Advertisement

ಬಯಲಾಟ- ಗಾನಾಮೃತಗಳ ಸಾರಸ್ವತ ವಿಭವ

05:42 PM May 09, 2019 | mahesh |

ಕಿನ್ನಿಗೋಳಿಯ ಮೋಹಿನೀ ಕಲಾಸಂಪದ ಮನೆಯ ಸದಸ್ಯ, ಹಿರಿಯ ಹವ್ಯಾಸಿ ಕಲಾವಿದ, ಮಂಗಳೂರು ವಿವಿಯ ಅತಿಥಿ ಉಪನ್ಯಾಸಕ ಪ್ರೊ| ಸದಾಶಿವ ಶೆಟ್ಟಿಗಾರ ಇವರು ತಮ್ಮ ವಾಸಸ್ಥಳ ಮೂಡುಬಿದಿರೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಆರಾಧನಾ ಕಲಾಪರ್ವ ಎಂಬ ನಿರಂತರ ಇಪ್ಪತ್ತೆರಡು ತಾಸುಗಳ ಕಾಲ ಯಕ್ಷವೈಭವ ಉಣಬಡಿಸಿದರು.

Advertisement

ಮೂರು ತಾಸುಗಳ ಕಾಲ ಛಾಂದಸ ಕವಿ ಗಣೇಶ ಕೊಲೆಕಾಡಿ ಅವರ ಶಿಷ್ಯವೃಂದದವರಿಂದ ಅವರದೇ ಪ್ರಸಂಗಾಧಾರಿತ ಪದ್ಯಗಳ ಯಕ್ಷಗಾನಮೃತ ಸಿಂಚನ ಕಾರ್ಯಕ್ರಮದ ಶೋಭೆ ಹೆಚ್ಚಿಸಿತು. ಮೇಳಗಳಲ್ಲಿ ಕೆಲಸ ಮಾಡುವ ಅವರ ಶಿಷ್ಯವರ್ಗದ ದಿನೇಶ್‌ ಭಟ್‌ ಯಲ್ಲಾಪುರ, ಭವ್ಯಶ್ರೀ ಕುಲ್ಕುಂದ, ದೇವರಾಜ ಆಚಾರ್ಯ, ಗುರುರಾಜ ಉಪಾಧ್ಯಾಯ, ಪ್ರಜ್ವಲ್‌ ಪೆಜತ್ತಾಯ, ಮುಂತಾದ ಹಲವಾರು ಭಾಗವತರು, ವಾದಕರು, ಭಾಗವಹಿಸಿದರು.

ರಾತ್ರಿ ಶ್ರೀ ಮಂದಾರ್ತಿ ಮೇಳದವರಿಂದ “ಪಂಚ ಬಾಲೋದ್ವಹನ’ (ತಾರಾ, ಮಂಡೋದರಿ,ಅಹಲ್ಯಾ,ಸೀತಾ,ದ್ರೌಪದಿವಿವಾಹ) ಎಂಬ ಪಂಚಕಲ್ಯಾಣ ಪ್ರಸಂಗಗಳಲ್ಲಿ ಅಜ್ರಿ ಗೋಪಾಲರ-ವಾಲಿ ಮತ್ತು ದಶರಥ, ಸಾಮ ನಾಯ್ಕರ- ದೇವೇಂದ್ರ, ನಾಗರಾಜ ಗೋಳಿ ಅಂಗಡಿಯವರ- ವಿಷ್ಣು, ವಿಠಲ ತೋಟಾಡಿಯವರ ಮಂಡೋದರಿ, ಭಾಸ್ಕರ ಕುಪ್ಪಾರು-ರಾವಣ, ಚಂದ್ರ ಕುಲಾಲ- ಗೌತಮ ಮತ್ತು ಕೌರವ, ಜಯಾನಂದರ-ವಿಶ್ವಾಮಿತ್ರ, ಪ್ರಸನ್ನ- ಶ್ರೀರಾಮ, ನಾಗರಾಜ ಆಚಾರ್ಯ- ಅಂಗಾರ ಪರ್ಣ, ಚಂದ್ರಶೇಖರ ಹೆಗಡೆ- ದ್ರುಪದ, ಮತ್ತು ಇನ್ನುಳಿದ ಕಲಾವಿದರು ತಮ್ಮ ಪಾತ್ರಗಳಲ್ಲಿ ಮಿನುಗಿ ಯಕ್ಷರಸದೌತಣ ನೀಡಿದರು.ಹಿರಿಯ ಕಲಾವಿದ ಅಜ್ರಿ ಗೋಪಾಲರ ಸಮುದ್ರ ಮಥನದ ವಾಲಿ ಮತ್ತು ಅಹಲ್ಯಾ ವಿವಾಹದ ನೀರ್ಜೆಡ್ಡುರವರ ಗೌತಮ ಚಿರಕಾಲ ನೆನಪಲ್ಲುಳಿಯುವಂತೆ ಇತ್ತು.

ಸದಾಶಿವ ನೆಲ್ಲಿಮಾರ್‌

Advertisement

Udayavani is now on Telegram. Click here to join our channel and stay updated with the latest news.

Next