Advertisement

ಶಿಥಿಲಾವಸ್ಥೆಯಲ್ಲಿ ನಾಗರಳ್ಳಿ ಬಸ್‌ ತಂಗುದಾಣ

12:14 PM Jul 21, 2019 | Naveen |

ಯಡ್ರಾಮಿ: ಸುಮಾರು ವರ್ಷಗಳ ಹಿಂದೆ ನಿರ್ಮಾಣವಾದ ನಾಗರಹಳ್ಳಿ ಸಾರ್ವಜನಿಕ ತಂಗುದಾಣ ಶಿಥಿಲಾವಸ್ಥೆಯಲ್ಲಿದ್ದು, ನೂತನ ತಂಗುದಾಣ ನಿರ್ಮಿಸಲು ಜನಪ್ರತಿನಿಧಿಗಳಾಲಿ, ಅಧಿಕಾರಿಗಳಾಗಿ ಆಸಕ್ತಿ ತೋರುತ್ತಿಲ್ಲ.

Advertisement

ಮಳೆ, ಬಿಸಿಲು, ಗಾಳಿಗೆ ರಕ್ಷಣೆ ಪಡೆಯಲು ಪ್ರಯಾಣಿಕರು ತಂಗುದಾಣದಲ್ಲಿ ಜೀವ ಭಯದಿಂದಲೇ ಕುಳಿತುಕೊಳ್ಳುವಂತಾಗಿದೆ.

ಬಸ್‌ ತಂಗುದಾಣದ ಸ್ಥಿತಿ ಈ ರೀತಿಯಾದರೇ, ಸಾರ್ವಜನಿಕರಿಗೆ ಪ್ರಕೃತಿ ಕರೆಗೆ ಓಗೊಡಲು ಶೌಚಾಲಯದ ವ್ಯವಸ್ಥೆಯೂ ಇಲ್ಲ.

ನಾಗರಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಸುತ್ತಮುತ್ತಲಿನ ಗ್ರಾಮಗಳಾದ ಯಡ್ರಾಮಿ, ಶಹಾಪುರ, ಸಿಂದಗಿ, ವಿಜಯಪುರಕ್ಕೆ ಹೋಗುವ ಪ್ರಯಾಣಿಕರು ನಾಗರಹಳ್ಳಿ ಕ್ರಾಸ್‌ನಲ್ಲಿ ಬಸ್ಸುಗಳಿಗಾಗಿ ಕಾಯುತ್ತಾರೆ. ಈ ವೇಳೆ ಕೆಲ ಸಮಯ ತಂಗುದಾಣದಲ್ಲಿ ಕುಳಿತುಕೊಳ್ಳಲು ಹೋದಾಗ ಅದರ ಸ್ಥಿತಿ ನೋಡಿ ರಸ್ತೆಯಲ್ಲೇ ನಿಂತುಕೊಳ್ಳುತ್ತಾರೆ.

ಮಹಿಳಾ ಪ್ರಯಾಣಿಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ವಯಸ್ಸಾದವರು ಹೀಗೆ ಅನೇಕ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ತಂಗುದಾಣವಿಲ್ಲದೇ ಪ್ರದಾಡುವಂತಾಗಿದೆ.

Advertisement

ನಾಗರಹಳ್ಳಿ ಬಸ್‌ ತಂಗುದಾಣ ಕಟ್ಟಡ ಅನೇಕ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸದ್ಯ ಅದರ ಸ್ಥಿತಿ ಗಂಭೀರವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಹೋಗುವ ನನ್ನ ಸಹೋದ್ಯೋಗಿಗಳು, ಶಿಕ್ಷಕಿಯರಿಗೆ ತೀವ್ರ ತೊಂದರೆ ಇದೆ. ಬಿಸಿಲು ಮತ್ತು ಮಳೆಗೆ ರಕ್ಷಣೆ ಪಡೆಯಲು ಜೀವ ಕೈಯಲ್ಲಿ ಹಿಡಿದುಕೊಂಡೇ ನಿಲ್ಲಬೇಕಾದಂಥ ಪರಿಸ್ಥಿತಿ ಇಲ್ಲಿದೆ.
ನಿಂಗಣ್ಣ ದೊಡಮನಿ ಸಿಂದಗಿ,
ಶಿಕ್ಷಕ, ಗಾಂಧಿನಗರ, ಮಳ್ಳಿ ಪ್ರಾಥಮಿಕ ಶಾಲೆ

ಜಿಪಂ ಅನುದಾನದಲ್ಲಿ ಬಸ್‌ ತಂಗುದಾಣ ನಿರ್ಮಿಸಬೇಕು ಎಂದು ಬಹಳ ದಿನದಿಂದಲೇ ಯೋಚಿಸಿದ್ದೇವೆ. ಆದರೆ ಅಲ್ಲಿ ಜಾಗದ ಸಮಸ್ಯೆ ಇದೆ. ಕ್ರಾಸ್‌ನ ಅಕ್ಕಪಕ್ಕದಲ್ಲಿ ಅಂಗಡಿಗಳಿವೆ. ಒಂದಿಷ್ಟು ಸ್ಥಳ ನೀಡಿದರೆ ನೂತನ ತಂಗುದಾಣ ನಿರ್ಮಿಸಬಹುದು. ಇದಕ್ಕೆ ಯಾರೂ ಸಹಕರಿಸುತ್ತಿಲ್ಲ.
ದಂಡಪ್ಪ ಸಾಹು ಕುರುಳಗೇರಾ,
ಜಿಪಂ ಸದಸ್ಯ, ಯಡ್ರಾಮಿ

Advertisement

Udayavani is now on Telegram. Click here to join our channel and stay updated with the latest news.

Next