Advertisement

ಯಕ್ಷಗಾನ ಕಲಾವಿದರಾದ ಸಾಂತೂರು ಸದಾಶಿವ ರಾವ್, ಶಿವರಾಮ ಶೆಟ್ಟಿ ವಿಧಿವಶ

04:11 PM Dec 10, 2021 | Team Udayavani |

ಶಿವಮೊಗ್ಗ /ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದರಾದ ಶಿವರಾಮ ಶೆಟ್ಟಿ ಹೊಸಕೊಪ್ಪ ಮತ್ತು ಸಾಂತೂರು ಸದಾಶಿವ ರಾವ್ ಡಿಸೆಂಬರ್ 09 ಗುರುವಾರ ಇಹಲೋಕ ತ್ಯಜಿಸಿದ್ದಾರೆ.

Advertisement

ಸಾಂತೂರು ಸದಾಶಿವ ರಾವ್ 

ಬಹುಶ್ರುತ ವಿದ್ವಾಂಸ ಹವ್ಯಾಸಿ ವೇಷಧಾರಿ, ಅರ್ಥಧಾರಿ, ಧಾರ್ಮಿಕ ಪ್ರವಚನಕಾರರಾದ ನಿವೃತ್ತ ಉಪನ್ಯಾಸಕ ಸಾಂತೂರು ಸದಾಶಿವ ರಾವ್ ಅವರು ಪತ್ನಿ ಹಾಗೂ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ವಿಶೇಷ ಕೊಡುಗೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದಾರೆ. ನೂರಾರು ಶಿಷ್ಯರನ್ನು ರೂಪಿಸಿದ್ದಾರೆ.

ಶಿವರಾಮ ಶೆಟ್ಟಿ ಹೊಸಕೊಪ್ಪ 

Advertisement

ಯಕ್ಷಗಾನ ಕಲಾವಿದ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ (69) ಡಿಸೆಂಬರ್ 09 ಗುರುವಾರ ನಿಧನ ಹೊಂದಿದರು. ಅವರು ಪತ್ನ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಗಂಭಿರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಶಿವರಾಮ ಶೆಟ್ಟಿಯವರು ತೆಂಕು ತಿಟ್ಟು ಮತ್ತು ಬಡಗು ತಿಟ್ಟುಗಳಲ್ಲಿ ಸಮರ್ಥ ವೇಷಧಾರಿಯಾಗಿದ್ದರು.

ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಗೋಳಿಗರಡಿ, ಮಾರಣಕಟ್ಟೆ, ನಾಗರಕೋಡಿಗೆ, ಸೌಕೂರು, ಹೊಸಳ್ಳಿ, ರಂಜದಕಟ್ಟೆ ಮೇಳಗಳಲ್ಲಿ ಕಲಾಸೇವೆಗೈದಿದ್ದರು. ಕಟೀಲು ಮೇಳದಲ್ಲಿ ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಸೇವೆ ಗೈದ ಇವರು ಈ ವರ್ಷ ನಿವೃತ್ತರಾಗಿದ್ದರು.

ಇಬ್ಬರು ಹಿರಿಯ ಕಲಾವಿದರ ನಿಧಾನಕ್ಕೆ ಯಕ್ಷಗಾನ ರಂಗ ಕಂಬನಿ ಮಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next