Advertisement
Related Articles
Advertisement
ಕೇಂದ್ರ ಕಚೇರಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಇದೊಂದು ಸಾಧನೀಯ ಹೆಜ್ಜೆಯಾಗಿದೆ. ಕಲೆಯ ಜತೆಗೆ ಕಲಾಕಾರರನ್ನು ಉಳಿಸಿ ಬೆಳೆಸುವ ಬೃಹತ್ ಯೋಜನೆಗೆ ಕಲಾಭಿಮಾನಿಗಳ ಸಹಯೋಗ ಅಗತ್ಯ ಎಂದರು.
ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಸ್ವಾಗತಿಸಿ ಕರ್ನಾಟಕದ ಗಂಡು ಕಲೆ ಯಕ್ಷಗಾನ ನಮ್ಮೆಲ್ಲರ ಹಿರಿಮೆಯಾಗಿದೆ. ಇದರ ಉಳಿವು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಸತೀಶ್ ಪಟ್ಲ ಅವರ ಸೇವೆ ಅನುಪಮ. ನಾವೆಲ್ಲರೂ ಒಗ್ಗೂಡಿ ಅವರ ಕನಸನ್ನು ನನಸಾಗಿಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಾಸು ಪಿ. ಸುವರ್ಣ, ಎಸ್. ಕೆ. ಹಳೆಯಂಗಡಿ, ಮದನ್‌ಕುಮಾರ್ ಗೌಡ, ಬಾಲಕೃಷ್ಣ ಎ. ಶೆಟ್ಟಿ, ಇಂದುದಾಸ್ ಶೆಟ್ಟಿ, ಕುಶಲ್ ಶೆಟ್ಟಿ, ರಂಜನಿ ಪ್ರವೀಣ್ ಶೆಟ್ಟಿ ಸೂರತ್, ರಾಧಾಕೃಷ್ಣ ಮೂಲ್ಯ, ಶಾಂತಾರಾಮ ಶೆಟ್ಟಿ ಸೂರತ್ ಮತ್ತಿತರ ಗಣ್ಯರು, ಟ್ರಸ್ಟ್‌ನ ಅಹ್ಮದಾಬಾದ್, ಬರೋಡಾ, ಸೂರತ್, ಅಂಕ್ಲೇಶ್ವರ್ ವಿಭಾಗಗಳ ಮುಖ್ಯಸ್ಥರು, ತುಳು ಸಂಘ ಬರೋಡಾ ಮತ್ತು ಕರ್ನಾಟಕ ಸಮಾಜ ಗುಜರಾತ್ ರಿಫೈನರಿ ಬರೋಡಾ, ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಕು| ವೈಷ್ಣವಿ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮದ ಮುನ್ನ ಸಾಕ್ಷÂಚಿತ್ರದ ಮೂಲಕ ಯಕ್ಷಧ್ರುವ ಸಂಸ್ಥೆಯ ಕಾರ್ಯಸಾಧನೆಗಳನ್ನು ಪ್ರದರ್ಶಿಸಲಾಯಿತು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯಲ್ಲಿ “ಶನೀಶ್ವರ ಮಹಾತೆ¾’ ಯಕ್ಷಗಾನ ಪ್ರದರ್ಶನಗೊಂಡಿತು.
ಅಶಕ್ತ ಕಲಾವಿದರಿಗೆ ಆಶಾಕಿರಣ ವಾಗುವ ದೃಷ್ಟಿಯಿಂದ ಟ್ರಸ್ಟ್‌ನ್ನು ಸ್ಥಾಪಿಸಲಾಗಿದೆ. ಕಲಾವಿದರಿಗೆ ಆರೋಗ್ಯನಿಧಿಯಂತಹ ಸೇವಾ ಯೋಜನೆಯನ್ನು ವಿಸ್ತರಿಸುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ. ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಟ್ರಸ್ಟಿನ ಸದಸ್ಯರಿಂದ ಹಾಗೂ ಯûಾಭಿಮಾನಿಗಳಿಂದ ರಕ್ತದಾನ ಶಿಬಿರವನ್ನು ಟ್ರಸ್ಟ್ ನಡೆಸಿದೆ. ಯಕ್ಷಧ್ರುವ ಸಂಸ್ಥೆಯ ಮೂಲಕ ಶೀಘ್ರವೇ ಯಕ್ಷಕಲಾ ಗ್ರಾಮ ರೂಪಿಸುವ ಭವ್ಯ ಯೋಜನೆ ನಮ್ಮದಾಗಿದೆ. ಕಲಾವಿದರಿಗೆ ವಿಮಾ ಯೋಜನೆ, ಅವರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ವೈದ್ಯಕೀಯ ನೆರವು ಸೇರಿದಂತೆ ಈಗಾಗಲೇ ಕೋಟ್ಯಾಂತರ ರೂ. ಗಳನ್ನು ಸಂಸ್ಥೆಯು ವ್ಯಯಿಸಿದೆ. ಕಲಾವಿದರಿಂದ ಕಲಾವಿದರಿಗಾಗಿ ಹುಟ್ಟಿಕೊಂಡು ಈ ಸಂಸ್ಥೆಗೆ ಎಲ್ಲರ ಸಹಕಾರ ಆಗತ್ಯವಾಗಿದೆ
– ಪಟ್ಲ ಸತೀಶ್ ಶೆಟ್ಟಿ (ಸಂಸ್ಥಾಪಕಾಧ್ಯಕ್ಷ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು).