Advertisement

ಯಕ್ಷಗಾನ ನಿತ್ಯ ನೂತನವಾಗಿರುವ ಕಾವ್ಯ: ಹರಿನಾರಾಯಣ ಆಸ್ರಣ್ಣ

07:40 AM Jul 31, 2017 | |

ಕಾರ್ಕಳ: ಪ್ರತಿದಿನವೂ ಹೊಸತಾಗುವ ಕಲೆ ಅಂದರೆ ಯಕ್ಷಗಾನ. ಇದು ನಿತ್ಯ ಕಾವ್ಯ, ನಿತ್ಯವೂ ಹಸಿರಾಗಿಯೇ ಇರುವ ಕಾವ್ಯ ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.

Advertisement

ಅವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಕಾರ್ಕಳ ಮಾರಿಗುಡಿಯಲ್ಲಿ ಸಂಯೋಜಿಸಿದ ಎರಡು ದಿನಗಳ “ಯಕ್ಷಗಾನ ಕಲಾಸಂಭ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

ಕಾವ್ಯ ಹಾಗೂ ಕಲೆಗೆ  ಪೌರಾಣಿಕ ಮಹತ್ವವಿದೆ. ಯಕ್ಷಗಾನ ಹಲವು ಕಾಲಗಳನ್ನು ಗೆದ್ದು ಬಂದ ಕಲೆ. ಇತ್ತೀಚಿನ ದಿನಗಳಲ್ಲಿ ಈ ಕಲೆಗೆ ಅಕಾಡೆಮಿ ವತಿಯಿಂದ ಇನ್ನಷ್ಟು ಚೈತನ್ಯ ದೊರಕಿದೆ ಎಂದರು.

ಬಲಿಪ ನಾರಾಯಣ ಭಾಗವತ ಸಾಕ್ಷéಚಿತ್ರವನ್ನು ಬಿಡುಗಡೆಗೊಳಿಸಿದ ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಆಧುನಿಕ ಕಾಲದಲ್ಲಿಯೂ ಯುವಕರು ಯಕ್ಷಗಾನದಲ್ಲಿ ತೊಡಗಿಕೊಂಡಿರುವುದು ಸಂತಸದ ವಿಚಾರ, ಅಕಾಡೆಮಿಯಿಂದ ಈ ಕಲೆಯನ್ನು ಯುವಕರಿಗೆ ಹಸ್ತಾಂತರಿಸುವ ಕೆಲಸವಾಗಬೇಕು ಎಂದರು.

ಈ ಸಂದರ್ಭ ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸಲಾಯಿತು.ಕಾರ್ಕಳ ಯಕ್ಷಕಲಾರಂಗದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ,ಸಕ್ಕಟ್ಟು ಲಕ್ಷ್ಮೀನಾರಾಯಣ ಅವರ ಮಾಸದ ಬಣ್ಣ ಕೃತಿ ಬಿಡುಗಡೆ ಮಾಡಿದರು.

Advertisement

ಯಕ್ಷಗಾನ ಅಕಾಡೆಮಿಯ ಸದಸ್ಯ ಕಿಶನ್‌ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, 32 ಜಿಲ್ಲೆಗಳಲ್ಲಿ ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದರು.ಅಕಾಡೆಮಿ ಸದಸ್ಯ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸದಸ್ಯ ಪ್ರೊ| ಪದ್ಮನಾಭ ಗೌಡ ಶುಭಾಶಂಸನೆ ಮಾಡಿದರು.

ತಾರಾನಾಥ ವರ್ಕಾಡಿ ಬಲಿಪ ಗೌರವ ನಮನ ಸಲ್ಲಿಸಿದರು.ಡಾ| ಸಿ. ಪಿ. ಅಧಿಕಾರಿ ಸಕ್ಕಟ್ಟು ಅವರಿಗೆ ಗೌರವ ನಮನ ಸಲ್ಲಿಸಿದರು.ಶಿವರುದ್ರಪ್ಪ ಸ್ವಾಗತಿಸಿದರು. ಕಾಂತಾವರ ಮಹಾವೀರ ಪಾಂಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next