Advertisement
ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯ ಚುನಾವಣಾ ಆಯೋಗ ರಾಜ್ಯದ 34 ಪಪಂಗಳಿಗೆ ಚುನಾವಣೆ ಘೋಷಿಸಿ ಸಕಲ ಸಿದ್ಧತೆಯಲ್ಲೂ ತೊಡಗಿದೆ. ಆದರೆ ಕಲಬುರಗಿ ಜಿಲ್ಲೆಯ ನೂತನ ತಾಲೂಕಾಗಿ ರಚನೆಗೊಂಡ ಯಡ್ರಾಮಿ, ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿ ವರ್ಷಗಳೇ ಉರಳಿವೆ. ಪಪಂಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಬಿಟ್ಟರೆ ಪಪಂಗೆ ಚುನಾವಣೆ ಮಾತ್ರ ನಡೆದಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಪಪಂ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
Related Articles
Advertisement
ಈಗಾಗಲೇ ಪಟ್ಟಣವನ್ನು 11 ವಾರ್ಡ್‌ಗಳನ್ನಾಗಿ ಜಿಲ್ಲಾ ನೋಡಲ್ ಎಂಜಿನಿಯರ್ ಅವರು ವಿಂಗಡಿಸಿದ್ದಾರೆ. ಇಲ್ಲಿನ ಚುನಾವಣೆ ನಡೆಸುವ ನಿರ್ಧಾರ ಸರ್ಕಾರದ ಹಂತದಲ್ಲಿ ನಡೆಯುವಂತದ್ದು. ಎರಡನೇ ಹಂತದಲ್ಲಿ ಚುನಾವಣೆ ಘೋಷಣೆ ಆಗಬಹುದು. -ಸಂತೋಷರೆಡ್ಡಿ, ಪಪಂ ಮುಖ್ಯಾಧಿಕಾರಿ, ಯಡ್ರಾಮಿ
ಶೀಘ್ರ ಚುನಾವಣೆ ನಡೆಸಿದರೆ ಪಟ್ಟಣ ಪಂಚಾಯತಿ ಮಾಡಿದ್ದಕ್ಕೂ ಅರ್ಥವಿರುತ್ತದೆ. ಕೇವಲ ಒಬ್ಬ ಆಡಳಿತಾಧಿಕಾರಿ ಸ್ಥಳೀಯ ಸಮಸ್ಯೆಗಳ ಬಗೆಗೆ ಗಮನಹರಿಸಲು ಸಾಧ್ಯವೇ?. ಸ್ಥಳೀಯ ಸಂಸ್ಥೆಗೆ ಸಂಪೂರ್ಣ ಚುನಾಯಿತ ಪ್ರತಿನಿಧಿಗಳಿದ್ದಾಗ ಮಾತ್ರ ಪಟ್ಟಣಕ್ಕೆ ಅನುಕೂಲ ಆಗಲಿದೆ. -ಆನಂದ ಯತ್ನಾಳ, ಬಿಜೆಪಿ ಯುವ ಮುಖಂಡ
ಬೇರೆ ಕಡೆಯ ಪಪಂಗಳಿಗೆ ಇದೇ ತಿಂಗಳು ನಡೆಯುವ ಚುನಾವಣೆಯಲ್ಲಿ ಯಡ್ರಾಮಿ ಪಪಂಗೂ ಚುನಾವಣೆ ನಡೆಯುತ್ತದೆ ಎಂಬ ಕನಸು ಇತ್ತು. ಆದರೆ ಚುನಾವಣೆ ಆಗುವತನಕ ಪಟ್ಟಣದಲ್ಲಿ ಯಾವ ಕೆಲಸಗಳು ನಡೆಯಲ್ಲ. ಕೂಡಲೇ ಸರ್ಕಾರ ಪಪಂಗೆ ಚುನಾವಣೆ ಘೋಷಿಸಬೇಕು. -ನಾಗಣ್ಣ ಹಾಗರಗುಂಡಗಿ, ಕಾಂಗ್ರೆಸ್ ಮುಖಂಡ
-ಸಂತೋಷ ಬಿ.ನವಲಗುಂದ