Advertisement

ಮನತುಂಬಿದ ಯಕ್ಷಗಾನ ಯಾನ 

06:00 AM Dec 14, 2018 | |

ಬ್ರಾಹ್ಮಣ ಮಹಾಸಭಾ ಕೈಕಂಬ ಸಂಸ್ಥೆಯ ಪ್ರಥಮ ಸಮಾವೇಶದ ಸಮಾರಂಭದಲ್ಲಿ ಗುರುಪುರ ಕೈಕಂಬದ ಶ್ರೀ ರಾಮ್‌ ಸಭಾಂಗಣದಲ್ಲಿ ವಿಶಿಷ್ಟವಾಗಿ ಯಕ್ಷಗಾನ ಯಾನ ಕಾರ್ಯಕ್ರಮ ಜರಗಿತು. 

Advertisement

ಈ ಗಾನ ಯಾನ ಕಾರ್ಯಕ್ರಮದಲ್ಲಿ ಈ ವರೆಗೆ ಎಲೆಮರೆಯ ಕಾಯಿಯಂತಿದ್ದು ಇದೀಗ ಪ್ರಕಟಗೊಳ್ಳುತ್ತಿರುವ ದಿ| ಅಗರಿ ಶ್ರೀನಿವಾಸ ಭಾಗವತರ ಶಿಷ್ಯರಾಗಿರುವ ನಿವೃತ್ತ ಶಿಕ್ಷಕ ಗಂಜಿಮಠ ಗಜಂತೋಡಿ ಸುಬ್ರಾಯ ಭಟ್‌ ಕೊನೆಯವರೆಗೂ ದಿ| ಅಗರಿಯವರ ಪ್ರಸಿದ್ಧ ಹಾಡುಗಳನ್ನು ಹಾಡಿ ಕಲಾಪ್ರೇಮಿಗಳನ್ನು ಪುಳಕಿತಗೊಳಿಸಿದರು. ಪುಂಡಿಕಾ ಗೋಪಾಲಕೃಷ್ಣ ಭಟ್‌ ಮತ್ತು ಸತ್ಯನಾರಾಯಣ ಪುಣಿಚಿತ್ತಾಯರು ಯಕ್ಷ ಕಥಾ ಪ್ರಸಂಗಗಳ ಜನಪ್ರಿಯ ಹಾಡುಗಳನ್ನು ಸಮರ್ಥವಾಗಿ ಹಾಡಿದರು. ಎಳೆಯ ಭಾಗವತೆಯಾಗಿರುವ ಕು| ಅಮೃತಾ ಅಡಿಗ ಸುಶ್ರಾವ್ಯ ಕಂಠ ದಿಂದ “ಭೇಷ್‌’ ಅನಿಸಿಕೊಂಡರು. ಈ ಕಲಾವಿದೆಗೆ ಯಕ್ಷಗಾನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ. ಪುತ್ರ ಅಗರಿ ರಾಘವೇಂದ್ರ ರಾವ್‌ ಅವರೊಂದಿಗೆ ವೀಕ್ಷಕರಾಗಿ ಆಗಮಿಸಿದ್ದ 85ರ ಹರೆಯದ ಅಗರಿ ರಘುರಾಮ ಭಾಗವತರು ವೇದಿಕೆ ಏರಿ ಅತ್ಯುತ್ಸಾಹದಿಂದ ಎರಡು ಹಾಡುಗಳನ್ನು ಹಾಡಿದ್ದು ರೋಮಾಂಚನಗೊಳಿಸಿತು.

ಹಿಮ್ಮೇಳದಲ್ಲಿ ಜನಾರ್ದನ ತೋಳ್ಪಡಿತ್ತಾಯ, ಲಕ್ಷ್ಮೀಶ ಅಮ್ಮಣ್ಣಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸಿŒ, ಕೃಷ್ಣ ಭಟ್‌ ಕಾಟಿಪಳ್ಳ ಸಹಕರಿಸಿದರು. ಇಡೀ ಕಾರ್ಯಕ್ರಮಕ್ಕೆ ವಾದಿರಾಜ ಕಲ್ಲೂರಾಯರ ನಗುಮೊಗದ ಯಕ್ಷ ಘಟನಾವಳಿಗಳ ಸೋದಾಹರಣ ನುಡಿ ಸಿಂಚನವಿತ್ತು. 

 ರಮೇಶ್‌ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next