Advertisement

‘ಶೂರ್ಪನಖಾ-ಗುರುನೀತಿ’ಯಕ್ಷಗಾನ ತಾಳಮದ್ದಳೆ 

01:30 AM Aug 24, 2018 | Karthik A |

ಬದಿಯಡ್ಕ: ಶ್ರೀಮದ್‌ ಎಡನೀರು ಮಠಾಧೀಶರ 58ನೇ ಚಾತುರ್ಮಾಸದ ಅಂಗವಾಗಿ ಶ್ರೀ ಮಠದ ಸಭಾಂಗಣದಲ್ಲಿ ಸಾಂಸ್ಕೃತಿಕ ಸಂಜೆ ‘ಶೂರ್ಪನಖಾ- ಗುರುನೀತಿ’ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ನಡೆಯಿತು.

Advertisement

ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ, ರಮೇಶ್‌ ಭಟ್‌ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನಿವಾಸ ರಾವ್‌, ಉದಯ ಕುಂಬಾರ್‌ ಸಹಕರಿಸಿದರು. ಮುಮ್ಮೇಳದಲ್ಲಿ ಡಾ| ರಮಾನಂದ ಬನಾರಿ (ಶ್ರೀರಾಮ), ವಿದ್ವಾನ್‌.ಹಿರಣ್ಯ ವೆಂಕಟೇಶ್ವರ ಭಟ್‌ (ಶೂರ್ಪನಖೀ), ಪೆರ್ಮುದೆ ಜಯಪ್ರಕಾಶ ಶೆಟ್ಟಿ (ಲಕ್ಷ್ಮಣ), ಡಾ| ಶ್ರೀಪತಿ ಕಲ್ಲೂರಾಯ ಕೊಣಾಜೆ (ಸೀತೆ), ನಾ. ಕಾರಂತ ಪೆರಾಜೆ  (ಕೃಪಾಚಾರ್ಯ), ಕೆಯ್ಯೂರು ನಾರಾಯಣ ಭಟ್‌ (ಕೌರವ), ಡಾ| ಗೋಪಾಲಕೃಷ್ಣ ಭಟ್‌ ಎರುಗಲ್ಲು (ಕರ್ಣ), ರಾಜೇಂದ್ರ ಕಲ್ಲೂರಾಯ ಎಡನೀರು (ಅಶ್ವತ್ಥಾಮ) ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆದರು.

ಬುಧವಾರ ಬೆಳಗ್ಗೆ ಚಾತುರ್ಮಾಸದ ಪುತ್ತೂರು ಅಭಿಮಾನಿ ಶಿಷ್ಯರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎಡನೀರು ಶ್ರೀ ಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ, ಬಲರಾಮ ಆಚಾರ್ಯ, ಶ್ರೀಧರ ಬೈಪಡಿತ್ತಾಯ, ವೆಂಕಟೇಶಮೂರ್ತಿ, ಕೃಷ್ಣ ಪ್ರಸಾದ ಕೆದಿಲಾಯ, ಪ್ರೊ| ವೇದವ್ಯಾಸ ರಾಮಕುಂಜ, ಕೃಷ್ಣ ಬೈಪಡಿತ್ತಾಯ, ರವಿ ಹೆಬ್ಟಾರ್‌ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು. ಶ್ರೀ ಎಡನೀರು ಕ್ಷೇತ್ರದಲ್ಲಿ ಬಳಿಕ ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಸಾಂಸ್ಕೃತಿಕ ಸಂಜೆಯ ಅಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ತಂಡದವರಿಂದ ದಾಸಸಂಕೀರ್ತನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next