ಹಾಗೆ ನೋಡಿದರೆ ಹಿಂದಿನ ಯಕ್ಷಗಾನದಿಂದ ಈಗಿನದರಲ್ಲಿ ತುಂಬಾ ಬದಲಾವಣೆ ಕಾಣುತ್ತಿ ದ್ದೇವೆ. ಹಿಂದೆಲ್ಲ ದೊಂದಿ ಬೆಳಕಿನಲ್ಲಿ, ಧ್ವನಿವರ್ಧಕಗಳಿಲ್ಲದೆ ನಡೆಯುತ್ತಿದ್ದ ಯಕ್ಷಗಾ ನವು ಈಗ ಆಕರ್ಷಕ ವಿದ್ಯುತ್ ದೀಪಗಳಲ್ಲಿ ಧ್ವನಿವರ್ಧಕ ಬಳಸಿಯೇ ನಡೆಯುತ್ತಿದೆ. ಇವೆ ರಡು ಇಲ್ಲದೆ ಈಗ ಯಕ್ಷಗಾನ ಪ್ರದರ್ಶನ ಸಾಧ್ಯವೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಇದು ಅಭಿವೃದ್ಧಿಯ ಬದಲಾವಣೆ ಎಂದು ಸುಮ್ಮನಿ ದ್ದರೂ, ಬೇರೆಯೂ ಕೆಲವು ಮಹತ್ತರ ಬದಲಾವಣೆಗಳು ಈ ಕಲೆಯಲ್ಲಿ ಆಗಿರುವುದನ್ನು ನಾವು ಕಾಣಬಹುದು.
Advertisement
ಹಿಂದೆಲ್ಲ ಯಕ್ಷಗಾನದಿಂದ ಮಹಿಳೆಯರು ತುಂಬಾ ದೂರವಿದ್ದರು. ಪ್ರೇಕ್ಷಕರ ಸಾಲಿನಲ್ಲೂ ಮಹಿಳೆಯರ ಸಂಖ್ಯೆ ಕಡಿಮೆಯಿತ್ತು. ಕಲಾವಿದರ ವಿಷಯದಲ್ಲಿ ಶೂನ್ಯ ಎಂಬಂತಿತ್ತು. ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ಮಹಿಳೆ ಯರೂ ಯಕ್ಷಗಾನದಲ್ಲಿ ತಿರುಗಾಟ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟರು. ಆಗ ಅದೊಂದು ದೊಡ್ಡ ಸಂಗತಿಯಾಗಿತ್ತು. ಮಹಿಳಾ ಭಾಗವತರಂತೆ ಎಂಬ ಕುತೂಹಲದ ಮಾತು ಎಲ್ಲರಿಂದಲೂ ಕೇಳಿ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆಯರು ಯಕ್ಷಗಾನದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಿಮ್ಮೇಳ, ಮುಮ್ಮೇಳದಲ್ಲೂ ಮಹಿಳೆಯರು ತಮ್ಮದೇ ಆದಂ ಥ ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಯಕ್ಷಗಾನ ತಂಡಗಳ ಸಂಖ್ಯೆ ಯೂ ಅಪಾರವಿದೆ. ತಾಳಮದ್ದಳೆ ಕೂಟದಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ.
Related Articles
Advertisement
ಕಾಲಮಿತಿಯ ವಿಷಯಕ್ಕೆ ಬಂದಾಗ ನಾವು ಸಾಕಷ್ಟು ಟೀಕೆಗಳನ್ನು ಕೇಳಿದ್ದೇವೆ. ಕಾಲಮಿತಿಯು ಯಕ್ಷಗಾನಕ್ಕೆ ಮಾರಕ ಎಂದು ಹೇಳಿದವರೇ ಹೆಚ್ಚು. ಆದರೆ ಹಿಂದೆಲ್ಲ ದೇವಿ ಮಹಾತೆ¾ಯಂಥ ಕೆಲವು ಪ್ರಸಂಗಗಳು 2-3 ದಿನಗಳ ಕಾಲ ನಡೆಯುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಅದು ಬದ ಲಾಗಿ, ಕಿರಿದಾಗಿ ಒಂದು ರಾತ್ರಿಗೆ ಸೀಮಿತವಾಯಿತು. ಈಗ ಅದನ್ನೇ 5-6 ತಾಸುಗಳಿಗೆ ಇಳಿಸಲಾಗಿದೆ. ಇದರಿಂದ ಯಕ್ಷಗಾನಕ್ಕೆ ಏನೂ ಚ್ಯುತಿ ಆಗುವುದಿಲ್ಲ ಎಂಬ ವಾದ ಈಗ ಹೆಚ್ಚು ಪ್ರಬಲವಾಗಿದೆ. ಕಾಲಮಿತಿಯನ್ನು ಪ್ರೇಕ್ಷಕರು ಹಾಗೂ ಕಲಾವಿದರು ಸ್ವೀಕರಿಸಿ, ಒಪ್ಪಿಕೊಂಡಾಗಿದೆ. ರಾತ್ರಿ ಪೂರ್ತಿ ಆಟ ಎನ್ನು ವುದು ಯಾವಾಗ ಇತಿಹಾಸದ ಪುಟಕ್ಕೆ ಸೇರಲಿದೆಯೇ ಹೇಳಲಾಗದು. ಕಾಲ ಮಿತಿಯ ಪ್ರದರ್ಶನ ಕಲಾವಿದರ ಆರೋಗ್ಯದ ವಿಷಯದಲ್ಲೂ ಉತ್ತಮ ನಿರ್ಧಾರ ಎನ್ನಲಾಗುತ್ತಿದೆ. ಸರಕಾರದ ಧ್ವನಿವರ್ಧಕ ನಿಯಮವನ್ನು ಪಾಲಿಸಿ ರಾತ್ರಿಯಿಡೀ ಯಕ್ಷಗಾನ ನಡೆಸುವುದು ಕಷ್ಟಸಾಧ್ಯವೇ ಎನ್ನುವಂಥ ಪರಿಸ್ಥಿತಿ ಈಗಿದೆ.
ಯಕ್ಷಗಾನವು ಪ್ರತಿಯೊಂದು ಬದಲಾವಣೆಯನ್ನು ಕಂಡಾಗಲೂ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ಆದರೆ ದಿನದಿಂದ ದಿನಕ್ಕೆ ಯಕ್ಷಗಾನವು ತನ್ನ ಪ್ರಗತಿ ಹಾಗೂ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದನ್ನು ಗಮನಿಸುವಾಗ ಇದುವರೆಗೆ ಆಗಿರುವ ಎಲ್ಲ ಬದಲಾವಣೆಗಳೂ ಯಕ್ಷಗಾನಕ್ಕೆ ಒಳಿತನ್ನೇ ಮಾಡಿದೆ ಎಂದು ಹೇಳಬಹುದು. ಯುವಜನಾಂಗವನ್ನೂ ಈಗ ಯಕ್ಷಗಾನ ಸೆಳೆಯುತ್ತಿರುವುದು ಒಂದು ಅತೀ ದೊಡ್ಡ ಪೂರಕ ಬದಲಾವಣೆ.
ಇದನ್ನೆಲ್ಲ ಗಮನಿಸುವಾಗ ಯಕ್ಷಗಾನದ ಬದಲಾವಣೆ, ಅದರಲ್ಲಿ ಆಗುತ್ತಿರುವ ಸುಧಾರಣ ಕ್ರಮಗಳನ್ನು ಟೀಕಿಸುವ ಮೊದಲು ನಾವು ಸಾಕಷ್ಟು ಚಿಂತಿಸುವುದು ಅಗತ್ಯ. ಯಕ್ಷಗಾನ ಎಂಬುದು ಸಮುದ್ರವಿದ್ದಂತೆ. ಬದಲಾ ವಣೆಯಾಗದ ಯಾವ ಕ್ಷೇತ್ರವೂ ಈ ಸಮಾಜದಲ್ಲಿಲ್ಲ. ಅದನ್ನು ನಾವು ಹೇಗೆ ಸ್ವೀಕರಿಸಿಕೊಳ್ಳುತ್ತೇವೆ ಎಂಬುದರಲ್ಲಿ ಅದರ ಯಶಸ್ಸು ಅಡಗಿದೆ. ಪರಂಪರೆ ಹೆಸರಲ್ಲಿ ಬದಲಾವಣೆಯನ್ನು ನಿರ್ಬಂಧಿಸಲು ಸಾಧ್ಯವೂ ಇಲ್ಲ, ಅಂಥ ಕ್ರಮ ಸೂಕ್ತವೂ ಅಲ್ಲ. ಹಾಗೆಂದು ಮೂಲಕ್ಕೆ ಧಕ್ಕೆ ಬರದಂತೆ ಎಚ್ಚರದಿಂದಿರುವುದು ಕೂಡ ಅಷ್ಟೇ ಅಗತ್ಯ.
ಪುತ್ತಿಗೆ ಪದ್ಮನಾಭ ರೈ