Advertisement

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಅಡೂರು ಗಣೇಶ್‌ ಇನ್ನಿಲ್ಲ

11:51 AM Dec 11, 2018 | |

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ಲೋಕದ ಪ್ರಸಿದ್ಧ ಕಲಾವಿದ ಧರ್ಮಸ್ಥಳ ಮೇಳದ ಹಿಮ್ಮೇಳ  ವಾದಕ ಅಡೂರು ಗಣೇಶ್‌ ರಾವ್‌ ಅವರು ಮಂಗಳವಾರ ಬೆಳಗ್ಗೆ  ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. 

Advertisement

ಲಿವರ್ ಸಮಸ್ಯೆಯಿಂದ ಬಳಲುತಿದ್ದ ಅವರು ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

 

ತೆಂಕುತಿಟ್ಟಿನ ಪ್ರತಿಭಾಸಂಪನ್ನ ಕಲಾವಿದರಾಗಿದ್ದ ಅಡೂರು ಗಣೇಶ್‌ ರಾವ್‌ ಅವರು ಸಮಾರು 30 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು.ಚಂಡೆ,ಮದ್ದಳೆಯ ಕೈಚಳಕದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿರಸಿದ್ದರು. ಮುಮ್ಮೇಳದಲ್ಲೂ ಅಪಾರ ಅನುಭವವಿರುವ ರಾವ್‌ ಅವರು ಮೊದಲು ವೇಷಧಾರಿಯಾಗಿದ್ದವರು. 

ದೇಶ ವಿದೇಶದಲ್ಲೂ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಗಣೇಶ್‌ ರಾವ್‌ ಅವರು ಬಹುಬೇಡಿಕೆಯ ಕಲಾವಿದರಾಗಿದ್ದರು. 

Advertisement

ಗಣೇವ್‌ ರಾವ್‌ ಅವರ ನಿಧನಕ್ಕೆ ಗಣ್ಯರು ಸೇರಿದಂತೆ ನೂರಾರು ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.

ಗಣೇಶ್‌ ರಾವ್‌ ಅವರು ಪತ್ನಿ,ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next