Advertisement

ಯಕ್ಷಗಾನ ನಾಟ್ಯ ತರಬೇತಿ, ಮಕ್ಕಳ ರಂಗಭೂಮಿ ಉದ್ಘಾಟನೆ

01:00 AM Dec 14, 2018 | Team Udayavani |

ಕಟಪಾಡಿ: ಯಕ್ಷಗಾನ ಮತ್ತು ನಾಟಕ ರಂಗಭೂಮಿಗೆ ಬೇಕಾದ ಹಲವು ಚಟುವಟಿಕೆಗಳು ಯಕ್ಷಗಾನದಲ್ಲಿ ಸಮೃದ್ಧವಾಗಿ ಕಾಣುತ್ತವೆ. ಗಾಯನ- ವಾದನ- ನರ್ತನ, ಪೂರ್ವ ರಂಗದಲ್ಲಿ 6ವಿಧಗಳ ರಂಗಾರ್ಚನೆಗಳನ್ನೊಳಗೊಂಡಿರುವ ಯಕ್ಷಗಾನವು ಕೇವಲ ಮನೋರಂಜನೆಗಾಗಿ ಇರದೆ ಆದಿ ಹಾಗೂ ಅಂತ್ಯಗಳಲ್ಲಿ ಆರಾಧನೆಯಲ್ಲಿ ಸಂಪನ್ನವಾಗುವ ಸುಂದರ ಆರಾಧನಾ ಕಲೆಯಾಗಿದೆ ಎಂದು ಜಾನಪದ ಸಂಶೋಧಕ ಕೆ.ಎಲ್‌. ಕುಂಡಂತಾಯ ಹೇಳಿದರು.

Advertisement

ಅವರು ರವಿವಾರ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗಣೇಶ ರಾವ್‌ ಎಲ್ಲೂರು ಸಾರಥ್ಯ, ನಿರ್ದೇಶನ ಮತ್ತು ಸಂಯೋಜನೆಯ ಸ್ನೇಹಜೀವಿ ಉಡುಪಿ ಇದರ ಯಕ್ಷಗಾನ ನಾಟ್ಯ ತರಬೇತಿ ಮತ್ತು ಮಕ್ಕಳ ರಂಗಭೂಮಿಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎರ್ಮಾಳು, ಹಿರಿಯ ರಂಗನಟ, ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್‌. ಭಟ್‌ ಮಾತನಾಡಿದ‌ರು.

ದೇವಸ್ಥಾನದ ಧರ್ಮದರ್ಶಿ ನವೀನ್‌ ಆಚಾರ್ಯ ಪಡುಬಿದ್ರಿ ಮತ್ತು ಪ್ರಬಂಧಕ ರಮೇಶ್‌ ಆಚಾರ್ಯ ಕಾಪು ಅವರನ್ನು ಸಮ್ಮಾನಿಸಲಾಯಿತು. ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟ ಗೌರವಾಧ್ಯಕ್ಷ ಯೋಗೀಶ ಆಚಾರ್ಯ ಅಲೆವೂರು, ಸಭಾಧ್ಯಕ್ಷತೆ ವಹಿಸಿದ್ದ ಉದ್ಯಮಿ ಪ್ರಕಾಶ ಆಚಾರ್ಯ ಇನ್ನಂಜೆ ಶುಭ ಕೋರಿದರು. ಉದ್ಯಮಿಗಳಾದ ದಯಾನಂದ ಪೂಜಾರಿ ಬೆಂಗಳೂರು, ನವೀನ್‌ ಅಮೀನ್‌, ಅಲ್ವಿನ್‌ ಪಿ. ಮಿನೇಜಸ್‌, ಶ್ರೀ ದೇವಸ್ಥಾನದ  ಮಹಿಳಾ ಬಳಗ ಅಧ್ಯಕ್ಷೆ  ಶಶಿಕಲಾ ದಾಮೋದರ ಆಚಾರ್ಯ, ಸಗ್ರಿ ಚಕ್ರತೀರ್ಥ ಸಂಘದ ಅಧ್ಯಕ್ಷ ಕೇಶವ ಆಚಾರ್ಯ ಮತ್ತು ಯಕ್ಷ ನಾಟ್ಯ ಗುರುಗಳಾದ ಆದಿತ್ಯ ಅಂಬಲಪಾಡಿ ಉಪಸ್ಥಿತರಿದ್ದರು. ಸಂತೋಷ್‌ ಕುಮಾರ್‌ ಪಿಲಾರು ಸ್ವಾಗತಿಸಿ, ಸುಮಲತಾ ಶೇಖರ್‌ ಇನ್ನಂಜೆ ವಂದಿಸಿದರು. ಗಣೇಶ್‌ ರಾವ್‌ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next