ತಾಳಿಕೋಟೆ: ಧರ್ಮ ರಕ್ಷಣಾರ್ಥ, ಗೋ ಬ್ರಾಹ್ಮಣ ರಕ್ಷಣಾರ್ಥವಾಗಿ ಆಚರಿಸಲಾಗುವ ಯಜ್ಞೋಪವೀತ ಧಾರಣ ಹಾಗೂ ರಕ್ಷಾಬಂಧನ ಕಾರ್ಯಕ್ರಮ ಪಟ್ಟಣದಲ್ಲಿ ಕ್ಷತ್ರೀಯ ಸಮಾಜ ಬಾಂಧವರ ಧಾರ್ಮಿಕ ಪದ್ಧತಿಯಂತೆ ವಿವಿಧೆಡೆ ಜರುಗಿತು.
ಶನಿವಾರ ಪಟ್ಟಣದ ರಜಪೂತ ಸಮಾಜದ ಅಂಬಾಭವಾನಿ ಮಂದಿರ, ಕ್ಷತ್ರೀಯ ಮರಾಠಾ ಸಮಾಜದ ಶಿವಭವಾನಿ ಮಂದಿರ, ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ಮಂದಿರ, ಸೋಮವಂಶ ಆರ್ಯಕ್ಷತ್ರೀಯ ಸಮಾಜದ ನಿಮಿಷಾಂಬಾದೇವಿ ಮಂದಿರ, ಜೈನ ಸಮಾಜದ ಬಸದಿ, ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನ, ಬ್ರಾಹ್ಮಣ ಸಮಾಜದ ಕೃಷ್ಣ ಮಂದಿರದಲ್ಲಿ ಯಜ್ಞೋಪವಿತ ಧಾರಣ ಕಾರ್ಯಕ್ರಮ ಹಾಗೂ ರಕ್ಷಾಬಂಧನ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯಿತು.
ಸೋಮವಂಶ ಆರ್ಯಕ್ಷತ್ರೀಯ ಸಮಾಜದ ನಿಮಿಷಾಂಬಾದೇವಿ ಮಂದಿರದಲ್ಲಿ ಅರ್ಚಕಯಲಗೂರೇಶ ಅವರು ಶ್ರೀದೇವಿಗೆ ಮಹಾಪೂಜೆ ಹಾಗೂ ಮಹಾಭಿಷೇಕ ನೆರವೇರಿಸಿದರು. ನಂತರ ಪುರುಷೋತ್ತಮಾಚಾರ್ಯ ಗ್ರಾಂಪುರೋಹಿತ ಅವರು ಹೋಮ ಹವನ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾಜದ ಹಿರಿಯ ಮಾರುತಿ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
ಸೋಮವಂಶ ಆರ್ಯಕ್ಷತ್ರೀಯ ಸಮಾಜದ ಅಧ್ಯಕ್ಷ ಬಿ.ಜಿ. ಚಿತಾಪುರ, ಉಪಾಧ್ಯಕ್ಷ ರಮೇಶ ಚವ್ಹಾಣ, ಕಾರ್ಯದರ್ಶಿ ಪ್ರಕಾಶ ಉಬಾಳೆ, ಖಜಾಂಚಿ ಪ್ರದೀಪ ಭೂಸಾರೆ, ದೊಂಡಿರಾಮ ಮೀರಜಕರ, ಬಾಬು ದರ್ಶನಕರ, ಶಂಕರರಾವ್ ಉಬಾಳೆ ಹಾಗೂ ಸಮಾಜದ ಸದಸ್ಯರುಗಳು
ಪಾಲ್ಗೊಂಡಿದ್ದರು.
ನಂತರ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ನಿಮಿಷಾಂಬಾದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ
ಘನಶಾಮ ಚವ್ಹಾಣ ವಂದಿಸಿದರು