ಕೋಟ: ಯಕ್ಷಗಾನದ ಅಭ್ಯಾಸ ಹಾಗೂ ನಿರಂತರವಾಗಿ ನೋಡುವುದರಿಂದ ಭಾಷೆಯ ಮೇಲಿನ ಹಿಡಿತ ಹೆಚ್ಚುವುದು ಹಾಗೂ ಒಳ್ಳೆಯ ಮಾತುಗಾರಿಕೆ ಬೆಳೆಯುತ್ತದೆ ಎಂದು ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಹೇಳಿದರು.
ಅವರು ಎ.11ರಿಂದ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಆಶ್ರಯದಲ್ಲಿ ಸಾಲಿಗ್ರಾಮದಲ್ಲಿರುವ ಕೇಂದ್ರದ ಸದಾನಂದ ರಂಗಮಂಟಪದಲ್ಲಿ ಆರಂಭಗೊಂಡ “ನಲಿಕುಣಿ’ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ಮಾತನಾಡಿ, ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಶಿಬಿರಗಳು ಎಲ್ಲ ಕಡೆ ನಡೆಯಲಿ ಎಂದರು.
ಯಕ್ಷಗುರು ಸದಾನಂದ ಐತಾಳ ಕಲೆಯ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಬೈಕಾಡಿ ಶ್ರೀನಿವಾಸ್ ರಾವ್, ಗುರುಗಳಾದ ಮುಂಡಾಡಿ ಬಸವ ಮರಕಾಲ, ನರಸಿಂಹ ತುಂಗ, ಕೇಶವ ಆಚಾರ್ ಉಪಸ್ಥಿತರಿದ್ದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಟಾರ್ ಸ್ವಾಗತಿಸಿ, ಕೊಳ್ಕೆಬೈಲು ಬ್ರಹ್ಮಬಂಟ ಶಿವರಾಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಅಶೋಕ್ ಆಚಾರ್ ಸಾೖಬ್ರಕಟ್ಟೆ ನಿರೂಪಿಸಿ, ಚಂಡೆಯ ಗಂಡುಗಲಿ ಕೋಟ ಶಿವಾನಂದ ವಂದಿಸಿದರು.