Advertisement
ಪೂತನಿಯ ಮೊಲೆ ಹಾಲು ಕುಡಿಯುವ ಬಾಲಕೃಷ್ಣ ನಾಗಿ ನಾಲ್ಕನೇ ವಯಸ್ಸಿನಲ್ಲಿ ಬಡಗಿನ ರಂಗ ಪ್ರವೇಶ ಹಾಗೂ ಗಿರಿಜಾ ಕಲ್ಯಾಣದ ಗಿರಿಜೆಯಾಗಿ ತೆಂಕು ತಿಟ್ಟಿನಲ್ಲಿ ಮೊದಲ ರಂಗಪ್ರವೇಶ ಮಾಡಿದ್ದರು. ವಾಣಿಜ್ಯ ಪ್ರಾಧ್ಯಾಪಕಿ ಯಾಗುವ ಹೆಬ್ಬಯಕೆ ಇದ್ದರೂ, ಹಿಂದಿ ಪರೀಕ್ಷೆಗಳಾದ ಉತ್ತಮ, ಪ್ರವೀಣ, ವಿಶಾರದ ವಿದ್ವತ್ತನ್ನು ಪಡೆದು, ಸಾಹಿತ್ಯ ರತ್ನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದು, ಗುರುಗಳ ಪ್ರೇರಣೆಯಂತೆ ಹಿಂದಿಯಲ್ಲೇ ಎಂಎ ಮಾಡಿ ಹಿಂದಿ ಉಪನ್ಯಾಸಕಿಯಾದರು.
ಬಹುತೇಕ ಎಲ್ಲ ಪಾತ್ರಗಳಿಗೂ ಜೀವ ತುಂಬುವ, ಪಾತ್ರದ ಪರಕಾಯ ಪ್ರವೇಶಿಸುವ ಅವರು ನಾಯಕ, ಖಳ ನಾಯಕನಾಗಿಯೂ ಪಾತ್ರ ನಿರ್ವಹಿಸಿದ್ದಾರೆ. ಸುಧನ್ವ, ಕೃಷ್ಣ, ಜಾಂಬವ, ಕೌರವ, ಅರ್ಜುನ, ಸಾಲ್ವ ಪಾತ್ರಗಳಲ್ಲದೆ ಸ್ತ್ರೀ ಪಾತ್ರಗಳಲ್ಲಿಯೂ ಸ್ವಲ್ಪಮಟ್ಟಿಗೆ ಪೌರುಷ ಪ್ರದರ್ಶಿಸಬಲ್ಲ ಅಂಬೆ, ಮೀನಾಕ್ಷಿ, ದಾûಾಯಿಣಿ, ಚಿತ್ರಾಂಗದೆ ಪಂಚವ ಟಿಯ ಸೀತೆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತೆಂಕು, ಬಡಗು ಎರಡರಲ್ಲಿಯೂ ಪರಿಣತಿ ಹೊಂದಿದ್ದಾರೆ.
Related Articles
ಹಿಂದಿ ಭಾಷೆಯಲ್ಲಿ “ಪಂಚವಟಿ’ಯೆಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ಕಲೆ ಬರವಣಿಗೆಗಾಗಿ ಐ.ಬಿ.ಒ. ಹೊಸದಿಲ್ಲಿ ವತಿಯಿಂದ “ಭಾರತ್ ವಿದ್ಯಾರತ್ನ’ ಮತ್ತು ಬಿಹಾರದ ಲೋಕ ಸಂಸ್ಕೃತಿ ವಿಭಾಗದಿಂದ “ಲೋಕ ಸಾಧನಾ ಸ್ತ್ರೀ’ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜತೆಗೆ ಹುಟ್ಟೂರ ಸಮ್ಮಾನದೊಂದಿಗೆ ಹಲವಾರು ಸಂಘ- ಸಂಸ್ಥೆಗಳಿಂದ ಸಮ್ಮಾನಿಸಲ್ಪಟ್ಟಿದ್ದಾರೆ.
ಮುಂದೆ ಪೌರಾಣಿಕ ಕಥನವೊಂದನ್ನು ಇಪ್ಪತ್ತೂಂದನೇ ಶತಮಾನಕ್ಕೆ ಅನುಗುಣವಾಗಿ ಹೆಣೆಯುವ ಚಿಂತನೆಯ ಲ್ಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ, ಕೊಂಕಣಿ ಯಕ್ಷಗಾನ, ಕರ್ನಾಟಕ ಸಂಗೀತ, ಭರತನಾಟ್ಯ ಕಲಾವಿ ದೆಯೂ ಹೌದು.
Advertisement
ನೈತಿಕ ಬಲವೃದ್ಧಿಸಿಕೊಳ್ಳಿಸಮಾಜದಲ್ಲಿ ನನಗೆ ಹಲವಾರು ಸವಾಲಿನೊಂದಿಗೆ ಪ್ರೇರಣೆಯೂ ಸಿಕ್ಕಿತ್ತು. ಈ ಆಧುನಿಕ ಪ್ರಪಂಚದಲ್ಲಿ ಪುಸ್ತಕಗಳ ಮಾರ್ಕ್ಸ್ ಒಂದೇ ಎಲ್ಲದ ಕ್ಕೂ ಉಪಾಯವಲ್ಲ. ನೈತಿಕತೆ, ಆತ್ಮಶಕ್ತಿ ಅತ್ಯಗತ್ಯ. ಪುಸ್ತಕದಿಂದ ಬರುವ ಮಾರ್ಕ್ಸ್ಗಳು ಹೊಟ್ಟೆಗೆ ಹಿಟ್ಟನ್ನು ತಂದು ಕೊಡಬಲ್ಲವು. ಆದರೆ ವ್ಯಕ್ತಿತ್ವ ಕಟ್ಟಿಕೊಳ್ಳುವುದಕ್ಕೆ, ವಾಸ್ತವದ ಅರಿವಿನೊಂದಿಗೆ ನೈತಿಕ ಹೊಣೆ ಗಾರಿಕೆಯ ಅಗತ್ಯವಿದೆ. “ಕ್ರಮಿಸಿರುವ ದೂರ ಅನತಿ ಸಾಗಬೇಕಾದ ದಾರಿ ಅಮಿತ’ ಎನ್ನುವ ಮನೋಭಾವ ಬೆಳೆಸಿಕೊಂಡರೆ ಎಲ್ಲವೂ ಸಾಧ್ಯ.
-ಮಾಲತಿ ಜಿ. ಪೈ, -ಎಸ್‌ಜಿ.ನಾಯ್ಕ ಸಿದ್ದಾಪುರ