Advertisement

ಅಜೆಕಾರು ಬಳಗದಿಂದ ಮಾನಿಷಾದ ತಾಳಮದ್ದಳೆ

01:43 PM Aug 15, 2018 | |

ಮುಂಬಯಿ: ಜುಹೂ- ಅಂಧೇರಿ- ವಸೋìವಾ- ವಿಲೇ ಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌-ಜವಾಬ್‌ ಇದರ ಆಶ್ರಯದಲ್ಲಿ ಜವಾಬ್‌ನ ಮಾಜಿ ಅಧ್ಯಕ್ಷ ಹಾಗೂ ವಿಶ್ವಸ್ತ ರಘು ಎಲ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ಆ. 12ರಂದು ಅಪರಾಹ್ನ 3ರಿಂದ ಅಂಧೇರಿ ಪಶ್ಚಿಮದ ನ್ಯೂ ಲಿಂಕ್‌ರೋಡ್‌, ಸ್ಟಾರ್‌ ಬಜಾರ್‌ ಮುಂಭಾಗದ ಹೊಟೇಲ್‌ ಪೆಪಿಲಾನ್‌ ಪಾರ್ಕ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.

Advertisement

ಅಜೆಕಾರು ಕಲಾಭಿಮಾನಿ ಬಳಗದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಮಾನಿಷಾದ’ ಎಂಬ ಪೌರಾಣಿಕ ಕಥಾ ಪ್ರಸಂಗದ ತಾಳಮದ್ದಳೆಯು ನೂರಾರು ಕಲಾಭಿಮಾನಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು.  ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕಡಂದಲೆ, ಗೌರವ ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ, ಜೊತೆ ಕೋಶಾಧಿಕಾರಿ ಶೇಖರ್‌ ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ್‌ ಎ. ಶೆಟ್ಟಿ, ಜವಾಬ್‌ನ ಮಾಜಿ ಅಧ್ಯಕ್ಷರು, ವಿಶ್ವಸ್ತರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನದ ಪ್ರಾಯೋಜಕರಾದ ರಘು ಎಲ್‌. ಶೆಟ್ಟಿ, ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರು ಅತಿಥಿ ಕಲಾವಿದರು ಹಾಗೂ ತಂಡದ ಸದಸ್ಯರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. 

ಅಜೆಕಾರು ಕಲಾಭಿಮಾನಿ ಬಳ ಗದ ವತಿಯಿಂದ ಕಾರ್ಯಕ್ರಮದ ಪ್ರಾಯೋಜಕ ರಘು ಎಲ್‌. ಶೆಟ್ಟಿ ಹಾಗೂ ಜವಾಬ್‌ನ ಪದಾಧಿಕಾರಿಗಳನ್ನು ಪುಷ್ಪ ಗುತ್ಛವನ್ನಿತ್ತು ಗೌರವಿಸಲಾಯಿತು.

ಜವಾಬ್‌ನ ಗೌರವ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕಡಂದಲೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮಾನಿಷಾದ ತಾಳಮದ್ದಳೆ ನಡೆಯಿತು. 
ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ್‌ ಆಳ್ವ ತಲಪಾಡಿ, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್‌ ಮಿಜಾರ್‌, ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಅವರು ಭಾಗವಹಿಸಿದ್ದರು. ಕಲಾವಿದರಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ವೆಂಕಟೇಶ್‌ ಕುಮಾರ್‌ ಉಳುವಾಣ, ವೇಣುಗೋಪಾಲ್‌ ಭಟ್‌ ಶೇಣಿ, ವಿಜಯ ಶಂಕರ ಆಳ್ವ ಅಳಿಕೆ ಅವರು ಪಾಲ್ಗೊಂಡಿದ್ದರು.  ದಿನೇಶ್‌ ಶೆಟ್ಟಿ ಸಹಕರಿಸಿದರು. 

Advertisement

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next