Advertisement

‘ಯಕ್ಷಗಾನದಿಂದ ಪರಂಪರೆ ಉಳಿಯುತ್ತದೆ’

02:25 AM Nov 13, 2018 | Team Udayavani |

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವತಿಯಿಂದ ಉಜಿರೆ ತಾಳಮದ್ದಳೆ ಸಪ್ತಾಹ ಸಮಿತಿ, ಯಕ್ಷ ಭಾರತಿ ಕನ್ಯಾಡಿ, ಮಿತ್ರ ಮಂಡಳಿ ಮುಂಡಾಜೆಯ ಸಹಯೋಗದೊಂದಿಗೆ ರಾಮೋ ವಿಗ್ರಹವಾನ್‌ ಧರ್ಮಃ ಯಕ್ಷಗಾನ ತಾಳಮದ್ದಳೆ ಸಪ್ತಾಹ-2018ರ ಉದ್ಘಾಟನ ಕಾರ್ಯಕ್ರಮ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.

Advertisement

ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾಕ್ಷೇತ್ರ ಎಂಬ ಹೆಸರು ಗಳಿಸುತ್ತಿರುವ ಉಜಿರೆಯು ಪ್ರಸ್ತುತ ಸಾಂಸ್ಕೃತಿಕ ಕ್ಷೇತ್ರವಾಗಿಯೂ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿಯ ಪ್ರತೀಕದಂತಿರುವ ಯಕ್ಷಗಾನ ಉಳಿದರೆ ನಮ್ಮ ಪರಂಪರೆಯೂ ಉಳಿಯುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಯಕ್ಷಗಾನದ ಬೆಳವಣಿಗೆ ಸಾಧ್ಯ ಎಂದರು.

ಉಜಿರೆ ಅರಿಪ್ಪಾಡಿ ಮಠದ ಬಾಲಕೃಷ್ಣ ಅರಿಪಡಿತ್ತಾಯ, ಎಬಿವಿಪಿಯ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ರಾಜ್ಯ ಕಾರ್ಯದರ್ಶಿ ಡಾ| ಮಾಧವ ಎಂ.ಕೆ., ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಬೆಳಾಲು, ಸಮಿತಿಯ ಕಾರ್ಯಾಧ್ಯಕ್ಷರಾದ ಶರತ್‌ ಕೃಷ್ಣ ಪಡ್ವೆಟ್ನಾಯ, ರಾಘವೇಂದ್ರ ಬೈಪಾಡಿತ್ತಾಯ, ಯಕ್ಷ ಭಾರತಿಯ ಮಹೇಶ್‌ ಕನ್ಯಾಡಿ, ದಿವಾಕರ ಆಚಾರ್ಯ, ಸಮಿತಿಯ ಸಂಚಾಲಕರಾದ ಸಂತೋಷ್‌ ಕೇಳ್ಕರ್‌, ಚಂದ್ರಶೇಖರ ಆಚಾರ್ಯ, ಶಿತಿಕಂಠ ಭಟ್‌, ಹರೀಶ ಕೊಳ್ತಿಗೆ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ಮರಾಠೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next