Advertisement
ಯಕ್ಷಗಾನವು ಕರ್ನಾಟಕದ ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಮುಖ ಜನಪದ ಕಲೆ. ಇದು ಕೇವಲ ಮನೋರಂಜನೆಯ ಕಲೆಯಲ್ಲ, ಸಾಹಿತ್ಯ, ಸಂಸ್ಕೃತಿ, ಮತ್ತು ಭಾಷಾ ಶುದ್ಧಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿದೆ. ಕನ್ನಡ ಭಾಷೆಯ ಶುದ್ಧತೆ ಮತ್ತು ಸಾಂಸ್ಕೃತಿಕ ಪೈತೃಕವನ್ನು ಉಳಿಸಲು ಯಕ್ಷಗಾನವು ಅಪಾರ ಕೊಡುಗೆಯನ್ನು ನೀಡಿದೆ.
Related Articles
Advertisement
ಯಕ್ಷಗಾನವು ಒಂದು ಮುಕ್ತ ಪಾಠಶಾಲೆಯಾಗಿ ಕಾರ್ಯನಿರ್ವಹಿಸುತ್ತದೆ. ಪೌರಾಣಿಕ ಕಥೆಗಳ ಮೂಲಕ ಕನ್ನಡ ಸಾಹಿತ್ಯ, ಮಹಾಕಾವ್ಯಗಳು, ಮತ್ತು ಇತಿಹಾಸದ ಕುರಿತಾದ ಜ್ಞಾನವನ್ನು ಕನ್ನಡ ಪ್ರೇಮಿಗಳಿಗೆ ಹಂಚುತ್ತದೆ.ಈ ಕಾರಣದಿಂದ ಅಶಿಕ್ಷಿತರೂ ಕೂಡ ಪೌರಾಣಿಕ ಕಥೆಗಳನ್ನು ತಿಳಿದುಕೊಂಡಿದ್ದಾರೆ .ಸಂಸ್ಕಾರವನ್ನು ಅರಿತಿದ್ದಾರೆ .ಜೀವನ ಮೌಲ್ಯಗಳನ್ನು ತಿಳಿದಿದ್ದಾರೆ.ಆದ್ದರಿಂದಲೇ ಯಕ್ಷಗಾನವು ಇತರ ಭಾರತೀಯ ಕಲೆಗಳಿಂತ ಭಿನ್ನವಾಗಿ ಶ್ರೀಮಂತವಾಗಿ ನಿಲ್ಲುತ್ತದೆ.
ಯಕ್ಷಗಾನವು ಕನ್ನಡದ ಅನನ್ಯ ಕಲೆ ಹಾಗೂ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇಲ್ಲಿ ಭಾಷೆಯ ಸೊಗಸಿದೆ, ಉಚ್ಚಾರದಲ್ಲಿ ಸ್ಪಷ್ಠತೆಯಿದೆ, ಮಿದುಳಿಗೆ ಚಿಂತನೆಗೆ ಅವಕಾಶವಿದೆ,ಜೀವನ ಮೌಲ್ಯಗಳ ಪಾಠವಿದೆ, ಮನರಂಜನೆಯಿದೆ,ಸಂಸ್ಕಾರದ ಸಂದೇಶವಿದೆ. ಆಧುನಿಕತೆಯ ಹೊಸ್ತಿಲಿನಲ್ಲಿ, ಭಾಷೆಯ ಶುದ್ಧತೆಯನ್ನು ಕಾಪಾಡಿ ಅದರ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಸಾಗಿಸಲು ಯಕ್ಷಗಾನವು ಮಹತ್ವದ ಕೊಂಡಿಯಂತೆ ಪಾತ್ರವಹಿಸುತ್ತದೆ.ಯಕ್ಷಗಾನ ಕನ್ನಡ ಭಾಷಾ ಶುದ್ಧತೆಯನ್ನು ಕೇವಲ ರಕ್ಷಿಸುವುದಲ್ಲ, ಬದಲಾಗಿ ಕನ್ನಡ ಭಾಷೆಯನ್ನೂ ಉಳಿಸುವಲ್ಲಿ ವಿಶ್ವವಿದ್ಯಾಲಯಯಗಳಿಗಿಂತ ಹೆಚ್ಚಿನದಾದ ಕೊಡುಗೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನವನ್ನು ಕಡ್ಡಾಯಗೊಳಿಸುವ ಮೂಲಕ ಸುಲಭವಾಗಿ ಕನ್ನಡ ಭಾಷೆಯನ್ನು ವಿರೂಪಗಳಿಂದ ಉಳಿಸುವಲ್ಲಿ ಬಳಸುವಲ್ಲಿ ಮತ್ತು ಬೆಳೆಸುವಲ್ಲಿ ಕಾರ್ಯಪ್ರವರ್ತರಾಗಬೇಕಿದೆ. ಶುದ್ಧ ಬಾಷಾ ಪ್ರಯೋಗವನ್ನು ಉಳಿಸುವಲ್ಲಿ ಇಂದಿನ ಪೀಳಿಗೆಯು ಕೂಡಾ ಯಕ್ಷಗಾನದ ಮಹತ್ವವನ್ನು ಅರಿತು, ಕನ್ನಡದ ಶ್ರೇಷ್ಠತೆಯನ್ನು ಉಳಿಸುವಲ್ಲಿ ಯಕ್ಷಗಾನಕ್ಕೆ ಹೆಚ್ಚೆಚ್ಚು ಪ್ರೋತ್ಸಾಹಿಸುವುದರ ಮೂಲಕ ತನ್ನ ಕೊಡುಗೆಯನ್ನು ನೀಡಬೇಕು. ಕುಮಾರ ಸುಬ್ರಹ್ಮಣ್ಯ ಮುಳಿಯಾಲ