Advertisement
ಕರ್ನೂರು ಸುಭಾಷ್ ರೈಯವರ ಸಂಯೋಜನೆಯಲ್ಲಿ ಉಭಯ ತಿಟ್ಟುಗಳ ಪ್ರಖ್ಯಾತ ಕಲಾವಿದರು ಸೇರಿ ಶ್ರೀದೇವಿ ಮಹಾತೆ¾ ಯಕ್ಷಗಾನವನ್ನು ರಂಗದ ಮೇಲೆ ಪ್ರದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಭಾಗವತರಾದ ಪೊಲ್ಯ ಲಕ್ಷಿ$¾àನಾರಾಯಣ ಶೆಟ್ಟಿಯವರಿಗೆ “ಕರ್ನೂರು ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಪೊಲ್ಯ ಲಕ್ಷಿ$¾àನಾರಾಯಣ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ, ಸುರೇಶ್ ಶೆಟ್ಟಿ ಗಣೇಶ್ ಹೆಬ್ರಿ ಅವರ ಭಾಗವತಿಕೆ. ಪದ್ಮನಾಭ ಉಪಾಧ್ಯಾಯ, ಎನ್.ಜಿ ಹೆಗಡೆ ಯಲ್ಲಾಪುರ, ಶ್ರೀಕಾಂತ್ ಶೆಟ್ಟಿ ಮತ್ತವರ ಸಂಗಡಿಗರಿಂದ ಚಂಡೆ ಮದ್ದಳೆ. ಚಕ್ರತಾಳ ರಾಜೇಂದ್ರ ಕೃಷ್ಣ ಅವರದು. ಕಳೆದ ವರ್ಷ ಇದೇ ತಂಡ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನವನ್ನು ಸುಮಾರು 7,000 ಪ್ರೇಕ್ಷಕರು ವೀಕ್ಷಿಸಿದ್ದರು. ಸಾಂಪ್ರದಾಯಿಕ ವಾದ್ಯ ಘೋಷಗಳೊಂದಿಗೆ ಐದು ಮಂದಿ ಮಹಿಷಾಸುರರ ಆಗಮನ, ಏಕಕಾಲದಲ್ಲಿ ಸಪ್ತಮಾತೃಕೆಯರ ಪ್ರವೇಶ ಇನ್ನೂ ಹಲವು ವಿಶೇಷತೆಗಳು ಈಗ ಆಯೋಜನೆಯಾಗಿರುವ ಪ್ರಸಂಗದಲ್ಲಿ ಕಾಣಸಿಗುವುದು.
ಯಾವಾಗ?: 29 ಮಾರ್ಚ್, ಮಧ್ಯಾಹ್ನ 2.15
ಪ್ರವೇಶ: ಉಚಿತ