Advertisement

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಂಗಳೂರು ಮುಂಬಯಿ ಘಟಕದಿಂದ ವಿಶೇಷ ಸಭೆ

04:53 PM Jun 09, 2017 | |

ಮುಂಬಯಿ: ಕಲಾವಿದನಿಂದ, ಕಲಾವಿದರಿಗಾಗಿ, ಕಲಾವಿದರಿಗೋಸ್ಕರ ಸ್ಥಾಪನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಾಡುತ್ತಿರುವ ಕಲಾಸೇವೆ, ಕಲಾವಿದರ ಸೇವೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಒಂದು ಸರಕಾರ ಮಾಡದೇ ಇರುವ ಕೆಲಸವನ್ನು ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪಟ್ಲ ಸತೀಶ್‌ ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಾಡಿ ತೋರಿಸಿದೆ. ಫೌಂಡೇಷನ್‌ನ ಘಟಕಗಳು ದೇಶ-ವಿದೇಶಗಳಲ್ಲಿ ಹರಡಿರುವುದನ್ನು ಕಂಡಾಗ ಪಟ್ಲ ಸತೀಶ್‌ ಶೆಟ್ಟಿ ಅವರ ಈ ಸೇವೆ ಎಷ್ಟರ ಮಟ್ಟಿಗೆ ಯಶಸ್ವಿಯತ್ತ ಸಾಗುತ್ತಿದೆ ಎಂಬುವುದು ನಮಗೆ ಅರ್ಥವಾಗುತ್ತಿದೆ. ಅವರ ಈ ಸೇವೆಗೆ ಎಲ್ಲರ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಗಸ್ಟ್‌ 13 ರಂದು ಫೌಂಡೇಷನ್‌ನ ಮುಂಬಯಿ ಘಟಕದ ವಾರ್ಷಿಕೋತ್ಸವ ಸಂಭ್ರಮವು ಬಂಟರ ಭವನದಲ್ಲಿ ಅಪರಾಹ್ನ 2 ರಿಂದ ರಾತ್ರಿ 9 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದೊಂದು ಮನೋರಂಜನೆಗಾಗಿ ಮಾಡಲು ನಾವು  ಹೊರಟ್ಟಿಲ್ಲ. ಬದಲಾಗಿ ಇದೊಂದು ಪುಣ್ಯದ ಕಾರ್ಯ ಎಂದು ತಿಳಿದು ಮುಂಬಯಿ ಘಟಕವು ‘ಮುಂಬಯಿಯಲ್ಲಿ ಪಟ್ಲ ಸಂಭ್ರಮ’ಕ್ಕೆ ಮುಂದಾಗಿದೆ. ಸಂಭ್ರಮದ ಯಶಸ್ಸಿಗೆ ಮುಂಬಯಿಯ ಎಲ್ಲಾ ಕಲಾವಿದರು, ದಾನಿಗಳು, ಕಲಾಭಿಮಾನಿಗಳು ತುಂಬು ಹೃದಯದಿಂದ ಸಹಕರಿಸಬೇಕು. ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಐಕಳ ಹರೀಶ್‌ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಜೂ. 7 ರಂದು ಅಪರಾಹ್ನ ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ವಾರ್ಷಿಕೋತ್ಸವ ಸಂಭ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ ಜರಗಲಿದ್ದು, ಈ ಸಂದರ್ಭದಲ್ಲಿ ಮುಂಬಯಿ ಘಟಕದ ವತಿಯಿಂದ ದೊಡ್ಡ ಮೊತ್ತದ ನಿಧಿಯನ್ನು ದಾನಿಗಳಿಂದ ಸಂಗ್ರಹಿಸಿ ಫೌಂಡೇಷನ್‌ ಮುಖಾಂತರ ಅಶಕ್ತ ಕಲಾವಿದರಿಗೆ ನೀಡಿ ಅವರ ಬದುಕಿಗೆ ಆಶಾಕಿರಣವಾಗುವ ಆಶಯ ನಮ್ಮಲ್ಲಿದೆ. ಮುಂಬಯಿಯಲ್ಲೂ ಅಶಕ್ತ ಕಲಾವಿದರಿದ್ದು, ಅವರನ್ನು ಗುರುತಿಸಿ ಅವರಿಗೆ ಸಹಕರಿಸುವ ಕಾರ್ಯವು ನಮ್ಮಿಂದಾಗಬೇಕು. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಪಟ್ಲ ಸತೀಶ್‌ ಶೆಟ್ಟಿ ಅವರ ಈ ಬೃಹತ್‌ ಯೋಜನೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಬೇಕೇ ಬೇಕು. ಈ ನಿಟ್ಟಿನಲ್ಲಿ ಫೌಂಡೇಷನ್‌ನ ಮುಂಬಯಿ ಘಟಕವು ಶ್ರಮಿಸಲಿದೆ ಎಂದು ನುಡಿದು ಸಂಭ್ರಮಕ್ಕೆ ಶುಭಹಾರೈಸಿದರು.

ಮುಂಬಯಿ ಘಟಕದಿಂದ ಬಹಳಷ್ಟು ನಿರೀಕ್ಷೆಯಿದೆ: ಪಟ್ಲ ಸತೀಶ್‌ ಪಟ್ಲ

ಫೌಂಡೇಷನ್‌ನ ಸ್ಥಾಪಕ ಯಕ್ಷಚಕ್ರೇಶ್ವರ ಪಟ್ಲ ಸತೀಶ್‌ ಶೆಟ್ಟಿ ಅವರು ಪಾಲ್ಗೊಂಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೇ 28 ರಂದು ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಸಂಸ್ಥೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವ ಪಟ್ಲ ಸಂಭ್ರಮದ ಯಶಸ್ಸಿಗಾಗಿ ಸಹಕರಿಸಿದ ಮುಂಬಯಿ ದಾನಿಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತಿದ್ದೇನೆ. ಮೇ 28 ರ ಪಟ್ಲ ಸಂಭ್ರಮದಲ್ಲಿ 28.05 ಲಕ್ಷ ರೂ. ಗಳನ್ನು ಅಶಕ್ತ ಕಲಾವಿದರ ಜೀವನಕ್ಕಾಗಿ,  ಅವರ ಮಕ್ಕಳಿಗೆ ಶೈಕ್ಷಣಿಕವಾಗಿ ಹಂಚಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಒಂದು ಕೋ. ರೂ. ಗಳಿಗೂ ಅಧಿಕ ಮೊತ್ತದ ನೆರವನ್ನು ಕಲಾವಿದರಿಗೆ ನೀಡುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಅಶಕ್ತ ಕಲಾವಿದರ ಕಲ್ಯಾಣಕ್ಕಾಗಿ ನಾನು ಕಂಡ ಕನಸಿನ ನನಸಿಗಾಗಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಕಲಾವಿದರ ಪರವಾಗಿ ವಂದಿಸುತ್ತಿದ್ದೇನೆ. ಮುಂಬಯಿಯಲ್ಲಿ ಈಗಾಗಲೇ ಸಂಸ್ಥೆಯ ನಿಧಿ ಸಂಗ್ರಹಕ್ಕಾಗಿ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮುಂದೆಯೂ ದಾನಿಗಳ ಸಹಕಾರ ದೊರೆಯುತ್ತದೆ ಎನ್ನುವ ಭರವಸೆಯಿದೆ. ಕಲೆ, ಕಲಾವಿದರನ್ನು ಬೆಳೆಸುವ ಕಾರ್ಯದಲ್ಲಿ ಫೌಂಡೇಶನ್‌ ಮುಂದಣ ಹೆಜ್ಜೆಯನ್ನಿಟ್ಟಿದೆ. ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮತ್ತು ಅಧ್ಯಕ್ಷ ಕಡಂದರೆ ಸುರೇಶ್‌ ಭಂಡಾರಿ ಅವರ ನೇತೃತ್ವದ ಈ ಘಟಕದಿಂದ ಫೌಂಡೇಷನ್‌ ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದು,  ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನ ಹಾಗೂ ಫೌಂಡೇಷನ್‌ನ ಮೇಲೆ ಸದಾಯಿರಲಿ ಎಂದು ನುಡಿದರು.

ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಂಗಳೂರು ಉಪಾಧ್ಯಕ್ಷರು ಹಾಗೂ ಮುಂಬಯಿ ಘಟಕದ ಸಂಚಾಲಕರುಗಳಾದ ಗಣೇಶ್‌ ಶೆಟ್ಟಿ ಐಕಳ, ಅಶೋಕ್‌ ಶೆಟ್ಟಿ ಪೆರ್ಮುದೆ ಅಶೋಕ್‌ ಇಂಡಸ್ಟಿÅàಸ್‌, ಮುಂಬಯಿ ಘಟಕದ ಉಪಾಧ್ಯಕ್ಷರುಗಳಾದ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಅಶೋಕ್‌ ಪಕ್ಕಳ, ಗೌರವ ಕೋಶಾಧಿಕಾರಿಗಳಾದ ಬಾಬು ಶೆಟ್ಟಿ ಪೆರಾರ ಮತ್ತು ಸಿಎ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗೌರವ ಸಲಹೆಗಾರ ರವೀಂದ್ರನಾಥ್‌ ಎಂ. ಭಂಡಾರಿ ಅವರು ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಸುರೇಶ್‌ ಶೆಟ್ಟಿ ಮರಾಠ, ಕಲಾಜಗತ್ತು ಹರೀಶ್‌ ಶೆಟ್ಟಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳವಕಾಶ ಒದಗಿಸಿದ ಅವೆನ್ಯೂ ಹೊಟೇಲ್‌ನ ಮಾಲಕ, ದಾನಿ ರಘುರಾಮ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಅಶೋಕ್‌ ಪಕ್ಕಳ ವಂದಿಸಿದರು.

Advertisement

ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ  
ಆಗಸ್ಟ್‌ 13 ರಂದು ಅಪರಾಹ್ನ 2 ರಿಂದ ರಾತ್ರಿ 9 ರವರೆಗೆ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ವತಿಯಿಂದ “ಮುಂಬಯಿಯಲ್ಲಿ ಪಟ್ಲ  ಸಂಭ್ರಮ’ ವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ ಮುಂಬಯಿಯ ಅಶಕ್ತ ಕಲಾವಿದರನ್ನು ಗುರುತಿಸಿ ಅವರಿಗೆ ಸಹಕರಿಸುವ ಹಾಗೂ ಕಲೆ, ಕಲಾವಿದರ ಶ್ರೇಯೋಭಿವೃದ್ದಿಗೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಝೇಂಕರಿಸಲಿದೆ “ಮುಂಬಯಿಯಲ್ಲಿ  ಪಟ್ಲ ಸಂಭ್ರಮ’
ಅಡ್ಯಾರ್‌ನಲ್ಲಿ ನಡೆದ ಪಟ್ಲ ಸಂಭ್ರಮವು ದೇಶ-ವಿದೇಶಗಳಲ್ಲಿ ನೆಲೆಸಿರುವ ಕಲಾಭಿಮಾನಿಗಳನ್ನು ಆಕರ್ಷಿಸಿರುವ ರೀತಿಯಲ್ಲೇ “ಮುಂಬಯಿಯಲ್ಲಿ ಪಟ್ಲ ಸಂಭ್ರಮ’ ವು ಹಲವಾರು ವಿಶೇಷತೆಗಳಿಂದ ಕೂಡಿರಲಿದೆ. ಯಕ್ಷಗಾನ ಕಲೆ-ಕಲಾವಿದರನ್ನು ಒಂದೇ ವೇದಿಕೆಯಡಿಗೆ ತರುವ ಪ್ರಯತ್ನ ಇದಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೆಂಕು-ಬಡಗು  ತಿಟ್ಟಿನ ಪ್ರಸಿದ್ಧ ಭಾಗವತರಿಂದ “ಗಾನ ವೈಭವ’ ಹಾಗೂ “ನಾಟ್ಯ ವೈಭವ’, ಕರಾವಳಿಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಇನ್ನಿತರ ಕಾರ್ಯಕ್ರಮಗಳು ಮುಂಬಯಿಯಲ್ಲಿ ಪಟ್ಲ ಸಂಭ್ರಮದಲ್ಲಿ ಝೇಂಕರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next