Advertisement

ಅಧಿಕಾರಿಯಿಂದ ಹಾನಿಯಾದ ಭತ್ತದ ಬೆಳೆ ವೀಕ್ಷಣೆ

05:03 PM Apr 10, 2020 | Naveen |

ಯಡ್ರಾಮಿ: ತಾಲೂಕಿನಲ್ಲಿ ಎರಡು ದಿಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಭತ್ತದ ಜಮೀನುಗಳಿಗೆ ಜಿಲ್ಲಾ ಕೃಷಿ ಉಪನಿರ್ದೇಶಕಿ ಭೇಟಿ ನೀಡಿ, ನಷ್ಟ ಹೊಂದಿದ ಗದ್ದೆಗಳನ್ನು ವೀಕ್ಷಿಸಿದರು.

Advertisement

ತಾಲೂಕಿನ ಬಳಬಟ್ಟಿ, ಬಿಳವಾರ, ಕುರುಳಗೇರಾ, ಮಳ್ಳಿ, ನಾಗರಹಳ್ಳಿ, ಬಿರಾಳ (ಹಿಸ್ಸಾ) ಗ್ರಾಮಗಳ ಭತ್ತದ ಗದ್ದೆಗಳಿಗೆ ಭೇಟಿ ನೀಡಿದ ಕೃಷಿ ಅಧಿಕಾರಿಗಳು, ಮಳೆ ಮತ್ತು ಬಿರುಗಾಳಿಗೆ ನೆಲಕ್ಕೆ ಬಿದ್ದ ಭತ್ತದ ಬೆಳೆ ವೀಕ್ಷಿಸಿದರು. ನಂತರ ಕುರುಳಗೇರಾ ಗ್ರಾಮದಲ್ಲಿ ಹಾನಿಗೊಳಗಾದ ಭತ್ತದ ರೈತರನ್ನು ಭೇಟಿ ಮಾಡಿದ ಜಿಲ್ಲಾ ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಮಾತನಾಡಿ, ಕೂಡಲೇ ಗ್ರಾಮಲೆಕ್ಕಿಗರು ಹಾಗೂ ತಾಲೂಕು ಕೃಷಿ ಅಧಿ ಕಾರಿಗಳ ತಂಡದಿಂದ ಹಾನಿಗೊಳಗಾದ ಬೆಳೆಯನ್ನು ಸರ್ವೇ ಮಾಡಿಸಿ ಅದರ ಕುರಿತು ಸರಕಾರಕ್ಕೆ ಶೀಘ್ರದಲ್ಲಿ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ ಸದಸ್ಯ ದಂಡಪ್ಪ ಸಾಹು ಕುರುಳಗೇರಾ, ತಾಪಂ ಸದಸ್ಯ ಮಲ್ಲನಗೌಡ ಪಾಟೀಲ, ಜೇವರ್ಗಿ ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ಜವಳಗಿ, ವಿಎ ಮಹಿಬೂಬ ಟೇಲರ, ಅರವಿಂದ ಸಾಹು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next