Advertisement

ಯಕ್ಷಧ್ರುವ ಪಟ್ಲ ಸಂಭ್ರಮ ಉದ್ಘಾಟನೆ 

11:39 AM May 28, 2018 | Team Udayavani |

ಮಹಾನಗರ: ಯಕ್ಷಗಾನ ಕಲಾವಿದರ ಜೀವನದ ಏಳಿಗೆಯ ದೃಷ್ಟಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ವೃತ್ತಿ ಕಲಾವಿದರ ಜತೆಗೆ ನಿವೃತ್ತ ಕಲಾವಿದರ ಹಿತದೃಷ್ಟಿಯಿಂದಲೂ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಪುಣ್ಯ ಕಾರ್ಯಕ್ಕೆ ದುರ್ಗಾಮಾತೆಯ ಶ್ರೀರಕ್ಷೆ ನಿರಂತರವಾಗಿರಲಿ ಎಂದು ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ವೆಂಕಟರಮಣ ಆಸ್ರಣ್ಣರು ಶುಭಹಾರೈಸಿದರು.

Advertisement

ರವಿವಾರ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಯಕ್ಷಧ್ರುವ ಪಟ್ಲ ಸಂಭ್ರಮ- 2018 ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮತ್ತೋರ್ವ ಆನುವಂಶೀಯ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಯಕ್ಷಗಾನದ ಕಲೆಯ ವೃದ್ಧಿಗೆ ಕಟೀಲು ದೇವಿಯು ಮೊದಲ ಟ್ರಸ್ಟ್‌ ಆಗಿದ್ದು, ಪಟ್ಲ ಫೌಂಡೇಶನ್‌ 2ನೇ ಟ್ರಸ್ಟ್‌ ಎನಿಸಿಕೊಂಡಿದೆ. ಭಾಗವತ ಪಟ್ಲ ಸತೀಶ್‌ ಶೆಟ್ಟಿ ಇದ್ದವರಿಂದ ಪಡೆದು ಇಲ್ಲದರಿಗೆ ಹಂಚುವ ಮೂಲಕ ಮಧುಕರ ವೃತ್ತಿಯನ್ನು ಮಾಡುತ್ತಿದ್ದಾರೆ ಎಂದರು.

ಆರೋಗ್ಯ ಶಿಬಿರ
ಮುಂಬಯಿನ ಹೊಟೇಲ್‌ ಉದ್ಯಮಿ ಎನ್‌.ಟಿ. ಪೂಜಾರಿ ಉದ್ಘಾಟಿಸಿದರು. ಸಾಮಾಜಿಕ ಮುಂದಾಳು ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಎ.ಜೆ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಜಯಶಂಕರ ಮಾರ್ಲ ಅವರು ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ ಸರಪಾಡಿ ಅವರಿಗೆ ಔಷಧ ಕಿಟ್‌ ಹಸ್ತಾಂತರಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.

ಬಿಡುಗಡೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಟ್ರಸ್ಟ್‌ ನ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ರಾಕೇಶ್‌ ಪೂಂಜಾ ಸಂಪಾದಕತ್ವದ ‘ಪಟ್ಲಯಾನ’ ಪುಸ್ತಕ ಬಿಡುಗಡೆಗೊಂಡಿತು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಉದ್ಯಮಿ ಸೌಂದರ್ಯ ರಮೇಶ್‌ ಡಾ| ನಾರಾಯಣ ಶೆಟ್ಟಿ ಹಾಗೂ ಗಣೇಶ್‌ ಕೊಲೆಕಾಡಿ ಅವರ ಯಕ್ಷಗಾನ ಪ್ರಸಂಗಗಳ ಸಂಪುಟವನ್ನು ಬಿಡುಗಡೆಗೊಳಿಸಿದರು.

Advertisement

ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆನುವಂಶೀಯ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ ಕಡೆತ್ತೂರುಗುತ್ತು, ಆರ್‌ಎಸ್‌ಎಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ಮಾಜಿ ಶಾಸಕ ಜೆ.ಆರ್‌.ಲೋಬೋ, ಶ್ರೀದೇವಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ, ಆದಾಯ ತೆರಿಗೆ ಇಲಾಖೆಯ ಉಪಾಯುಕ್ತ ಎಂ. ನಾಗಭೂಷಣ, ಟ್ರಸ್ಟ್‌ ಗೌರವಾಧ್ಯಕ್ಷ ಮಹಾಬಲ ಶೆಟ್ಟಿ ಪಟ್ಲ, ನಿಟ್ಟೆ ವಿವಿ ಕುಲಪತಿ ಡಾ| ಸತೀಶ್‌ ಭಂಡಾರಿ, ಡಾ| ಪ್ರಭಾಕರ ಜೋಶಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಸ್ವಾಗತಿಸಿದರು. ರವಿ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಹಾಗೂ ಪ್ರ. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌ ನಿರ್ವಹಿಸಿದರು.

ನಾಡಿಗೆ ಹೆಮ್ಮೆಯ ವಿಚಾರ
ರಾಜ್ಯ ಯಕ್ಷಗಾನ ಅಕಾಡೆಮಿಯು ಒಂದು ವರ್ಷದಲ್ಲಿ ವೆಚ್ಚ ಮಾಡುವ ಮೊತ್ತವನ್ನು ಪಟ್ಲ ಫೌಂಡೇಶನ್‌ ಒಂದು ದಿನದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿ ವ್ಯಯಿಸುತ್ತಿರುವುದು ಇಡೀ ನಾಡೇ ಹೆಮ್ಮೆ ಪಡಬೇಕಾದ ವಿಚಾರ. ಸರಕಾರ ಇದೇ ರೀತಿ ಚಿಂತಿಸಿ ಕಲಾವಿದರಿಗೆ ನೆರವಾಗುವ ಕಾರ್ಯವನ್ನು ಮಾಡಬೇಕಿದೆ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಟ್ರಸ್ಟ್‌ ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next