Advertisement

“ಯಕ್ಷಗಾನ ಕಲೆ ಚೌಕಟ್ಟನ್ನು ಮೀರದಿರಲಿ’

10:15 AM Mar 31, 2017 | |

ಸುಳ್ಯ:  ನನ್ನ ಅಭಿನಯವನ್ನು ರಸಿಕರು ಮೆಚ್ಚುತ್ತಾರೆ. ಪ್ರೇಕ್ಷಕರಿಗಾಗಿ ನಾನಿದ್ದೇನೆ.  ತನಗೆ ಅಭಿಮಾನಿಗಳ ದೊಡ್ಡ ಬಳಗ ಇದೆ. ತಾನು ಮಾಡಿದ್ದೇ ಕಲೆ ಎನ್ನುವ ಅಹಂ ಕಲಾವಿದರಲ್ಲಿ ಉಂಟಾದರೆ ಕಲೆಗೆ ಅಪಾಯ ಕಟ್ಟಿಟ್ಟದ್ದು. ಕಲೆಗೆ ತನ್ನದೇ ಆದ ಚೌಕಟ್ಟು ಇದೆ. ಅದನ್ನು ಎಂದೂ ಮೀರಬಾರದು ಎಂದು ಜಾನಪದ ಸಂಶೋಧಕ ಡಾ| ಸುಂದರ ಕೇನಾಜೆ ಹೇಳಿದರು.

Advertisement

ಅವರು ಸುಳ್ಯದಲ್ಲಿ ನಡೆದ ಯಕ್ಷಗಾನ ಉಪನ್ಯಾಸ, ಸಮ್ಮಾನ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಸುಳ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಸಮ್ಮಾನಿತರನ್ನು ಅಭಿನಂದಿಸಿ ಮಾತನಾಡಿದ ಡಾ| ಕೇನಾಜೆ ಅವರು ಅರುವ ಕೊರಗಪ್ಪ ಶೆಟ್ಟಿ ಅವರು ಯಕ್ಷಗಾನದ ಗಾರುಡಿಗ, ಯಕ್ಷಗಾನವನ್ನು ಜೀವಂತವಾಗಿರಿಸಿದ್ದಾರೆ. ಗುಡ್ಡಪ್ಪ ಸುವರ್ಣ ಅವರು ತನ್ನನ್ನು ತಾನೇ ಬೆಳೆಸಿಕೊಂಡ ಕಲಾವಿದ ಎಂದ ಅವರು ಕಲಾವಿದರನ್ನು ಸಮ್ಮಾನಿಸುವುದರಿಂದ ಕಲೆಗೆ ಹೆಚ್ಚಿನ ಗೌರವ ಬರುತ್ತದೆ ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶ್ಯಾಮ್‌ಪ್ರಸಾದ್‌ ಮಡ್ತಿಲ ವಹಿಸಿದ್ದರು.

ಹಿರಿಯ ಯಕ್ಷಗಾನ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ ಮತ್ತು ಗುಡ್ಡಪ್ಪ ಸುವರ್ಣ ಪಂಜ ಅವರನ್ನು ಸಮ್ಮಾನಿಸಲಾಯಿತು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್‌ ಶಿವರುದ್ರಪ್ಪ ಎಸ್‌.ಎಚ್‌. ಅವರು ಮಾತನಾಡಿ, ಕಲಾ ಸಂಘಟನೆಗಳ ಯಜಮಾನರು ಆರ್ಥಿಕವಾಗಿ ಬೆಳೆದಷ್ಟೇ ಕಲೆ ಬೆಳೆಯಲು ಸಾಧ್ಯ. ಮುಖ್ಯವಾಗಿ ಕಲಾವಿದರನ್ನು ಬೆಳೆಸಬೇಕೆಂದರು.

Advertisement

ಕ.ಸಾ.ಪ. ತಾಲೂಕು ಅಧ್ಯಕ್ಷ ಡಾ| ಹರಪ್ರಸಾದ್‌ ತುದಿಯಡ್ಕ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಯಕ್ಷಗಾನಕ್ಕೆ ಜನಾಕರ್ಷಣೆಯ ಶಕ್ತಿ ಇದೆ. ಈ ಕಲೆಗೆ ಉತ್ತಮ ಭವಿಷ್ಯವಿದೆ ಎಂದರು.

ಶಿವಪ್ರಸಾದ್‌ ಸ್ವಾಗತಿಸಿ, ಪೃಥ್ವಿಕುಮಾರ್‌ ವಂದಿಸಿದರು. ಶಿಕ್ಷಕಿ ಜಲಜಾಕ್ಷಿ ನಿರೂಪಿಸಿದರು. ರತ್ನಾಕರ್‌ ಸಹಕರಿಸಿದರು. 

ಯಕ್ಷಗಾನ
ಮುಲ್ಕಿ ಬಪ್ಪನಾಡು ಮೇಳದವರಿಂದ ಕೋರªಬ್ಬು ಬಾರಗ ತುಳು ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

ತುಳು ಸೊಗಡು ಹೆಚ್ಚಳ
ರಾಜ್ಯದಲ್ಲಿ ಸಾಹಿತ್ಯ, ಸಂಸ್ಕೃತಿ, ಭಾಷೆಗಳಿಗೆ ಸಂಬಂಧಿಸಿ ಅನೇಕ ಅಕಾಡೆಮಿಗಳಿವೆ. ಅದರಲ್ಲಿ 5 ಅಕಾಡೆಮಿಗಳು ಕರಾವಳಿ ಭಾಗದಲ್ಲಿದೆ. ತುಳು ಭಾಷೆಯ ಸೊಗಡನ್ನು ಯಕ್ಷಗಾನ ಕಲೆ ಹೆಚ್ಚಿಸಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಬಿ. ಚಂದ್ರಹಾಸ ರೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next