Advertisement
ಯಕ್ಷಗಾನ ಈಗಾಗಲೇ ಕನ್ನಡ, ಇಂಗ್ಲಿಷ್, ತುಳು ಹಾಗೂ ಸಂಸ್ಕೃತ ಭಾಷೆಗೆ ಅನುವಾದಗೊಂಡಿದೆ. ಇದೀಗ ಅತ್ಯಂತ ಪ್ರಭಾವಶಾಲಿ ರಂಗಭೂಮಿಯಾಗಿ ಗುರುತಿಸಿಕೊಂಡ ಮರಾಠಿಗೆ ಭಾಷಾಂತರಗೊಳ್ಳುವ ಮೂಲಕ ತಲೆಮಾರುಗಳಿಂದ ಮಹಾರಾಷ್ಟ್ರದಲ್ಲಿ ನೆಲೆ ನಿಂತ ಕನ್ನಡಿಗರಿಗೆ ಯಕ್ಷಗಾನ ಕಲೆಯ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಪುಣೆ ವಿದ್ವಾಂಸರ ತಂಡ ಉಡುಪಿಗೆ ಪುಣೆಯ ತಂಡ ಮೇ 29ರಂದು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ ಯಕ್ಷಗಾನ ಕಲೆಗೆ ಸಂಬಂ« ಪಟ್ಟ ಪುಸ್ತಕಗಳ ಅಧ್ಯಯನ ಮಾಡುತ್ತಿದೆ. ಕೇಂದ್ರದ ಯಕ್ಷಗುರು ಸಂಜೀವ ಸುವರ್ಣ ಅವರಿಂದ ಯಕ್ಷಗಾನ ಕಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಭಿಮನ್ಯು ಕಾಳಗ ಹಾಗೂ ಸೀತಾ ಪಹರಣ ಪ್ರಸಂಗವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಾಲಿ ಮೋಕ್ಷ, ಪಾಂಡವರ ವನ ವಾಸ ಸೇರಿದಂತೆ ಒಟ್ಟು 7 ಪ್ರಸಂಗಗಳನ್ನು ಮರಾಠಿಗೆ ಅನುವಾದಿಸಿ ಪುಸಕ್ತದ ರೂಪದಲ್ಲಿ ಅಗಸ್ಟ್‌ನಲ್ಲಿ ಬಿಡು
ಗಡೆ ಮಾಡಲಾಗುತ್ತದೆ. ಅನಂತರ ದಿನದಲ್ಲಿ ಪುಣೆಯಲ್ಲಿ ನೆಲೆ ನಿಂತ ಕನ್ನಡಿಗರ ಸಂಘಟನೆಯ ಸಹಾಯದಿಂದ ಮರಾಠಿ ಭಾಷೆಯಲ್ಲಿ ಪುಣೆಯಲ್ಲಿ ಪ್ರದರ್ಶನ ಮಾಡಲಾಗು ತ್ತದೆ. ಮುಂದೆ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆಯಲ್ಲಿ ಮರಾಠಿ ಭಾಷೆಯ ಯಕ್ಷಗಾನವನ್ನು ವಿಸ್ತರಿಸುವ ಗುರಿಯನ್ನು ಈ ತಂಡ ಹೊಂದಿದೆ. ಮೂಲ ಸ್ವರೂಪದಲ್ಲಿ ಕರಾವಳಿ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮರಾಠಿಗೆ ಭಾಷಾಂತರ ಪಡಿಸುವ ಕುರಿತು ಪುಣೆ ತಂಡ ಭರವಸೆ ನೀಡಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ ಕೇಂದ್ರದ ಕಲಾವಿದರು ಹಾಗೂ ಹಿಮ್ಮೇಳದವರಿಂದ ಪುಣೆಯ ಆಸಕ್ತ ಕಲಾವಿದರಿಗೆ ತರಬೇತಿ ನೀಡಲಾಗುತ್ತದೆ.