ಕುಂಬಳೆ : ಯಜ್ಞ ಯಾಗ ,ದಾನ, ಧರ್ಮ ತಪ್ಪಸ್ಸುಗಳಿಂದ ಭೂಮಿ ಸುಭಿಕ್ಷ ಧರ್ಮ ಭೂಮಿಯಾಗುವುದು. ಭೂಮಿಯ ಮೇಲಿನ ಎಲ್ಲಾ ಕರ್ಮಗಳೂ ಯಜ್ಞಸ್ವರೂಪವಾಗಿದ್ದು, ಜಠರಾಗ್ನಿಗೆ ಅನ್ನ ಸ್ವರೂಪದ ಹವಿಸ್ಸು ಸಮರ್ಪಿಸುತ್ತೇವೆ. ವಿಜ್ಞಾನದ ನಾಗಾಲೋಟದಿಂದ ಇಂದು ಆಧ್ಯಾತ್ಮ ಸೊರಗುತ್ತಿರುವುದು ಆತಂಕ ಕಾಗಿಯಾಗಿದ್ದು, ಊಧ್ವìಮುಖೀವಾಗಿ ನೋಡುವುದನ್ನು ಮೈಗೂಡಿಸಬೇಕು. ಇಂದಿನ ವಿಜ್ಞಾನ ಸಾಧನೆಯ ಹಿಂದಿನ ಶಕ್ತಿ ಆಧ್ಯಾತ್ಮ ಸಾಧನೆಯೇ ಆಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದಂಗವಾಗಿ ಶುಕ್ರವಾರ ಜರಗಿದ ಅನುಗ್ರಹ ಸಂದೇಶ ಸಭೆಯಲ್ಲಿ ಪೂಜ್ಯರು ಮಾತನಾಡಿದರು.
ವೇದಗಳನನ್ನು ಅಧ್ಯಯನ- ಅನು ಸಂಧಾನ ಮಾಡಿದರೆ ಯಾವುದನ್ನೂ ಸಾಧಿಸಲು ಸಾಧ್ಯ. ಕಾಶ್ಮೀರದಲ್ಲಿ ಶಾಂತಿ ಸಂಸ್ಕೃತಿ ನೆಲೆಗೊಂಡದರೆ ರಾಷ್ಟ್ರ ಪರಿಪೂರ್ಣ ನೆಮ್ಮದಿಯಲ್ಲಿ ಮುನ್ನಡೆಯುವುದೆಂದು ತಿಳಿಸಿದ ಅವರು, ಕರ್ಮಯೋಗಿ, ಕಾಯ ಕಯೋಗಿಗಳ ಜೋಡಣೆಯಾಗಿ ಕೊಂಡೆವೂರಿನ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಸೋಮಯಾಗದಿಂದ ಎಲ್ಲರಿಗೂ ಒಳಿದಾಗಲಿ ಎಂದು ಹಾರೈಸಿದರು.
ಶ್ರೀಕ್ಷೇತ್ರ ಕಣಿಯೂರಿನ ಶ್ರೀ àಮಹಾಬಲ ಸ್ವಾಮೀಜಿ ಅವರು ಆಶೀರ್ವಚನ ನೀಡಿ ದಾನವತ್ವವನ್ನು ಹೋಗಲಾಡಿಸಿ ಮಾನವರಾಗಿ ಬಾಳ್ಳೋಣ ಎಂದು ನುಡಿದರು.
ಸಮಾರಂಭದಲ್ಲಿ ಹಿಂದೆ ನಡೆದ ನಕ್ಷತ್ರೇಷ್ಟಿ ಯಾಗದ ಸಾಕ್ಷÂಚಿತ್ರದ ಸಿಡಿಯನ್ನು ಪೂಜ್ಯರುಗಳು ಬಿಡುಗಡೆ ಗೊಳಿಸಿದರು. ಕೋತಮಂಗಲಂ ವಾಸುದೇವನ್ ನಂಬೂದಿರಿ ಅವರನ್ನು ಸಮ್ಮಾ¾ನಿಸಲಾಯಿತು. ಡಾ| ನಾರಾಯಣ ಭಟ್ಟತ್ತಿರಿಪ್ಪಾv ಅವರು ಸಾಧನೆಗಳ ವಿಸ್ಕೃತ ಪರಿಚಯ ನೀಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಸ್ವಾಮೀಜಿ ಉಪಸ್ಥಿತರಿದ್ದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿ,ನಿರೂಪಿಸಿ ವಂದಿಸಿದರು.