Advertisement

ಯಕ್ಷಗಾನ ಕಲೆ ಸರ್ವಾಂಗ ಸುಂದರ: ಪಲಿಮಾರು ಶ್ರೀ

11:52 PM Dec 19, 2019 | Sriram |

ಉಡುಪಿ: ಯಕ್ಷಗಾನ ಕಲೆ ಸರ್ವಾಂಗ ಸುಂದರವಾದುದು. ಅದು ಎಲ್ಲರನ್ನೂ ಏಕಕಾಲದಲ್ಲಿ ಸಂತೋಷ ಗೊಳಿಸುತ್ತದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ಗಾನ ಕಲಾರಂಗದ ಸಹಕಾರದಲ್ಲಿ ಗುರುವಾರ ರಾಜಾಂಗಣದಲ್ಲಿ ಕಿಶೋರ ಯಕ್ಷ ಗಾನ ಸಂಭ್ರಮದ ಸಮಾರೋಪ ದಲ್ಲಿ ಅವರು ಆಶೀರ್ವಚನ ನೀಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಿದ ಜಯಂತ ಕುಮಾರ್‌, ಸದಾನಂದ ಐತಾಳರೇ ಮೊದಲಾದ ಗುರುಗಳನ್ನು ಸಮ್ಮಾನಿಸಲಾಯಿತು. ಆಯಾ ಶಾಲೆಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಟ್ರಸ್ಟ್‌ ಉಪಾಧ್ಯಕ್ಷರಾದ ಅಂಬಲ ಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಶುಭ ಕೋರಿದರು. ಯಕ್ಷಗಾನ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ತಮ್ಮ ಅಪೂರ್ವ ಅನುಭವಗಳನ್ನು ಹಂಚಿಕೊಂಡರು. ಕಲಾರಂಗದ ಅಧ್ಯಕ್ಷ ಗಣೇಶ ರಾವ್‌ ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಪ್ರೊ| ನಾರಾಯಣ ಹೆಗಡೆ ಸ್ವಾಗತಿಸಿ, ಎಸ್‌.ವಿ. ಭಟ್‌ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next