ಕೋಟ: ಬೆಂಗಳೂರಿನ ಖ್ಯಾತ ಯಕ್ಷಗಾನ ಸಂಸ್ಥೆ ಕರ್ನಾಟಕ ಕಲಾದರ್ಶಿನಿ ಆಶ್ರಯದಲ್ಲಿ ನಡೆದ ಮಕ್ಕಳತ್ತ ಯಕ್ಷಗಾನ ಎನ್ನುವ ಯಕ್ಷಗಾನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 26ರಂದು ಸಂಜೆ ಸಾಸ್ತಾನ ಶ್ರೀ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು.
ಆಸಕ್ತ 26 ಮಕ್ಕಳು ಯಕ್ಷಗಾನ ತಾಲೀಮು ನಡೆಸಿ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಸೇತುಬಂಧ ಯಕ್ಷಗಾನ ಪ್ರದರ್ಶಿಸಿದರು.
ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳತ್ತ ಯಕ್ಷಗಾನ ಎನ್ನುವ ವಿಭಿನ್ನವಾದ ಯಕ್ಷಗಾನ ಶಿಬಿರವನ್ನು ಆಯೋಜಿಸಿದ್ದು ಮಕ್ಕಳಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಲು ಈ ಶಿಬಿರವನ್ನು ಸಂಯೋಜಿಸಲಾಗಿದೆ ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎ.ಜಗದೀಶ ಕಾರಂತ, ಶಿವಕೃಪಾ ಕಲ್ಯಾಣ ಮಂಟಪದ ಅನಂತಯ್ಯ ತುಂಗ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಜಶೇಖರ್ ಹೆಬ್ಟಾರ್, ಯಕ್ಷ ಕಲಾವಿದ ಐರೋಡಿ ಗೋವಿಂದಪ್ಪ, ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ, ಉದ್ಯಮಿ ಗಣಪಯ್ಯ ಆಚಾರ್ ಐರೋಡಿ, ಸಾಸ್ತಾನ ಸಹಕಾರಿ ವ್ಯ.ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್., ಸರಕಾರಿ ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಐರೋಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿಗಳಾದ ಡೆರಿಕ್ ಡಿ ಸೋಜಾ, ರಾಜಾರಾಂ ಪೂಜಾರಿ, ಲಕ್ಷ್ಮೀನಾರಾಯಣ ,
ಐರೋಡಿ ಎ.ಶಾರದಾ , ರಘುರಾಂ ಪೂಜಾರಿ ಐರೋಡಿ , ರಮಾನಾಥ ಅಲ್ಸೆ, ಸತೀಶ್ ಉಪಾಧ್ಯ, ಶ್ರೀಧರ ಕಾಂಚನ್, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಕೊನೆಯಲ್ಲಿ ಕರ್ನಾಟಕ ಕಲಾದರ್ಶಿನಿ ಕಲಾವಿದರಿಂದ ಮೋಹಿನಿ ಭಸ್ಮಾಸುರ ಯಕ್ಷಗಾನ ಪ್ರದರ್ಶನ ಜರಗಿತು.