Advertisement
ನ. 3ರಂದು ಅಪರಾಹ್ನ ಅಂಕ್ಲೇಶ್ವರದ ಮಾ ಶಾರದ ಭವನ ಪುರಭವನದ ಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗುಜರಾತ್ ಘಟಕದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಳು-ಕನ್ನಡಿಗರ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಭರವಸೆ ನೀಡಿದರು.
Related Articles
Advertisement
ಆಶೀರ್ವಚನ ನೀಡಿದ ಶ್ರೀ ಮಹಾತ್ ಶ್ರೀ ಮನಮೋಹನ್ ದಾಸ್‌ಜಿ ಗುಮನ್‌ದೇವ್ ಪಿತಾದೀಸ್ ಅವರು, ನಾನು ತುಳುವಿನ ಅರ್ಥವನ್ನು ತಿಳಿಯಲಾರೆ, ಆದರೆ ನಿಮ್ಮ ಭಾಷಾಪ್ರಿಯತೆ, ಸಂಸ್ಕೃತಿಯ ಒಲುಮೆ, ಶಿಸ್ತುಬದ್ಧ ಸಂಘಟನೆ, ಆತಿಥ್ಯ ಗೌರವದಿಂದ ಧನ್ಯನಾದೆ. ನಿಷ್ಠೆಯ ಕರ್ಮವನ್ನು ತಿಳಿಸಿ, ಉಳಿಸಿ ಬೆಳೆಸಿದವರಲ್ಲಿ ಕರ್ನಾಟಕದವರು ಪ್ರಧಾನರು. ಭಾಷೆಯಿಂದ ಭಗವಂತನನ್ನು ಆಧಾರಿಸಿಕೊಳ್ಳಬಹುದು ಎನ್ನುವುದಕ್ಕೆ ಇದೊಂದು ಕಾರ್ಯಕ್ರಮ ಸಾಕ್ಷಿಯಾಗಿದೆ. ಭಾಷೆ ಜತೆಗೆ ಸಂಸ್ಕೃತಿ ಮತ್ತು ಭಾವನೆಗಳನ್ನು ಮೈಗೂಡಿ ಮಾನವತಾವಾದಿಗಳಾಗಿ ಬಾಳಿರಿ. ಭಕ್ತಿಯ ಶಕ್ತಿಯಿಂದ ನಾವು ಬೆಳೆದು ಸರ್ವರಿಗೂ ಪ್ರೇರಕರಾಗೋಣ ಎಂದು ನುಡಿದರು.
ರಂಜನಿ ಪಿ. ಶೆಟ್ಟಿ ಸೂರತ್, ಶಿವಪ್ರಸಾದ್ ಶೆಟ್ಟಿ, ಶಶಿ ಶೆಟ್ಟಿ ಸಂತೋಷ್ ಕ್ಯಾಟರರ್, ಅಶ್ವಿತ್ ಶೆಟ್ಟಿ, ಜಯಪ್ರಕಾಶ್ ಕಣಂತೂರು ಸಹಿತ ಗಣ್ಯರನ್ನು ಗೌರವಿಸಲಾಯಿತು. ನವೀನ್ ಶೆಟ್ಟಿ ಎಡೆ¾àರ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಿರಣ್ ಪಾಟೇಲ್ ಅತಿಥಿಗಳನ್ನು ಪರಿಚಯಿಸಿದರು. ಫೌಂಡೇಶನ್‌ನ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಕರ್ನೂರು ಮೋಹನ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಹರೀಶ್ ಪೂಜಾರಿ ವಂದಿಸಿದರು. ಫೌಂಡೇಶನ್‌ನ ಸದಸ್ಯರನೇಕರು ಸೇರಿದಂತೆ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಗುಜರಾತ್ ರಾಜ್ಯದಾದ್ಯಂತ ಆಗಮಿಸಿದ್ದರು. ತನ್ಮಯ ಗುರೂಜಿ ನಿರ್ದೇಶನದ ಸ್ವರಸಪ್ತ ಬಳಗದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಯಕ್ಷಗಾನ ಕಲಾವಿದರು ಸತೀಶ್ ಶೆಟ್ಟಿ ಪಟ್ಲ ಭಾಗವತಿಕೆಯಲ್ಲಿ “ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶಿಸಿದರು.
ಕಲಾಭಿಮಾನಿಗಳ ಪ್ರೋತ್ಸಾಹವೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಯಕ್ಷಗಾನ ಕಲಾವಿದರಿಗೆ ನೆರವಾಗಿ ಈ ಸಂಸ್ಥೆ ಶ್ರಮಿಸಲಿದೆ. ಕಲೆ-ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾ ನಮ್ಮೊಂದಿಗಿರಲಿ.– ಸತೀಶ್ ಶೆಟ್ಟಿ ಪಟ್ಲ, ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಷನ್ ಯಕ್ಷಗಾನ ಆರಾಧಕರ ಸೇರುವಿಕೆಯಿಂದ ಯಕ್ಷಲೋಕ ಸೃಷ್ಟಿಯಾಗಿದೆ. ಇದಕ್ಕೆ ಸತೀಶ್ ಶೆಟ್ಟಿ ಪಟ್ಲರ ಅಭಿಮಾನವೂ ಕಾರಣ. ಇಂತಹ ಏಕತಾ ಮನೋಧರ್ಮದಿಂದ ನಾವೆಲ್ಲರೂ ಒಗ್ಗೂಡುತ್ತಾ ಕಲೆ-ಕಲಾವಿದರ ಅಭಿವೃದ್ಧಿಗೆ ಸಹಕರಿಸೋಣ.
– ಅಜಿತ್ ಶೆಟ್ಟಿ, ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗುಜರಾತ್ ಘಟಕ ಚಿತ್ರ-ವರದಿ : ರೋನ್ಸ್ ಬಂಟ್ವಾಳ್