ್ಷಗಾನ ಪರಿಪೂರ್ಣ ಕಲೆ: ಅಶ್ವಿ‌ನಿ ಕೊಂಡದಕುಳಿ

01:17 AM May 07, 2019 | sudhir |

ತೆಕ್ಕಟ್ಟೆ: ಅಬ್ಬರದ ವೇಷಭೂಷಣ, ಪ್ರಬುದ್ಧ ಮಾತುಗಾರಿಕೆ, ನೃತ್ಯ, ಹಾವ-ಭಾವ-ತಾಳ-ಅಭಿನಯನ್ನು ಒಳಗೊಂಡಿರುವ ಯಕ್ಷ ಕಲೆ ವಿಶಿಷ್ಟ, ಪರಿಪೂರ್ಣ ಕಲಾ ಪ್ರಾಕಾರ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಕಲಾವಿದೆ ಅಶ್ವಿ‌ನಿ ಕೊಂಡದಕುಳಿ ಹೇಳಿದರು.

Advertisement

ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ರಜಾರಂಗು 2019 ಇದರ 25ನೇ ದಿನದ ಜ್ಞಾನ ರಂಜನಾ ಶಿಬಿರದಲ್ಲಿ ಯಕ್ಷದೇಗುಲ ಬೆಂಗಳೂರು ವತಿಯಿಂದ ನಡೆದ ಯಕ್ಷಗಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರಾರ್ಥಿಗಳಿಗೆ ರಂಗದಲ್ಲಿ ಚೌಕಿ ಮನೆಯಲ್ಲಿ ವೇಷ ತಯಾರಾಗುವ ಬಗೆ ರಂಗದಲ್ಲಿಯೇ ತೋರಿಸುವ ಮೂಲಕ ಅಭಿನಯದಲ್ಲಿ ಪ್ರವೇಶ, ಮುದ್ರೆಗಳು, ತಾಳಗಳು, ಯಾವ ವೇಷಗಳನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ತರಬೇತಿ ನೀಡಲಾಯಿತು.

ಯಕ್ಷದೇಗುಲ ಬೆಂಗಳೂರು ಇದರ ಸಂಘಟಕ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಸುಜಯೀಂದ್ರ ಹಂದೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ್‌ ವೈದ್ಯ, ಹೆರಿಯ ಮಾಸ್ಟರ್‌, ಛಾಯಾಚಿತ್ರಗ್ರಾಹಕ ಪಾಂಡುರಂಗ ಕೊಮೆ ಉಪಸ್ಥಿತರಿದ್ದರು.

ಪ್ರಣಮ್ಯಾ ಸ್ವಾಗತಿಸಿಸಿದರು. ನಿಶಾ ಮಲ್ಯಾಡಿ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next