Advertisement

“ಯಜಮಾನ’ನ ಮೆಲೋಡಿ ಗೀತೆ

06:02 AM Jan 20, 2019 | |

ಸಂಕ್ರಾಂತಿ ಹಬ್ಬದ ದಿನದಂದು “ಯಜಮಾನ’ ಚಿತ್ರದ ಮೊದಲ ಹಾಡು “ಶಿವನಂದಿ…’ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸತತ ಮೂರು ದಿನ ಯು-ಟ್ಯೂಬ್‌ ಟ್ರೆಂಡಿಂಗ್‌ನಲ್ಲಿದ್ದ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಇದರ ನಡುವೆಯೇ ನಿನ್ನೆ (ಫೆ. 19) ಚಿತ್ರದ ಮತ್ತೂಂದು ರೊಮ್ಯಾಂಟಿಕ್‌ ಹಾಡು ಬಿಡುಗಡೆಯಾಗಿದೆ.

Advertisement

ಇನ್ನೊಂದು ವಿಷಯವೆಂದರೆ, ಮೊದಲನೇ ಹಾಡಿಗಿಂತ “ಯಜಮಾನ’ನ ಎರಡನೇ ಹಾಡಿಗೆ ದುಪ್ಪಟ್ಟು ಪ್ರತಿಕ್ರಿಯೆ ಸಿಗುತ್ತಿದ್ದು, ಕವಿರಾಜ್‌ ಬರೆದ “ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗೋಣ ಬಾರೇ….’ ಎಂಬ ಸಾಲುಗಳಿಂದ ಶುರುವಾಗುವ ಎರಡನೇ ಹಾಡು ಬಿಡುಗಡೆಯಾದ ಅರ್ಧ ಗಂಟೆಯೊಳಗೆ ಸುಮಾರು 3 ಲಕ್ಷ ವೀಕ್ಷಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next