Advertisement
ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರ ಆಯೋಜನೆಯಲ್ಲಿ, ಪುರೋಹಿತ ರಾಘವೇಂದ್ರ ಭಟ್ ಪ್ರಾಯೋಜಕತ್ವದಲ್ಲಿ, ಕಲಾಭಿಮಾನಿಗಳ ಸಹಕಾರ ದೊಂದಿಗೆ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಸಂಚಾಲಕ ಗೋವಿಂದ ಭಟ್ ಅವರ ಸಾರಥ್ಯದಲ್ಲಿ ಆ. 19ರಂದು ಕೇತ್ಕರ್‌ರೋಡ್‌ನ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾಗೃಹದಲ್ಲಿ ಜರಗಿದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತೆ¾ ಎಂಬ ಯಕ್ಷಗಾನ ಪ್ರದರ್ಶನ, ಸಮ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ಕಲೆಗೆ ಪುಣೆ ಬಂಟರ ಸಂಘದ ಸಂಪೂರ್ಣ ಸಹಕಾರವಿದೆ. ಇದೇ ರೀತಿಯ ಉತ್ತಮ ಪ್ರದರ್ಶನಗಳನ್ನು ಮುಂದುವರಿಸಲು ಆಯೋಜಕರಿಗೆ, ಕಲಾವಿದರಿಗೆ ಎಲ್ಲರ ಸಹಕಾರ ಬೇಕು. ಪ್ರವೀಣ್ ಶೆಟ್ಟಿ ಮತ್ತು ಬಳಗದವರ ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ರಾಮಣ್ಣ ರೈ ಪುತ್ತೂರು ಕಲಾವಿದರನ್ನು ಪರಿಚಯಿಸಿದರು.
Related Articles
ಹೊಸಮೂಲೆ ಗಣೇಶ್ ಭಟ್ ಅವರು ಭಾಗವತಿಕೆ ಮತ್ತು ಪಡ್ರೆ ಶ್ರೀಧರ್, ಸುದಾಸ್ ಕಾವೂರು ಹಿಮ್ಮೇಳದೊಂದಿಗೆ ಯಕ್ಷರಂಗದ ಘಟಾನುಘಟಿ ಕಲಾವಿದರಾದ ಕುಂಬ್ಳೆ ಶ್ರೀಧರ್ ರಾವ್, ನಿಡ್ಲೆ ಗೋವಿಂದ ಭಟ್, ಅಮ್ಮುಂಜೆ ಮೋಹನ್, ಉದಯಕುಮಾರ್ ಅಡ್ಯನಡ್ಕ, ರಾಮಣ್ಣ ರೈ ಪುತ್ತೂರು, ರಘುನಾಥ್ ನಲ್ಲೂರು, ಬಾಲಕೃಷ್ಣ ಮಣಿಯಾಣಿ, ಕೆದಿಲ ಜಯರಾಂ ಭಟ್, ಅರಳ ಗಣೇಶ್ ಶೆಟ್ಟಿ, ಗೌತಮ್ ಹಾಗೂ ಇನ್ನಿತರ ಉದಯೋನ್ಮುಖ ಕಲಾವಿದರ ಕೂಡುವಿಕೆಯಲ್ಲಿ ಬಪ್ಪನಾಡು ಕ್ಷೇತ್ರ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.
Advertisement
ಕಳೆದ ನಾಲ್ಕು ವರ್ಷಗಳಿಂದ ಪುಣೆಯಲ್ಲಿ ನಮ್ಮ ಮಂಡಳಿಯ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರವೀಣ್ ಶೆಟ್ಟಿ ಪುತ್ತೂರು ಅವರ ಕಲಾ ಸೇವೆಗೆ ನಾವು ತಲೆ ಬಾಗುತ್ತೇವೆ. ಎಂತಹ ಕಠಿನ ಪರಿಸ್ಥಿತಿಯಲ್ಲೂ ಕಾರ್ಯದ ಒತ್ತಡದಲ್ಲೂ ನಮ್ಮನ್ನು ತಮ್ಮ ಕುಟುಂಬದವರಂತೆ ನೋಡಿಕೊಂಡು ಸಂಪೂರ್ಣ ಜವಾಬ್ದಾರಿ ವಹಿಸುತ್ತಾ ಬಂದಿರುವ ಪುಣೆಯ ಯಕ್ಷಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮತ್ತು ಅವರ ಬಳಗದವರು ಮತ್ತು ವೇದಮೂರ್ತಿ ರಾಘವೇಂದ್ರ ಭಟ್ ಅವರ ಕಾರ್ಯ ಶ್ಲಾಘನೀಯ. ಪುಣೆಯಲ್ಲಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಆ ಮೂಲಕ ಯಕ್ಷಗಾನವನ್ನು ಸಮೃದ್ಧಗೊಳಿಸುವಲ್ಲಿ ಪುಣೆಯ ಯಕ್ಷ ಕಲಾಭಿಮಾನಿಗಳ ಕಾರ್ಯ ಮೆಚ್ಚುವಂಥದ್ದು. ಇಲ್ಲಿ ನಮ್ಮ ಮೇಳದ ಪ್ರದರ್ಶನ ಆಯೋಜಿಸಿ ಸಹಕಾರ ನೀಡಿದ ತಮಗೆ ವಂದನೆಗಳು– ಗೋವಿಂದ ಭಟ್ ನಿಡ್ಲೆ (ಸಮ್ಮಾನಿತರು). ಇಂದಿನ ತಂತ್ರಜ್ಞಾನದ ಯುಗದಲ್ಲೂ ನಮ್ಮ ಕರಾವಳಿ ಕರ್ನಾಟಕದ ಶ್ರೇಷ್ಠ ಕಲೆ ಯಕ್ಷಗಾನ ಕಲೆಯನ್ನು ಯಾರೂ ಮರೆತಿಲ್ಲ ಎನ್ನುವುದಕ್ಕೆ ಇಲ್ಲಿ ಸೇರಿರುವ ಪ್ರೇಕ್ಷಕರೇ ನಿದರ್ಶನ. ಈ ಕಲೆಯನ್ನು ಉಳಿಸಿ ಬೆಳೆಸಲು ನಾವು ಮಾಡುತ್ತಿರುವ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು. ಇದೇ ರೀತಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಲು ಕಲಾಭಿಮಾನಿಗಳ, ಸಂಘ ಸಂಸ್ಥೆಗಳ ಸಹಕಾರ ನಮ್ಮೊಂದಿಗಿರಲಿ. ತಮ್ಮ ವೃತ್ತಿಯೊಂದಿಗೆ ಯಕ್ಷಗಾನಕ್ಕೆ ಗೌರವ ನೀಡುತ್ತಿರುವ ರಾಘವೇಂದ್ರ ಭಟ್ ಅವರ ನಿರಂತರ ಕಲಾಸೇವೆಯ ಸಹಕಾರಕ್ಕೆ ಅವರಿಗೆ ಆಭಾರಿಯಾಗಿದ್ದೇವೆ. ಕಾರ್ಯ ಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು
– ಪ್ರವೀಣ್ ಶೆಟ್ಟಿ ಪುತ್ತೂರು (ಅಧ್ಯಕ್ಷರು : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ). ಚಿತ್ರ-ವರದಿ ಹರೀಶ್ ಮೂಡಬಿದ್ರಿ