Advertisement

ಯಕ್ಷಗಾನ ಪರಿಶ್ರಮದ‌ ಕಲೆ: ಗಂಗಾವತಿ ಪ್ರಾಣೇಶ್ ಬಣ್ಣನೆ

05:01 PM Feb 03, 2022 | Team Udayavani |

ಶಿರಸಿ: ಯಕ್ಷಗಾನ ಪರಿಶ್ರಮದ ಕಲೆ ಎಂದು ರಾಜ್ಯೋತ್ಸವ ಪ್ರಶಸ್ತಿ‌ ಪುರಸ್ಕೃತ, ಪ್ರಸಿದ್ದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಬಣ್ಣಿಸಿದರು.ಅವರು ನಿಸರ್ಗಮನೆಯ ವೇದ ಆರೋಗ್ಯ ಕೇಂದ್ರದಲ್ಲಿ ಸಾಧಕರಿಗೆ ಹಮ್ಮಿಕೊಂಡ ಯಕ್ಷನೃತ್ಯ ರೂಪಕ ಪಂಚಪಾವನ‌ಕಥಾ ವೀಕ್ಷಿಸಿ ಮಾತನಾಡಿದರು.

Advertisement

ಎಷ್ಟೋ‌ ಕಾರ್ಯಕ್ರಮಗಳಲ್ಲಿ ನಮ್ಮ ಹಾಸ್ಯ ಆದ ಬಳಿಕ ಯಕ್ಷಗಾನ, ಯಕ್ಷಗಾನ ಆದ ಬಳಿಕ ಹಾಸ್ಯದ ಕಾರ್ಯಕ್ರಮ ಇರುತ್ತವೆ. ಅಲ್ಲಿ ಯಕ್ಷಗಾನದ ಕಲಾವಿದರ‌ ಸಂಕಷ್ಟ ನೋಡುತ್ತೇವೆ. ಬಣ್ಣದ ವೇಷಕ್ಕಾಗಿ ಎರಡು ತಾಸುಗಳ‌ ಕಾಲ ಪರಿಶ್ರಮ ಮಾಡುವದನ್ನೂ ಹಾಗೂ ರಂಗಸ್ಥಳದಲ್ಲಿ ರಂಜಿಸುವದನ್ನೂ, ಪೌರಾಣಿಕ, ಈಚೆಗೆ ಸಾಮಾಜಿಕ ಪ್ರಸಂಗ ಪ್ರದರ್ಶಿಸುವದನ್ನೂ ನೋಡುತ್ತೇವೆ ಎಂದರು.

ಗಂಡಸರೇ ಹೆಣ್ಣಿನ ವೇಷ ಹಾಕೋದು, ಹೆಣ್ಮಕ್ಕಳು ಅಲ್ಲ ಎಂದು ಹೇಳಲೇ ಸಾಧ್ಯ ಇಲ್ಲ. ಅಷ್ಟು ಚೆಂದ ವೇಷ ಮಾಡಿ ಕೊಳ್ಳುತ್ತಾರೆ. ಯಕ್ಷಗಾ‌ನದ ಹಾಸ್ಯದ ಪ್ರಸಂಗಗಳೂ ಪ್ರೇಕ್ಷಕರನ್ನು ಮನ ಸೆಳೆಯುತ್ತವೆ. ನಮ್ಮ ಕಡೆ ದೊಡ್ಡಾಟ, ಬಯಲಾಟ ಇದ್ದಂತೆ ಯಕ್ಷಗಾನ ಶ್ರೇಷ್ಠ ಕಲೆ. ಒಟ್ಟಾರೆ ಸಮಗ್ರ ಕಲೆ ಯಕ್ಷಗಾನ ಎಂದರು.

ಸಂಡೂರಿನ ಶಾಸಕ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ, ಆರೋಗ್ಯ ಸಂಬಂಧಿಸಿ ನಿಸರ್ಗ ಮನೆಯ ಕೊಡುಗೆ ಅನನ್ಯವಾದದ್ದು ಎಂದರು.

ಸಮಾಜ ಸೇವಕಿ ಅನ್ನಪೂರ್ಣ ತುಕಾರಾಮ, ಸಂಗೀತಾ ವಿ.ಹೆಗಡೆ, ಡಾ. ವೆಂಕಟೇಶ ನಾಯ್ಕ, ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಇತರರು ಇದ್ದರು. ನಿಸರ್ಗ ಮನೆಯ ಮುಖ್ಯಸ್ಥ ಡಾ‌. ವೆಂಕಟ್ರಮಣ ಸ್ವಾಗತಿಸಿದರು.

Advertisement

ಕು. ತುಳಸಿ ಹೆಗಡೆ ಅವಳಿಂದ ಪಂಚಪಾವನ‌ಕಥಾ ಯಕ್ಷನೃತ್ಯ ರೂಪಕ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next