ಸುಳ್ಯದಲ್ಲಿ ಅರೆಭಾಷೆಯಲ್ಲಿ ಯಕ್ಷ ಗಾನ ತಂಡ ಕಟ್ಟುವ ನೆಲೆಯಲ್ಲಿ ಎರಡು ವರ್ಷ ನಡೆಸಿದ ಪ್ರಯತ್ನದ ಫಲವಾಗಿ ಪ್ರಪ್ರಥಮ ಅರೆಭಾಷೆ ಯಕ್ಷ ತಂಡ ವೊಂದು ಸದ್ದಿಲ್ಲದೆ ರಂಗವೇದಿಕೆಗೆ ಏರಲು ಅಣಿಯಾಗಿದೆ.
Advertisement
ಅರೆಭಾಷೆ ಯಕ್ಷಗಾನ ತಂಡಸುಳ್ಯ, ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಪ್ರಧಾನ ಆಡುಭಾಷೆ. ಹಲವು ಸಂಸ್ಕೃತಿ, ಸಾಹಿತ್ಯಗಳ ಹೂರಣ ಇರುವ ಅರೆಭಾಷೆಯ ಸೊಗಡು ಪಸರಿಸುವ ನಿಟ್ಟಿನಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅರೆಭಾಷಾ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ರಚಿಸಿದ್ದರು. ಕಳೆದ ಅವಧಿದಲ್ಲಿ ಪಿ.ಸಿ. ಜಯರಾಮ ಅಧ್ಯಕ್ಷರಾಗಿದ್ದ ಸಂದರ್ಭ ಅರೆಭಾಷೆಯಲ್ಲಿ ಸಾಹಿತ್ಯ ರಚಿಸಿ ಯಕ್ಷಗಾನ ತಂಡ ಕಟ್ಟುವ ಹೊಸ ಪ್ರಯತ್ನವೊಂದನ್ನು ರೂಪುಗೊಳಿಸಿ, ಕಾರ್ಯ ರೂಪಕ್ಕೆ ತಂದಿದ್ದರು. ಪ್ರಸ್ತುತ ಆ ಯೋಜನೆ ಕಾರ್ಯಗತಕ್ಕೆ ಸಿದ್ಧತೆ ನಡೆಯುತ್ತಲಿದೆ.
ಎರಡು ವರ್ಷಗಳ ಹಿಂದೆ ಅಕಾಡೆಮಿ ಸಹಯೋಗ ಪಡೆದು ಬೆಳ್ಳಾರೆ ಯಕ್ಷ ಕಲಾಬೋಧಿನಿಯ ಮೂಲಕ ತರಬೇತಿ ಆರಂಭಗೊಂಡಿತು. ಸಂಚಾಲಕ ಲಿಂಗಪ್ಪ ಬೆಳ್ಳಾರೆ ಮತ್ತು ಲಕ್ಷ್ಮೀಶ್ ರೈ ಅವರು ತರಬೇತಿ ನೀಡುತ್ತಿದ್ದಾರೆ. ಇಲ್ಲಿ 10 ವರ್ಷದಿಂದ 40 ವರ್ಷ ದೊಳಗಿನ 45 ಮಂದಿಗೆ ತರಬೇತಿ ನೀಡಲಾಗುತ್ತಿದೆ. ವಿಶೇಷ ಅಂದರೆ ಇಲ್ಲಿ ಅರೆಭಾಷೆ ಮಾತನಾಡುವ ಎಲ್ಲ ಜಾತಿ, ಧರ್ಮೀಯರು ಕೂಡ ಇದ್ದಾರೆ. ಜಾತಿ, ಧರ್ಮ ಮೀರಿ ಯಕ್ಷಗಾನ ತಂಡ ಕಟ್ಟುವ ಆಕಾಡೆಮಿ ಪರಿಕಲ್ಪನೆ ಇದಕ್ಕೆ ಮುಖ್ಯ ಕಾರಣ. ಶನಿವಾರ, ರವಿವಾರ ಉಚಿತ ತರಬೇತಿ ನಡೆಯುತ್ತಿದೆ. ಅಕಾಡೆಮಿ ಮೊದಲ ವರ್ಷದಲ್ಲಿ ಪ್ರತಿ ವಿದ್ಯಾರ್ಥಿಗೆ 2 ಸಾವಿರ ರೂ. ಸ್ಕಾಲರ್‌ಶಿಪ್ ನೀಡಿದೆ. ಮೊದಲ ಪ್ರದರ್ಶನ
ಕನ್ನಡ, ತುಳು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸಿ ಅದನ್ನು ಬಳಸಲಾಗುತ್ತಿದೆ. ಲಿಂಗಪ್ಪ ಬೆಳ್ಳಾರೆ, ರಂಗ ಕಲಾವಿದ ಜಯಪ್ರಕಾಶ್ ಅನುವಾದಿಸಿ ರಂಗಕ್ಕೆ ಅಳವಡಿಸಿದ್ದಾರೆ. ಈಗಾಗಲೇ ಜಾಲೂÕರಿನಲ್ಲಿ ಅರೆಭಾಷೆ ಯಕ್ಷಗಾನ ಪ್ರದರ್ಶನ ನೀಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಬೇರೆ ಕಡೆಗಳಲ್ಲಿಯೂ ಪ್ರದರ್ಶನಕ್ಕೆ ತಂಡ ಸಿದ್ಧವಾಗಿದೆ.
Related Articles
ಮೊದಲ ಹಂತದಲ್ಲಿ ಅರೆಭಾಷೆಯಲ್ಲಿ ಸಾಹಿತ್ಯ ರಚಿಸಿ ಮಾತುಗಾರಿಕೆಗೆ ಆದ್ಯತೆ ನೀಡಲಾಗಿದೆ. ಈಗ ಭಾಗವತಿಕೆ ಕನ್ನಡ ಭಾಷೆಯಲ್ಲೇ ಇದೆ. ಮುಂದಿನ ದಿನಗಳಲ್ಲಿ ಪ್ರಾತಧಾರಿಗಳು ಅಭಿನಯಿಸುವ ಕಥಾ ನಕವನ್ನು ಭಾಗವತರು ಅರೆಭಾಷೆಯಲ್ಲೇ ಹಾಡುವ ರೀತಿಯಲ್ಲಿ ಸಾಹಿತ್ಯ ರಚಿಸಲು ಉದ್ದೇಶಿಸಲಾಗಿದ್ದು, ತಯಾರಿಯೂ ನಡೆ ಯುತ್ತಿದೆ. ವೇಷಭೂಷಣ, ತಾಳ, ಚೆಂಡೆ, ನಾಟ್ಯಗಳಲ್ಲಿ ವ್ಯತ್ಯಾಸ ಇರುವುದಿಲ್ಲ.
Advertisement
ಯಕ್ಷ ಕಲಾಬೋಧಿನಿ ತಂಡಯಕ್ಷಗಾನ ಕಲಾಬೋಧಿನಿ ಮೂಲಕ ಯಕ್ಷಗಾನದ ವಿವಿಧ ಪ್ರಕಾರಗಳನ್ನು ಕಲಿಯಲು ಅವಕಾಶವಿದೆ. ಚೆಂಡೆಮದ್ದಳೆ, ನಾಟ್ಯ, ಭಾಗವತಿಕೆ, ಬಣ್ಣಗಾರಿಕೆ, ಹೀಗೆ ಎಲ್ಲ ಆಯಾಮಗಳಲ್ಲಿಯೂ ಕಲಿಕೆ ನೀಡುವುದು ಇಲ್ಲಿನ ವಿಶೇಷ. ವಾರದ ರಜಾ ದಿನದಲ್ಲಿ ಕಲಿಕೆ ನಡೆಯುತ್ತಿದೆ. ಲಿಂಗಪ್ಪ ಬೆಳ್ಳಾರೆ, ಲಕ್ಷ್ಮೀಶ ರೈ ನೇತೃತ್ವದಲ್ಲಿ ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ನಾಟ್ಯ ಕಲಿಸಲಾಗುತ್ತದೆ. ಭಾಗವತಿಕೆಯಲ್ಲಿ ದಯಾನಂದ ಮಯ್ನಾಳ, ಚೆಂಡೆಮದ್ದಳೆಯಲ್ಲಿ ಕುಮಾರ ಸುಬ್ರಹ್ಮಣ್ಯ ತರಬೇತಿ ನೀಡುತ್ತಿದ್ದಾರೆ. ಇವೆರಡಕ್ಕೂ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದೆ. ತಂಡ ತಯಾರು
ಅಕಾಡೆಮಿಯ ಸಹಕಾರದೊಂದಿಗೆ ಅರೆಭಾಷೆ ಯಲ್ಲಿಯೂ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 45 ಮಂದಿಗೆ ತರಬೇತಿ ನೀಡಲಾಗಿದೆ. ಒಂದು ಪ್ರದರ್ಶನ ನೀಡಲಾಗುತ್ತಿದೆ. ಇದು ಮೊದಲ ತಂಡ. ಮಡಿ ಕೇರಿಯಲ್ಲಿಯೂ ಕೂಡ ತರಬೇತಿ ನೀಡಬೇಕು ಎನ್ನುವ ಪ್ರಸ್ತಾವ ಇದೆ. ಮುಂದಿನ ದಿನಗಳಲ್ಲಿ ಭಾಗವತಿಕೆಗೂ ಅರೆಭಾಷೆ ಬಳಸುವ ಇರಾದೆ ಇದೆ.
– ಲಿಂಗಪ್ಪ ಬೆಳ್ಳಾರೆ, ಸಂಚಾಲಕ, ಯಕ್ಷ ಕಲಾ ಬೋಧಿನಿ ಬೆಳ್ಳಾರೆ -ಕಿರಣ್ ಪ್ರಸಾದ್ ಕುಂಡಡ್ಕ