ರಿಂದ ಹಲವಾರು ಮಹತ್ವಾಕಾಂಕ್ಷಿ ಕಾರ್ಯ ಕ್ರಮಗಳು ಸ್ಥಗಿತಗೊಂಡಿವೆ.
Advertisement
ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ,ಯಕ್ಷ ಸಿರಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನನೀಡಲಾಗುತ್ತದೆ. ಚುನಾವಣೆ, ಅರ್ಥಿಕ ಕೊರತೆ ಮುಂತಾದ ಕಾರಣಗಳಿಂದಾಗಿ 2018ನೇ ಸಾಲಿನಲ್ಲಿ ಈ ಕಾರ್ಯಕ್ರಮ ನಡೆದಿ ರಲಿಲ್ಲ. ಅನಂತರ 2018ರ ಪ್ರಶಸ್ತಿಗೆ 2019ರ ಜುಲೈಯಲ್ಲಿ 18 ಮಂದಿಯನ್ನು ಆಯ್ಕೆ ಮಾಡ ಲಾಗಿತ್ತು. ಆಗಸ್ಟ್ ಕೊನೆ ವಾರದಲ್ಲಿ ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತಯಾರಿಯೂ ನಡೆದಿತ್ತು. ಅಷ್ಟರಲ್ಲೇ ಆಡಳಿತ ಮಂಡಳಿ ವಜಾ ಆಗಿ ಸ್ಥಗಿತಗೊಂಡಿದೆ.
ನೂರಾರು ಯಕ್ಷಗಾನ ಕೃತಿಗಳ ಡಿಜಿಟಲೀಕರಣ ಅಕಾಡೆಮಿಯ ಮಹತ್ವಾ ಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿತ್ತು. ಸೆಪ್ಟಂಬರ್ ಮೊದಲ ವಾರದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೆ ತಯಾರಿ ನಡೆಸಲಾಗಿತ್ತು. ಇದೂ ಸ್ಥಗಿತಗೊಂಡಿದೆ. ಇತರ ಅಕಾಡೆಮಿಗಳಲ್ಲೂ ಇತರ ಹಲವು ಅಕಾಡೆಮಿಗಳಿಗೂ ಪದಾ ಧಿಕಾರಿ ನೇಮಕವಾಗದೆ ಇದೇ ಸ್ಥಿತಿ ಇದೆ.
Related Articles
ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಲು ಅರ್ಜಿ ಆಹ್ವಾನಿಸಲಾ ಗಿತ್ತು ಮತ್ತು ನೂರಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದವು. ಆದರೆ ಆಯ್ಕೆ ಹಂತದಲ್ಲಿ ಅಧಿಕಾರ ಇಲ್ಲವಾಯಿತು.
Advertisement
ಕೀರ್ತಿಶೇಷ ಕಲಾವಿದರನ್ನು ಸ್ಮರಿಸುವ “ಹಿರಿಯರ ನೆನಪು’ ಎನ್ನುವ ಅಪರೂಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದರು ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕ ರಚನೆ ಜಾರಿ ಯಲ್ಲಿತ್ತು. ಇವೆಲ್ಲ ಸ್ಥಗಿತಗೊಂಡಿವೆ.
ಅಕಾಡೆಮಿಯ ಅಧ್ಯಕ್ಷನಾಗಿ ಒಂದೇ ವರ್ಷದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತಂದ ತೃಪ್ತಿ ಇದೆ. ಸರಕಾರ ಬದಲಾಯಿತೆಂದು ಅಕಾಡೆಮಿಯ ಪದಾಧಿಕಾರಿಗಳನ್ನು ಬರ್ಖಾಸ್ತುಗೊಳಿಸುವುದು ಕೆಟ್ಟ ಸಂಪ್ರದಾಯ. ನನಗೆ ಅಧಿಕಾರ ಹೋಗಿದೆ ಎನ್ನುವ ನೋವಿಲ್ಲ. ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳಲಿಲ್ಲವಲ್ಲ ಎನ್ನುವ ಬೇಸರವಿದೆ. ಆದಷ್ಟು ಶೀಘ್ರ ಅಕಾಡೆಮಿಗೆ ಆಡಳಿತ ಮಂಡಳಿ ರಚನೆಯಾಗಲಿ. ಅವರು ನಮ್ಮ ಉತ್ತಮ ಕೆಲಸಗಳನ್ನು ಮುಂದುವರಿಸಲಿ ಎನ್ನುವುದೇ ಕೋರಿಕೆಯಾಗಿದೆ.– ಎಂ.ಎ. ಹೆಗಡೆ
ನಿಕಟಪೂರ್ವ ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ ಮಂಜೂರಾಗಿ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹೊಸ ಆಡಳಿತ ಮಂಡಳಿ ನೇಮಕವಾದ ಮೇಲೆ ಅನುಮೋದನೆಗೊಂಡ ಕೆಲಸಗಳು ಮುಂದುವರಿಯಲಿವೆ ಮತ್ತು ಪ್ರಸ್ತಾವನೆ ಹಂತದಲ್ಲಿರುವುದರ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
-ಶಿವರುದ್ರಪ್ಪ
ರಿಜಿಸ್ಟ್ರಾರ್, ಯಕ್ಷಗಾನ ಅಕಾಡೆಮಿ -ರಾಜೇಶ್ ಗಾಣಿಗ ಅಚ್ಲಾಡಿ