Advertisement

Yakshagana; ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌(ರಿ) ಉಡುಪಿ ಘಟಕದ ಪ್ರಾರಂಭೋತ್ಸವ

09:52 PM Mar 09, 2024 | Team Udayavani |

ಉಡುಪಿ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಇದರ ಕೇಂದ್ರ ಸಮಿತಿಯು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ,ಅಮೆರಿಕ,ಗಲ್ಫ್ ರಾಷ್ಟ್ರಗಳು,ದೆಹಲಿ,ಗುಜರಾತ್‌,ಮಹಾರಾಷ್ಟ್ರ,ಚೆನ್ನೈ,ಗೋವಾ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ 39ಘಟಕಗಳನ್ನು ಹೊಂದಿದ್ದು ಇದೀಗ 40ನೇ ಘಟಕದ ಪ್ರಾರಂಭೊತ್ಸವವು ಮಾ.10ರ ಸಂಜೆ 6ಕ್ಕೆ ಉಡುಪಿ ಅಂಬಾಗಿಲಿನ ಅಮೃತ್‌ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Advertisement

ಶ್ರೀ ಪಾವಂಜೆ ಮೇಳದ ಅಯೋಧ್ಯಾ ದೀಪ ಯಕ್ಷಗಾನ ಪ್ರದರ್ಶನವೊಂದಿಗೆ ಉದ್ಘಾಟನೆ ನಡೆಯಲಿದೆ. ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ ಎಚ್‌.ಎಸ್‌. ಬಲ್ಲಾಳ್‌ ಉದ್ಘಾಟನೆ ನೆರವೇರಿಸಲಿದ್ದಾರೆ. ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹ ಸಮಿತಿ ಅಧ್ಯಕ್ಷ ಪಿ. ಕಿಶನ್‌ ಹೆಗ್ಡೆ , ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್‌ ರೈ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್‌ ಕುಮಾರ್‌ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟ್ಲಾಭಿಮಾನಿ ಅಭಿವಂದನೆ ಹಾಗೂ ವಿಶೇಷ ಬಾಲ ಪುರಸ್ಕಾರ
ನಿಟ್ಟೆ ವಿವಿಯ ಜಪಾನ್‌ ಭಾಷಾ ತಜ್ಞರಾದ ಯುಸುಕೋ ಸತೋ ಮತ್ತು ಪ್ರೊ.ಹರಿಕೃಷ್ಣ ಭಟ್‌ ದಂಪತಿಯವರಿಗೆ ಪಟ್ಲಾಭಿಮಾನಿ ಅಭಿವಂದನೆ ಹಾಗೂ ಅಂತಾರಾಷ್ಟ್ರೀಯ ಯೋಗಪಟು ತನುಶ್ರೀ ಪಿತ್ರೋಡಿಯವರಿಗೆ ವಿಶೇಷ ಬಾಲ ಪುರಸ್ಕಾರ ನಡೆಯಲಿದೆ. ಪ್ರೊ.ಪವನ್‌ ಕಿರಣಕೆರೆ ಶುಭಾಶಂಸನೆಗೈಯಲಿರುವರು.

ಕಾರ್ಯದರ್ಶಿ ಡಾ ಹರೀಶ್‌ ಜೋಶಿ ವಿಟ್ಲ, ಭುವನ ಪ್ರಸಾದ್‌ ಹೆಗ್ಡೆ , ರತನ್‌ರಾಜ್‌ ರೈ, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಸ್ಥಾಪಕಾಧ್ಯಕ್ಷರಾಗಿರುವ ಯಕ್ಷ ರಂಗದ ಗಣ್ಯಾತಿಗಣ್ಯರು,ಸಮಾಜ ಸೇವಾಸಕ್ತರು, ಕಲಾವಿದರು,ಸಂಘಟಕರು,ಯಕ್ಷಗಾನಾಸಕ್ತರನ್ನೊಳಗೊಂಡ ಸೇವಾ ಸಂಸ್ಥೆಯಾಗಿದ್ದು ಅಶಕ್ತ ಕಲಾವಿದರಿಗೆ ಗೌರವಧನ,ಅಪಘಾತ ವಿಮಾ ಯೋಜನೆ,ಚಿಕಿತ್ಸಾ ವೆಚ್ಚ ಮೊದಲಾದ ಸಮಾಜ ಸೇವೆಯ ಧ್ಯೇಯೋದ್ದೇಶವನ್ನು ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next