Advertisement

ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆ

02:08 PM Sep 08, 2017 | |

ಮುಂಬಯಿ: ಕಲೆ, ಸಾಹಿತ್ಯ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮನೆಯೇ ಮೊದಲ ಪಾಠಶಾಲೆ. ಹೆತ್ತವರು ಮಾರ್ಗದರ್ಶಕರಾಗಿತ್ತಾರೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಮಹಾನಗರದಲ್ಲಿ ಅಜೆಕಾರು ಕಲಾಭಿಮಾನಿ ಬಳಗವನ್ನು ಸ್ಥಾಪಿಸಿ ನಿರಂತರ ಹದಿನಾರು ವರ್ಷಗಳಿಂದ ಯಕ್ಷಗಾನದ ವಿವಿಧ ಪ್ರಯೋಗಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಲು ಹೆತ್ತ ಮಾತೆಯೇ ಸ್ಪೂರ್ತಿ  ಎಂದು ಯûಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಮತ್ತು ಅರ್ಥಧಾರಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

Advertisement

ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಜೆಕಾರು ಶ್ರೀರಾಮ ಭಜನ ಮಂದಿರದಲ್ಲಿ ಸೆ. 2ರಂದು ಜರಗಿದ ಮಾತಾ ಸಂಪಾ ಎಸ್‌. ಶೆಟ್ಟಿ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣ ಭಾಷಣಗೈದರು.

ಅಜೆಕಾರಿನ ಖ್ಯಾತ ವೈದ್ಯ ಡಾ| ಸಂತೋಷ್‌  ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು, ಭಾಗವತ, ಗಾನ ಮಂದಾರ ಸತೀಶ್‌ ಶೆಟ್ಟಿ ಪಟ್ಲ, ಗಿರೀಶ್‌  ರೈ ಕಕ್ಕೆಪದವು, ಭಾಸ್ಕರ ಶೆಟ್ಟಿ, ನಂದಕುಮಾರ್‌,  ಗೋಪಾಲ ಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ ಶೆಟ್ಟಿ ಅವರು ಸ್ವಾಗತಿಸಿದರು. ವಿಜಯಾ ಶೆಟ್ಟಿ ಸುಭವಿ ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರಿಂದ ಸಮರ ಸನ್ನಾಹ – ಶ್ರಿಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಜರಗಿತು. ಪಟ್ಲ ಸತೀಶ್‌ ಶೆಟ್ಟಿ, ಗಿರೀಶ್‌  ರೈ ಕಕ್ಕೆಪದವು, ಪ್ರಶಾಂಶ್‌ ಶೆಟ್ಟಿ ವಗೆನಾಡು, ಯೋಗೀಶ್‌ ಆಚಾರ್‌ ಉಳೆಪಾಡಿ ಅವರು ಹಿಮ್ಮೇಳದಲ್ಲಿ ಸಹಕರಿಸಿದರು. ಅರ್ಥದಾರಿಗಳಾಗಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಶಶಿಕಾಂತ ಶೆಟ್ಟಿ ಕಾರ್ಕಳ, ದಿನೇಶ್‌ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ ಅವರು ಭಾಗವಹಿಸಿದ್ದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next