Advertisement
ಪುಣ್ಯ ಕ್ಷೇತ್ರಗಳು, ದೇವಾಲಯಗಳಿಂದ ಹೊರಡುವ ಬಯಲಾಟದ ಮೇಳಗಳಿಗೆ ಹರಕೆಗಳ ಆಟಗಳೇ ಜೀವಾಳ. ಸಾಮಾನ್ಯವಾಗಿ ತೆಂಕು ಬಡಗಿನಲ್ಲಿ ಹಲವು ಹರಕೆ ಮೇಳಗಳಿವೆ.ಪ್ರಮುಖವಾಗಿ ಕಟೀಲು ಕ್ಷೇತ್ರದ ತೆಂಕು ತಿಟ್ಟಿನ 6 ಮೇಳಗಳು ಪ್ರಮುಖವಾದದ್ದು, ಈ ಎಲ್ಲಾ ಮೇಳಗಳಿಗೂ 6 ತಿಂಗಳ ಕಾಲ ಸಂಪೂರ್ಣವಾಗಿ ಹರಕೆ ಆಟಗಳಿವೆ. ಇನ್ನು ಬಡಗಿನಲ್ಲಿ ಶ್ರೀಕ್ಷೇತ್ರ ಮಂದಾರ್ತಿಯ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 5 ಮೇಳಗಳಿಗೂ 6 ತಿಂಗಳುಗಳ ಕಾಲ ಹರಕೆ ಬಯಲಾಟಗಳಿವೆ. ಸುದೀರ್ಘ ಬುಕ್ಕಿಂಗ್ ಆಗಿರುವ ಹಿನ್ನಲೆಯಲ್ಲಿ ಈಗ ಮಳೆಗಾಲದಲ್ಲೂ ದೇವಾಲಯದ ಸಭಾಂಗಣದಲ್ಲಿ ದಿನಕ್ಕೆರಡು ಮಂದಿಯ ಹರಕೆಯ ಆಟಗಳನ್ನು ಕಾಲಮಿತಿಯ ರೂಪದಲ್ಲಿ ದೇವಿಗೆ ಸಲ್ಲಿಸಲಾಗುತ್ತಿದೆ.
Related Articles
Advertisement
ಪ್ರಸಕ್ತ ಹಿರಿಯ ಅಭಿಮಾನಿಗಳ ಪ್ರಕಾರ ಹಿಂದಿನ ಆಟಗಳೇ ಚಂದ ಮರಾಯ್ರೇ..ಆ ವಾತಾವರಣ ಈಗ ಇಲ್ಲ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಪ್ರೇಕ್ಷಕರ ವ್ಯವಧಾನದ ಕೊರತೆಯೋ , ಅಥವಾ ಕಲಾವಿದರ ನಿರಾಸಕ್ತಿಯೋ ತಿಳಿಯದು ಈಗ ಯಕ್ಷಗಾನಕ್ಕೆ ಅಡಿಪಾಯವಾಗಬೇಕಾದ ಪೂರ್ವ ರಂಗ ಪ್ರಸ್ತುತಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ , ಕೊಡಂಗಿ ಇತ್ಯಾದಿಗಳು ಸೊಬಗು ಕಳೆದುಕೊಳ್ಳುತ್ತಿದೆ. ಡೇರೆ ಮೇಳಗಳಲ್ಲಿ ಪ್ರೇಕ್ಷಕರು ಹಣ ಕೊಟ್ಟು ಪ್ರಸಂಗ ನೋಡಲೆಂದೆ ಬರುವ ಕಾರಣ ಇದನ್ನೆಲ್ಲಾ ಮಾಡುವ ಅಗತ್ಯ ವಿಲ್ಲ ಎನ್ನುತ್ತಾರೆ ಕೆಲ ಕಲಾವಿದರು.
ಬಾಲಪಾಠ ಓರ್ವ ಕಲಾವಿದನಿಗೆ ಅಗತ್ಯ ಎನ್ನುತ್ತಾರೆ 99 ರ ಹರೆಯದ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲ ರಾಯರು. ಅಂದರೆ ಭಾಗವತನಾಗುವವನು ಮೊದಲು ಲಯ, ತಾಳ,ರಾಗಜ್ಞಾನ , ಸಾಹಿತ್ಯ ಜ್ಞಾನ ರಂಗ ತಂತ್ರಗಳನ್ನು ಕಲಿತು ಹಂತ ಹಂತವಾಗಿ ಮೇಲೆ ಬರಬೇಕಾಗುತ್ತದೆ. ಸಮರ್ಥ ಗುರುವೊಬ್ಬನ ಮಾರ್ಗದರ್ಶನವಿಲ್ಲದೆ ಯಶಸ್ವಿ ಭಾಗವತನಾಗುವುದು, ಕಲಾವಿದನಾಗುವುದು ಯಕ್ಷರಂಗದಲ್ಲಿ ಅಸಾಧ್ಯ, ಹೀಗೆ ಪರಂಪರೆಯಿಂದ ಯಕ್ಷರಂಗವನ್ನು ಬೆಳಗಿದವರು ಹಲವು ಗುರುಗಳು ಮತ್ತು ಶಿಷ್ಯರು…
ಮುಂದುವರಿಯುವುದು…