Advertisement

ಮನೆಮನೆಯಲ್ಲಿ ಯಕ್ಷಗಾನದ ರಂಗು

06:00 AM Aug 10, 2018 | Team Udayavani |

ಅಳದಂಗಡಿಯ ಸಿದ್ಧಿವಿನಾಯಕ ಯಕ್ಷಗಾನ ಚಿಕ್ಕಮೇಳ ಎರಡು ತಿಂಗಳಿಂದ ವೇಣೂರು ಸುತ್ತಮುತ್ತಲಿನ ಪರಿಸರದಲ್ಲಿನ ಮನೆಗಳ ಚಾವಡಿಯಲ್ಲಿ ನರ್ತಿಸುವ ಮೂಲಕ ವಿನೂತನವಾಗಿ ಯಕ್ಷಗಾನವನ್ನು ಪ್ರದರ್ಶಿಸಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 

Advertisement

ಸಂಜೆ 6 ಗಂಟೆಯಿಂದ 10.30 ರ ವರೆಗೆ  ಮೊದಲೇ ತಿಳಿಸಿದ ಮನೆಗಳಿಗೆ ಹೋಗಿ ಹದಿನೈದು ನಿಮಿಷಗಳ ಆಟವನ್ನು ಪ್ರದರ್ಶಿಸುವುದು ಇವರ ವಿಶೇಷ. ಸಿದ್ಧಿವಿನಾಯಕ ಮೇಳದ ಗಣಪತಿ ಭಾಗವತರಿಂದ ಸೊಗಸಾದ ಭಾಗವತಿಗೆ, ಇವರಿಗೆ ಸಾಥ್‌ ನೀಡುವ ಮೃದಂಗ, ತಾಳ, ಇದಕ್ಕೆ ಸರಿಯಾಗಿ ಯಕ್ಷಗಾನ ಅರ್ಥದಾರಿಗಳಿಂದ ನೃತ್ಯ.

ದಶರಥ ಮಹಾರಾಜ ಯುದ್ಧ ಮುಗಿಸಿ ಅಯೋಧ್ಯೆಗೆ ಆಗಮಿಸಿದಾಗ ಕೈಕೇಯಿ ಮಾತನಾಡಿಸದೆ ಇದ್ದುದರಿಂದ ರಾಜನಿಗೆ ಬೇಸರವಾಗುತ್ತದೆ. ಕೈಕೇಯಿ ತಾನು ರಾಜ ಧಣಿದಿರಬಹುದೆಂದು ಊಹಿಸಿ ಮಾತನಾಡಿಸದೆ ಇದ್ದುದಾಗಿ ಸಂತೈಸಿದ ಪರಿಯನ್ನು ಅಚ್ಚುಕಟ್ಟಾಗಿ ತಾಳ ಲಯಬದ್ದವಾಗಿ ಸೀಮಿತ ಅವಧಿಯಲ್ಲಿ ವ್ಯಕ್ತಪಡಿಸಿದ ರೀತಿ ಮನೆಮಂದಿಗಳನ್ನು ಯಕ್ಷಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು. ಇದೇ ರೀತಿ ಚಿಕ್ಕಪುಟ್ಟ ಸನ್ನಿವೇಶಗಳನ್ನು ಬೇರೆಬೇರೆ ಮನೆಗಳಲ್ಲಿ ಆಡಿ ಜನರಲ್ಲಿ ಯಕ್ಷಗಾನ ಅಭಿರುಚಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಈ ತಂಡ. 

ವಂದನಾ ಕೇವಳ

Advertisement

Udayavani is now on Telegram. Click here to join our channel and stay updated with the latest news.

Next