Advertisement

ಯಕ್ಷಸಂಭ್ರಮ ಆಶಯ ಸಾರ್ಥಕ: ಪ್ರೊ|ಎಂ.ಎ.ಹೆಗಡೆ

11:49 AM Dec 29, 2018 | |

ಪುಣೆ:  ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹೊರನಾ ಡಾದ ಪುಣೆ ನಗರದಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಂಥಹ  ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯಕ್ಷಸಂಭ್ರಮವನ್ನು ನಾವು ಇಲ್ಲಿ ಆಯೋಜಿಸಿದ್ದು ಯಶಸ್ವಿಯಾದ ಇಂದಿನ ಕಾರ್ಯಕ್ರಮವನ್ನು ಕಂಡಾಗ ಅವಕಾಶ ಒದಗಿಸಿದ್ದಕ್ಕೆ ಸಾರ್ಥಕ ಕ್ಷಣವೆಂದು ಭಾಸವಾಗುತ್ತಿದೆ. ಇಲ್ಲಿ ಮದಂಗಲ್ಲು ಆನಂದ ಭಟ್‌ ಅವರಂತಹ ನಿಸ್ವಾರ್ಥ ಕಲಾಸೇವಕ ಪಾಂಗಾಳ ವಿಶ್ವನಾಥ ಶೆಟ್ಟಿಯವರಂತಹ ಸಾಧಕರು ಹಾಗೂ ಕಲೆಯ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದ ಕಲಾಪೋಷಕರು, ಕಲಾವಿದರು ಹಾಗೂ ಕಲಾರಸಿಕರ ಬಗ್ಗೆ  ಅರಿತುಕೊಳ್ಳುವ, ಭೇಟಿಯಾಗುವ ಅವಕಾಶವೂ ಒದಗಿದ್ದಕ್ಕೆ  ಮನಸ್ಸಿಗೆ ಆನಂದವಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರೊ| ಎಂ. ಎ. ಹೆಗಡೆ ನುಡಿದರು.

Advertisement

ಡಿ. 23 ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ನಡೆದ ಕರ್ನಾಟಕ ಯಕ್ಷಗಾನ  ಅಕಾಡೆಮಿ ಬೆಂಗಳೂರು ವತಿ ಯಿಂದ  ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ  ಆಶ್ರಯದಲ್ಲಿ ನಡೆದ  ಯಕ್ಷಸಂಭ್ರಮ -2018 ರ ಸಮಾರೋಪ  ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಮುಖ್ಯವಾಗಿ ನಮ್ಮ ಕರ್ನಾಟಕದ ಒಳನಾಡಿ ನಲ್ಲಿ¨ªಾಗ ನಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಇಲ್ಲದ ಭಾವ, ಬೇರುಗಳ ಹುಡುಕಾಟ, ಊರನ್ನು ಬಿಟ್ಟು ಹೊರನಾಡಿನಲ್ಲಿ¨ªಾಗ ಹೆಚ್ಚು ಎಂಬುವುದನ್ನು ಇಲ್ಲಿನ ಕನ್ನಡಿಗರನ್ನು ಕಂಡಾಗ ಪುಣೆಯಲ್ಲಿ ನಾನು ಅರಿತುಕೊಂಡೆ ಎಂದರು. 

ಯಕ್ಷಗಾನ ಕರಾವಳಿ ಹಾಗೂ ಮಲೆನಾಡಿನ ಜಿÇÉೆಗಳ ಜನರ ಸಾಂಸ್ಕೃತಿಕವಾದ ಬೇರಾಗಿದೆ. ಅದು ನಮ್ಮ ರಕ್ತದ ಕಣಕಣಗಳಲ್ಲಿ  ಬದುಕಿನಲ್ಲಿ ಅವಿಭಾಜ್ಯವಾಗಿ ಸೇರಿಕೊಂಡಿದ್ದು  ಅದನ್ನು ಜಾಗೃತಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಬಹುದಾಗಿದೆ. ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಮಾತನಾಡಿ, ನಮ್ಮ ನಾಡಿನ ಕಲೆಯಾದ ಯಕ್ಷಗಾನದೊಂದಿಗೆ ನಾವು ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ್ದೇವೆ.  ಸಾಧಾರಣವಾಗಿ  ಯಕ್ಷಗಾನವನ್ನು ಉಳಿಸುವ ಬೆಳೆಸುವ ಮಾತನ್ನು ಮಾತಿನಲ್ಲಿ ತೋರ್ಪ ಡಿಸುವವರೇ ಹೆಚ್ಚಾಗಿ ಕಾಣಸಿಗುತ್ತಾರೆ. ಅಂತಹ ಮಾತಿಗೆ ಅಪವಾದವೆಂಬಂತೆ ಪುಣೆ ಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡ ಳಿಯ ಮೂಲಕ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಮತ್ತಿತರ ಕಲಾವಿದರು ನಾಟ್ಯ ತರಬೇತಿ ನೀಡಿ ಯಕ್ಷಗಾನ ಕಲೆಯನ್ನು ಉಳಿಸುವ ಕಾಯಕದಲ್ಲಿ ತೊಡಗಿಸಿ ಕೊಂಡಿರುವುದು ಅಭಿನಂದನೀಯವಾಗಿದೆ. ಎಂದು ಹೇಳಿದರು.

ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಕೇರಳ ಸರಕಾರ ಇದರ ಕಾರ್ಯದರ್ಶಿ ಸತೀಶ್‌ ಅಡಪ ಸಂಕಬೈಲ್‌ ಇವರು ಮಾತನಾಡಿ, ಯಕ್ಷಗಾನ ಕಲೆ ಯಾವುದೇ ಪ್ರದೇಶಕ್ಕೆ ಸೀಮಿತ ವಾಗಿಲ್ಲ. ಆದುದರಿಂದ ಪುಣೆಯಲ್ಲಿ ಈ ಕಲೆ ಬೆಳೆಯಲು ವಿಪುಲವಾದ ಅವಕಾಶಗಳಿವೆ. ಇಲ್ಲಿನ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿ ಯ ಯಕ್ಷಸೇವೆ ಅಭಿನಂದನೀಯ ವಾಗಿದ್ದು ಅವರ ಉತ್ಸಾಹವನ್ನು ಮನಗಂಡು ಅಕಾಡೆಮಿ ವತಿಯಿಂದ ಇಂದಿನ ಯಕ್ಷಸಂಭ್ರಮ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯಿತು. ಕೇರಳ ಸರಕಾರ ಕೇವಲ ಯಕ್ಷಗಾನ ಅಕಾಡೆಮಿ ಯನ್ನು ಹೆಸರಿಗೆ ಮಾತ್ರ ಸ್ಥಾಪಿಸಿದ್ದು ಇದ್ದೂ ಇಲ್ಲದಂತಾಗಿದೆ ಎಂದರು.

ಪುಣೆ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಮಾತನಾಡಿ, ನಮ್ಮ ಸಂಘ ಯಾವುದೇ ಬಾಹ್ಯಾಡಂಬರವಿಲ್ಲದೆ ಕಲೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ನಮ್ಮ ನಿರೀಕ್ಷೆಗಿಂತಲೂ ಯಶಸ್ವಿಯನ್ನು ಕಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಸಂಸ್ಥೆ ಸ್ಥಾಪನೆಯಾದಂದಿನಿಂದಲೂ ಇಲ್ಲಿ ಸ್ಥಳೀಯವಾಗಿ ಕಲಾವಿದರನ್ನು ತರಬೇತಿ ನೀಡಿ ತಯಾರುಗೊಳಿಸಿ ಪ್ರದರ್ಶನ ನೀಡುವ ಮಟ್ಟದಲ್ಲಿ ಬೆಳೆಸುವ ಕಾರ್ಯದಲ್ಲಿ ಸಫಲತೆಯನ್ನು ಕಂಡಿದೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದರು.

Advertisement

ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಪುಣೆಯಲ್ಲಿ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಉದ್ದೇಶ ಸಾಧನೆಗಳು, ಭವಿಷ್ಯದ ಯೋಜನೆಗಳ ಮಾಹಿತಿ ನೀಡಿದರು. ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸತ್ಕರಿಸಲಾಯಿತು.  ಕನ್ನಡ ಮಾಧ್ಯಮ ಹೈಸ್ಕೂಲ್‌ ಪ್ರಾಂಶುಪಾಲರಾದ ಚಂದ್ರಕಾಂತ ಹಾರಕೂಡೆ ಸ್ವಾಗತಿಸಿದರು. ಪತ್ರಕರ್ತ ಕಿರಣ್‌ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು. ಆನಂದ ಭಟ್‌ ವಂದಿಸಿದರು. ಬೆಳಗ್ಗೆ ಉದ್ಘಾಟನಾ ಸಮಾರಂ ಭದ ನಂತರ ಯಕ್ಷಬಳಗ ಹೊಸಂಗಡಿ ಮಂಜೇ ಶ್ವರ ಕಲಾವಿದರಿಂದ ಶರಸೇತು ಬಂಧನ ಯಕ್ಷ ಗಾನ ತಾಳಮದ್ದಳೆ ನಡೆಯಿತು. ಸಂಜೆ ಶ್ರೀ  ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಯಕ್ಷಗಾನ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪುಣೆ ಕನ್ನಡ ಸಂಘವು ಸ್ಥಳದಾನವನ್ನು ಒದಗಿಸಿದ್ದು ಮಹಾಗಣಪತಿ ಯಕ್ಷಗಾನ ಮಂಡಳಿ ವೇಷಭೂಷಣ ಒದಗಿಸಿತ್ತು.  ಕÇÉಾಡಿ ಶ್ರೀಧರ ಶೆಟ್ಟಿ  ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಸಂಘದ ಕಲಾವಿದರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

 ಯಕ್ಷಗಾನವೆಂಬುದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸುವ ಸುಂದರ ಕಲೆಯಾಗಿದೆ. ಪುಣೆಯಲ್ಲಿ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯು ಆಸಕ್ತ ಕಲಾವಿದರಿಗೆ ತರಬೇತಿಗೊಳಿಸಿ ಯುವ ಪೀಳಿಗೆಯಲ್ಲಿ ಅದರ ಅಭಿರುಚಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರು ವುದು ಶ್ಲಾಘನೀಯವಾಗಿದೆ. ಭವಿಷ್ಯದಲ್ಲಿ ಈ ಸಂಸ್ಥೆ ಕಲಾಸೇವೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸ್ಥಾಯಿಯಾಗಿ ನೆಲೆಸಲಿ. ನಾವೆಲ್ಲರೂ ನಮ್ಮಿಂದಾದ ಪ್ರೋತ್ಸಾಹದ ನೀಡೋಣ.
      – ವಿಜಯ್‌ ಎಸ್‌. ಶೆಟ್ಟಿ  ಅಧ್ಯಕ್ಷರು, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘ

 ಇಂದಿನ ಯಾಂತ್ರೀಕೃತ ಬದುಕಿನಲ್ಲಿ ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌, ಕಂಪ್ಯೂಟರ್‌ ನಮ್ಮನ್ನು ಭವಿಷ್ಯದಲ್ಲಿ  6ಜಿಯತ್ತ ಕೊಂಡೊಯ್ಯುತ್ತಿದ್ದು ಭವಿಷ್ಯದ ದಿನಗಳನ್ನು ನೆನೆಯುವಾಗ ಭಯವಾ ಗುತ್ತಿದೆ. ಈಗಾಗಲೇ ನಮ್ಮ- ಮಕ್ಕಳ ಸಂಬಂಧ, ಪತಿ ಪತ್ನಿಯರ ನಡುವಿನ ಭಾವನಾತ್ಮಕ ಸಂಬಂಧ ದೂರವಾಗುತ್ತಿ ರುವುದು ಆತಂಕ ತರುತ್ತಿದೆ. ಆದರೂ ಇಂತಹ ಸನ್ನಿವೇಶಗಳಿಂದ ನಮ್ಮನ್ನು ಪಾರು ಮಾಡಲು ಸಾಂಸ್ಕೃತಿಕವಾದ ಒಲವಿನಿಂದ ಮಾತ್ರ ಸಾಧ್ಯವಾಗಬಹುದಾಗಿದೆ. 
– ಜಬ್ಟಾರ್‌ ಸಮೋ, ಸದಸ್ಯರು,ಕರ್ನಾಟಕ ಯಕ್ಷಗಾನ ಅಕಾಡೆಮಿ

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next