Advertisement

ಬಂಟರ ಸಂಘ ಸಾಹಿತ್ಯ, ಸಾಂಸ್ಕೃತಿಕ ಸಮಿತಿಯಿಂದ ಯಕ್ಷಗಾನ ಪ್ರದರ್ಶನ

03:35 PM Nov 13, 2018 | Team Udayavani |

ಮುಂಬಯಿ: ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಸರ್ವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇಂದಿನ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಬಗ್ಗೆ ಮಕ್ಕಳಿಗೆ ಕಲಿಸುವ ಜವಾಬ್ದಾರಿ ಪಾಲಕರದ್ದಾಗಿದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ನ. 10ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಕಲಾ ವೇದಿಕೆ ಹಾಗೂ ಸಂಘದ ಸದಸ್ಯ ಕಲಾವಿದರ ಕೂಡುವಿಕೆಯಿಂದ ನಡೆದ ಗೆಜ್ಜೆದ ಪೂಜೆ ಯಕ್ಷಗಾನ ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನ ಕಲೆಗೆ ಇಂದು ಮಹಿಳೆಯರೂ ಪ್ರವೇಶಿಸಿ ಉತ್ತಮ ಕೊಡುಗೆ ಸಲ್ಲಿಸುತ್ತಿದ್ದಾರೆ. ಕಲೆ ಎಂಬುವುದು ಯಾವುದೇ ಭಾಷೆ, ಲಿಂಗ, ಜಾತಿ, ಧರ್ಮವನ್ನು ಮೀರಿ ನಿಂತ ಸಂಪತ್ತಾಗಿದೆ. ಅದನ್ನು ಜೀವಂತವಾಗಿರಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಬೇಕು. ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಅವರು ನಿರಂತರ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿಸುತ್ತಿದ್ದಾರೆ. ಈ ಹಿಂದೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಆನಂದ ಪಿ. ಶೆಟ್ಟಿ ಹಾಗೂ ಅಧ್ಯಕ್ಷರಾಗಿದ್ದ ಸುಧಾಕರ ಎಸ್‌. ಹೆಗ್ಡೆ ಅವರ ಸಹಕಾರದೊಂದಿಗೆ ಆರಂಭಗೊಂಡ ಸಂಘದ ಮಹಾವಿಷ್ಣು ಕೃಪಾ ಬಂಟ ಯಕ್ಷಕಲಾ ವೇದಿಕೆ ತನ್ನದೇ ಆದ ಸ್ವಂತ ಯಕ್ಷಪರಿಕರಗಳನ್ನು ಹೊಂದಿರುವುದರ ಜತೆಗೆ ಸಂಘದ ಸದಸ್ಯರನ್ನು ಕಲಾವಿದರನ್ನಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ಅಭಿನಂದನೀಯ ಎಂದರು.

ಬಂಟರ ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಪಶ್ಚಿಮ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಸ್ವಾಗತಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ಬಂಟರ ಸಂಘ ಮಹಿಳಾ ವಿಭಾಗದ ಡಾ| ಸುನೀತಾ ಎಂ. ಶೆಟ್ಟಿ, ಮನೋರಮಾ ಎನ್‌. ಬಿ. ಶೆಟ್ಟಿ, ಆಶಾ ವಿಟuಲ್‌ ರೈ, ಲತಾ ಪಿ. ಶೆಟ್ಟಿ, ಜಯಂತ್‌ ಪಕ್ಕಳ, ರಮೇಶ್‌ ಶೆಟ್ಟಿ ಕಾಪು, ಕೆ.ಕೆ. ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ರಾಘು ಪಿ. ಶೆಟ್ಟಿ, ಶಿವರಾಮ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ವಿಟuಲ್‌ ರೈ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು.

Advertisement

ಬಳಿಕ ಶ್ರೀ ಮಹಾವಿಷ್ಣು ಕೃಪಾಪೋಷಿತ ಬಂಟ ಯಕ್ಷಕಲಾ ವೇದಿಕೆಯ ಕಲಾವಿದರು ಮತ್ತು ಸಂಘದ ಸದಸ್ಯರ ಕೂಡುವಿಕೆಯಿಂದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ನಿರ್ದೇಶನದಲ್ಲಿ ಗೆಜ್ಜೆದ ಪೂಜೆ ಯಕ್ಷಗಾನ ಪ್ರದರ್ಶನಗೊಂಡಿತು. 

ಕಲಾವಿದರು ಕಲಾವಿದರಾಗಿ ಭಾಗವತರಾಗಿ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಜಯಪ್ರಕಾಶ್‌ ನಿಡ್ವಣ್ಣಾಯ, ಹರೀಶ್‌ ಶೆಟ್ಟಿ ಕಟೀಲು, ಚೆಂಡೆ-ಮದ್ದಳೆಯಲ್ಲಿ ಗಣೇಶ್‌ ಮಯ್ಯ, ಮಧು, ಪ್ರವೀಣ್‌ ಶೆಟ್ಟಿ, ಚಕ್ರತಾಳದಲ್ಲಿ ಶ್ಯಾಮ್‌ ಶೆಟ್ಟಿ ಅವರು ಭಾಗವಹಿಸಿದ್ದರು. ಕಲಾವಿದರಾಗಿ ಟಿ. ಆರ್‌. ಶೆಟ್ಟಿ. ರಂಜಿತ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಕಾಪು, ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ ತಿಲಕ್‌ನಗರ, ಸಚಿನ್‌, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ರಾಮಚಂದ್ರ, ಸಂತೋಷ್‌ ಕುಮಾರ್‌, ಸದಾನಂದ ಶೆಟ್ಟಿ ಮಾನಾಡಿ, ತುಂಬೆ ರಾಜ, ಕು| ಶ್ರಾವ್ಯಾ, ಮಾಸ್ಟರ್‌ ಶ್ರೇಯಸ್‌, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ನವೀನ್‌ ಶೆಟ್ಟಿ ಇನ್ನಬಾಳಿಕೆ, ಕೋಲ್ಯಾರು ರಾಜು ಶೆಟ್ಟಿ, ಗಣೇಶ್‌ ಕೆ. ಶೆಟ್ಟಿ ಕಟೀಲು, ಸಚಿನ್‌ ಕುಮಾರ್‌, ಅಶೋಕ್‌ ಪಕ್ಕಳ, ರಂಜಿತ್‌ ಕುಮಾರ್‌, ಕರ್ನೂರು ಮೋಹನ್‌ ರೈ, ಪ್ರಶಾಂತ್‌ ಶೆಟ್ಟಿ, ಸಚಿನ್‌ ಅವರು ಪಾಲ್ಗೊಂಡಿದ್ದರು. ವಾಸುದೇವ ಶೆಟ್ಟಿ ಮಾರ್ನಾಡ್‌, ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರು ಸಹಕರಿಸಿದರು.

ಬಂಟರ ಸಂಘ ಮತ್ತು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಸಹೋದರ ಬಾಂಧವ್ಯ ಉಳಿಸಿ ಸಮಾಜ ಸೇವೆಗೈಯುತ್ತಿರುವ ಜತೆಗೆ ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿದೆ. ಕಲೆಯ ಉಳಿವಿಗೆ ತುಳು ಕನ್ನಡಿಗರ ಪ್ರೋತ್ಸಾಹ ಶ್ಲಾಘನೀಯ.
-ಸಿಎ ಸುರೇಂದ್ರ ಶೆಟ್ಟಿ, 
ಬೋಂಬೆ ಬಂಟ್ಸ್‌ ಅಸೋ.ಗೌ.ಪ್ರ. ಕಾರ್ಯದರ್ಶಿ 

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next