Advertisement

ಯಕ್ಷ ವ್ಯಂಗ್ಯೋತ್ಸವ: ಪ್ರಾತ್ಯಕ್ಷಿಕೆ

03:50 AM Jul 07, 2017 | Team Udayavani |

ಬದಿಯಡ್ಕ: ವ್ಯಂಗ್ಯ ಚಿತ್ರಕಾರರು ಯಕ್ಷಗಾನ ಕಲಾವಿದರೂ ಹೌದು. ಕರ್ನಾಟಕದಲ್ಲಿ ಯತೀಶ್‌ ಎಲ್ಲಾಪುರ ಪ್ರಸಿದ್ಧ ವ್ಯಂಗ್ಯ ಚಿತ್ರಗಾರರೂ ಹಾಸ್ಯ ಕಲಾವಿದರು ಆಗಿದ್ದಾರೆ. ಯಕ್ಷಗಾನದಿಂದ (ಹಾಸ್ಯ)  ವ್ಯಂಗ್ಯ ಚಿತ್ರಗಳಿಗೆ ಸ್ಫೂರ್ತಿ ಲಭಿಸಿದೆ ಎಂದು ವೆಂಕಟ ಭಟ್‌ ಎಡನೀರು ಹೇಳಿದರು. 

Advertisement

ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಎಡನೀರಿನಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದಲ್ಲಿ ಯಕ್ಷ ವ್ಯಂಗ್ಯೋತ್ಸವ ಎಂಬ ವಿಷಯದಲ್ಲಿ ಸಂವಾದ ಹಾಗೂ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು. 

ಶಬ್ದವೊಂದರಿಂದಲೂ ನಗೆ ಭರಿಸಬಹುದು
ವ್ಯಂಗ್ಯ ಚಿತ್ರದ ಮೂಲಕ ಯಕ್ಷಗಾನದ ಕಲಾವಿದರನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದ ಅವರು  ಯಕ್ಷಗಾನ ಪ್ರಸಂಗದಲ್ಲಿ  ನಡೆಯುವ ಸೂûಾ¾ತಿ ವಿಚಾರಗಳನ್ನು  ಆಯ್ದುಕೊಂಡು ವ್ಯಂಗ್ಯ ಬರೆಯಬಹುದು. ಒಂದೇ ಒಂದು  ಶಬ್ದದಲ್ಲಿ ಸಭೆ  ನಗುವಂತೆ ಆ ಶಬ್ದವನ್ನಾಧರಿಸಿ ವ್ಯಂಗ್ಯ ರಚನೆ ಸಾಧ್ಯವಿದೆ ಎಂದರು. ಕೃಷ್ಣಾರ್ಜುನ ಕಾಳಗದ ಪ್ರಸಂಗದಲ್ಲಿನ ಹಾಸ್ಯವನ್ನು, ಮಲಯಾಳ ಯಕ್ಷಗಾನದಲ್ಲಿ ಬಾಬರ, ಅಬ್ಬುಟ್‌ ಪಾತ್ರಗಳನ್ನು  ಇದಕ್ಕೆ ಉದಾಹರಣೆಯಾಗಿ ನೀಡಿದರು. 
ಅನುಭವದ ಹಿನ್ನಲೆಯಲ್ಲಿ  ವ್ಯಂಗ್ಯ ಚಿತ್ರಗಳನ್ನು  ರಚಿಸಬಹುದು. ಉಪ್ಪು ನೀರು  ಕುಡಿಸಿಯೇನು ಎಂಬುದಕ್ಕೂ ವ್ಯಂಗ್ಯ ಚಿತ್ರವನ್ನು ರಚಿಸಲಾಗಿದೆ. ಸಮಯ ಸ್ಫೂರ್ತಿಯಾಗಿ  ಮಾತುಗಳು ಬಂದರೆ  ಮಾತ್ರ ವ್ಯಂಗ್ಯ ಚಿತ್ರ  ರಚನೆ ಸಾಧ್ಯ ಎಂದು ವೆಂಕಟ್‌ ಭಟ್‌ ಎಡನೀರು ಹೇಳಿದರು. 

ಶಿಬಿರಾರ್ಥಿ ಅಮೃತಾ ಅವರು ವ್ಯಂಗ್ಯಚಿತ್ರ ರಚಿಸಿದರು. ಶಿಬಿರಾರ್ಥಿ ಪವಿತ್ರಾ ಕೆ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ನಾಟ್ಯಗುರು ದಿವಾಣ ಶಿವಶಂಕರ ಭಟ್‌ ಉಪಸ್ಥಿತರಿದ್ದರು. ಶಿಬಿರದ ಪ್ರಧಾನ ಸಂಚಾಲಕ ಡಾ| ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದ ಸಹಸಂಚಾಲಕ ಡಾ| ರಾಜೇಶ್‌ ಬೆಜ್ಜಂಗಳ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next